ಐಎಂಎ ಹಗರಣ: ಅಪಾರ್ಟ್‌ಮೆಂಟ್ ಮಾರಾಟ ಪ್ರಶ್ನಿಸಿ ಹೈಕೋರ್ಟ್ ಮೊರೆ
ಬೆಂಗಳೂರು ಏ.8: ಬಹುಕೋಟಿ ರೂಪಾಯಿಗಳ ಐ-ಮಾನಿಟರಿ ಅಡ್ವೈಸರಿ(ಐಎಂಎ) ಹಗರಣದ ಸಂಬಂಧ ಭಾರಿ ಬೆಲೆ ಬಾಳುವ ಅಪಾರ್ಟ್‌ಮೆಂಟ್ ಒಂದನ್ನು ಮಾರಾಟ ಮಾಡಲು ಅನುಮತಿ ನೀಡಿರುವ ವಿಶೇಷ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಐಎಂಎ ಕಂಪನಿಗಳ ಬಳಗದ ಪ್ರವರ್ತಕ ಮತ್ತು ಐಎಂಎ ಹಗರಣದ ಪ್ರಮುಖ ಆರೋಪಿ ಮೊಹಮ್ಮದ್ ಮನ್ಸೂರ್ ಖಾನ್ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಆ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರನ್ನೊಳಗೊಂಡ ವಿಭಾಗೀಯ ಪೀಠ, ರಾಜ್ಯ ಸರ್ಕಾರ ಮತ್ತು ಐಎಂಎ ಹಗರಣ ಪ್ರಕರಣಕ್ಕೆ ಕರ್ನಾಟಕ ಠೇವಣಿದಾರರ ಹಿತರಕ್ಷಣಾ ಕಾಯ್ದೆಯಡಿಯಲ್ಲಿ ನೇಮಕಗೊಂಡಿರುವ ಸಕ್ಷಮ ಪ್ರಾಧಿಕಾರಕ್ಕೆ(ಸಿಎ)ಗೆ ನೋಟಿಸ್ ಜಾರಿಗೊಳಿಸಿದೆ.
ಠೇವಣಿಯಲ್ಲ:
ಕೆಪಿಐಡಿಎಫ್‌ಇ ಕಾಯಿದೆಯಡಿಯಲ್ಲಿ ವ್ಯಾಖ್ಯಾನಿಸಲಾದ ಹೂಡಿಕೆಗಳು 'ಠೇವಣಿ' ವ್ಯಾಖ್ಯಾನದೊಳಗೆ ಬರುವುದಿಲ್ಲ ಎಂಬ ಐಎಂಎ ಮತ್ತು ಅದರ ಪ್ರವರ್ತಕರ ವಾದವನ್ನು ವಿಶೇಷ ನ್ಯಾಯಾಲಯ ಪುರಸ್ಕರಿಸಲು ವಿಫಲವಾಗಿದೆ ಎಂಬುದೂ ಸೇರಿದಂತೆ ಇತರ ಕಾರಣಗಳನ್ನು ಮೇಲ್ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಐಎಂಎ ಗುಂಪಿನ ಭಾಗವಾಗಿರುವ ಬಹುತೇಕ ಘಟಕಗಳು ಸೀಮಿತ ಹೊಣೆಗಾರಿಕೆ ಪಾಲುದಾರಿಕೆ ಸಂಸ್ಥೆಗಳು(ಎಲ್‌ಎಲ್‌ಪಿಗಳು)ಮತ್ತು ಎಲ್ಲಾ ಹೂಡಿಕೆದಾರರು ತಂದಿದ್ದರಿಂದ ಸಂಸ್ಥೆಗಳಲ್ಲಿ ಬಂಡವಾಳ ಕೊಡುಗೆಯ ಮೂಲಕ ಮಾಡಿದ ಹೂಡಿಕೆಯನ್ನು ಕೆಪಿಐಡಿಎಫ್‌ಇ ಕಾಯಿದೆಯಡಿಯಲ್ಲಿ "ಠೇವಣಿ" ವ್ಯಾಖ್ಯಾನದಿಂದ ನಿರ್ದಿಷ್ಟವಾಗಿ ಹೊರಗಿಡಲಾಗಿದೆ. 'ಬಂಡವಾಳ ಕೊಡುಗೆ (ಕ್ಯಾಪಿಟಲ್ ಕಾಂಟ್ರಿಬ್ಯೂಷನ್)'ಮೂಲಕ ಈ ಸಂಸ್ಥೆಗಳಿಗೆ ಹಣವನ್ನು ವಿವಿಧ ವಲಯಗಳಲ್ಲಿ 'ಹೂಡಿಕೆ' ಮಾಡಲಾಗಿದೆ. ಹಾಗಾಗಿ ಕೆಪಿಐಡಿಎಫ್‌ಇ ಕಾಯಿದೆಯು ಐಎಂಎ ಗುಂಪಿಗೆ ಅನ್ವಯಿಸುವುದಿಲ್ಲ ಎಂದು ಮೇಲ್ಮನವಿಯಲ್ಲಿ ವಿವರಿಸಲಾಗಿದೆ.

ಹೂಡಿಕೆದಾರರು ಮತ್ತು ಹೂಡಿಕೆ ಮಾಡಿದ ಘಟಕದ ನಡುವಿನ ಸಂಬಂಧವನ್ನು ತಿಳಿದುಕೊಳ್ಳುವ ಯಾವುದೇ ಪ್ರಯತ್ನವನ್ನು ಸರ್ಕಾರ ಮಾಡಿಲ್ಲ.ಕೆಪಿಐಡಿಎಫ್‌ಇ ಕಾಯಿದೆಯ ನಿಬಂಧನೆಗಳನ್ನು ಬಂಡವಾಳದ ಕೊಡುಗೆಗೆ ಹೂಡಿಕೆ ಮಾಡಲಾಗಿರುವುದರಿಂದ ಯಾವುದೇ ನಿಯಮಗಳು ಅನ್ವಯವಾಗುವುದಿಲ್ಲವೆಂದು ಮೇಲ್ಮನವಿಯಲ್ಲಿ ವಾದಿಸಲಾಗಿದೆ
ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ರಾಜ್ಯ ಸರ್ಕಾರ ಹೊರಡಿಸಿದ ಅಧಿಸೂಚನೆಗಳನ್ನು ಪ್ರಶ್ನಿಸಿರುವ ಆರೋಪಿ ತಿಲಕನಗರದ ಆಸ್ತಿಯನ್ನು ತಮ್ಮ ವೈಯಕ್ತಿಕ ಆದಾಯ ಮತ್ತು ಕಾನೂನು ಪ್ರಕಾರ ಇತರೆ ವ್ಯಾಪಾರ ಉದ್ಯಮಗಳಿಂದ ಬಂದ ಲಾಭದಿಂದ ಖರೀದಿಸಿದ್ದಾರೆ ಮತ್ತು ಆದರೆ ಅದನ್ನು ಜನರ ಠೇವಣಿ ಹಣದಿಂದ ಖರೀದಿಸಿದ ಆಸ್ತಿ ಎಂದು ಸಾಬೀತುಪಡಿಸುವಲ್ಲಿ ಸಿಎ ವಿಫಲವಾಗಿದೆ ಎಂದು ಆತನ ಪರ ವಕೀಲರು ವಾದ ಮಂಡಿಸಿದ್ದಾರೆ.
ಆಸ್ತಿ ಮುಟ್ಟುಗೋಲು:
ಬೆಂಗಳೂರಿನ ತಿಲಕನಗರದ ಬನ್ನೇರುಘಟ್ಟ ರಸ್ತೆ ಲೇಔಟ್‌ನಲ್ಲಿರುವ ಅಪಾರ್ಟ್‌ಮೆಂಟ್ ಅನ್ನು ಖಾನ್ ಅವರು 2014 ರಲ್ಲಿ ಖರೀದಿಸಿದ್ದಾರೆ. ಇದು ಹಲವಾರು ಇತರ ಸ್ಥಿರ ಆಸ್ತಿಗಳು ಮತ್ತು ಬ್ಯಾಂಕ್ ಖಾತೆಗಳಲ್ಲಿ ಒಂದಾಗಿದೆ. ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತರಕ್ಷಣಾ ಕಾಯಿದೆ (ಕೆಪಿಐಡಿಎಫ್ ಇ)2004ರ ಪ್ರಕಾರ ಈ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕೆಪಿಐಡಿಎಫ್‌ಇ ಪ್ರಕರಣಗಳಿಗಾಗಿ ಸ್ಥಾಪಿಸಲಾದ ವಿಶೇಷ ನ್ಯಾಯಾಲಯವು 2022ರ ಮಾ.7ರಂದು ಆದೇಶ ಹೊರಡಿಡಿಸಿದೆ.
Recommended Video
ಠೇವಣಿದಾರರಿಗೆ ಮರುಪಾವತಿಸಲು ಹಣದ ಮರುಪಾವತಿ ಮಾಡಲು ಎಲ್ಲ ಸ್ಥಿರ ಆಸ್ತಿಗಳನ್ನು ಮಾರಾಟ ಮಾಡುವಂತೆ ವಿಶೇಷ ನ್ಯಾಯಾಲಯವು ಸಕ್ಷಮ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿತ್ತು.ಅಲ್ಲದೆ, ವಿಶೇಷ ನ್ಯಾಯಾಲಯವು ಕೆಲವು ಬ್ಯಾಂಕ್ ಖಾತೆಗಳು ಮತ್ತು ಐಎಂಎಯ ಬ್ಯಾಂಕ್ ಠೇವಣಿ ಖಾತೆಯಲ್ಲಿ ನಿಂತಿರುವ ಮೊತ್ತವನ್ನು ಠೇವಣಿದಾರರಿಗೆ ವಿತರಿಸಲು ಸಕ್ಷಮ ಪ್ರಾಧಿಕಾರದ ಖಾತೆಗೆ ಸ್ವತ್ತುಗಳ ಮಾಲೀಕತ್ವ ವರ್ಗಾಯಿಸಿಕೊಳ್ಳಲೂ ಸಹ ನಿರ್ದೇಶನ ನೀಡಿದೆ.












Click it and Unblock the Notifications