ರೆಡ್ಡಿಗೆ ಬೆನ್ನುನೋವು: ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ

2 ವರ್ಷದಿಂದ ಚಂಚಲಗೂಡ ಜೈಲು ವಾಸಿಯಾಗಿರುವ ರೆಡ್ಡಿಗೆ ವಿಪರೀತ ಬೆನ್ನುನೋವಂತೆ. ಹಾಗಾಗಿ, ಅವರು ಬೆಂಗಳೂರಿಗೆ ದೌಡಾಯಿಸಿದ್ದಾರೆ. ಬೆನ್ನು ನೋವು ನಿವಾರಿಸಿಕೊಳ್ಳಲು ಹೆಚ್ಚು ಸುದ್ದಿ ಸದ್ದು ಮಾಡದೆ ನಿಮ್ಹಾನ್ಸ್ ಆಸ್ಪತ್ರೆಗೂ ದಾಖಲಾಗಿದ್ದಾರೆ.
ಗುರುವಾರ ಬೆಳಗ್ಗೆ 10 ಗಂಟೆಗೆ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಾದ ಜನಾರ್ದನ ರೆಡ್ಡಿಗೆ ನಿಮ್ಹಾನ್ಸ್ ವೈದ್ಯರು ತಕ್ಷಣ ತಪಾಸಣೆ ನಡೆಸಿ, ಚಿಕಿತ್ಸೆ ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಪತ್ನಿ ಅರುಣಾ ಲಕ್ಷ್ಮಿ, ಪುತ್ರಿ ಬ್ರಹ್ಣಿಣಿ, ಸಹೋದರ ಸೋಮಶೇಖರ ರೆಡ್ಡಿ ಅವರು ಜನಾರ್ದನ ರೆಡ್ಡಿ ಅವರ ಜತೆಗಿದ್ದರು.
ಚಿಕಿತ್ಸೆಯ ಬಳಿಕ ಜನಾರ್ದನ ರೆಡ್ಡಿ ಅವರನ್ನು ತಕ್ಷಣ ಬಿಗಿ ಭದ್ರತೆಯೊಂದಿಗೆ ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯಲಾಗಿದೆ.












Click it and Unblock the Notifications