ಮುಜರಾಯಿ ಇಲಾಖೆಯಲ್ಲಿ ವಯಸ್ಸಾದವರು ಸೇವೆ ಸಲ್ಲಿಸುತ್ತಿದ್ದರೆ ಅವರ ಮಕ್ಕಳಿಗೆ ಹುದ್ದೆ: ಸರ್ಕಾರ ಆದೇಶ

ಬೆಂಗಳೂರು, ನವೆಂಬರ್‌ 30: ಮುಜರಾಯಿ ಇಲಾಖೆಯ C ಗ್ರೇಡ್‌ ದೇವಾಲಯಗಳಲ್ಲಿ ಪೂಜೆ ಸಲ್ಲಿಸುವ ಅರ್ಚಕರಿಗೆ ವಯಸ್ಸಾಗಿದ್ದರೇ ಅಥವಾ ಅನಾರೋಗ್ಯಪೀಡಿತರಾಗಿ ಸೇವೆ ಸಲ್ಲಿಸಲಾಗದಿದ್ದರೆ ಅವರ ಮಕ್ಕಳನ್ನೇ ಈ ಹುದ್ದೆಗೆ ನೇಮಕಾತಿ ಮಾಡುವ ಕುರಿತು ರಾಜ್ಯ ಸರ್ಕಾರದ ಮಹತ್ವದ ಆದೇಶ ಹೊರಡಿಸಿದೆ.

ಹೌದು, ರಾಜ್ಯದಲ್ಲಿ 34 ಸಾವಿರಕ್ಕೂ ಅಧಿಕ 'ಸಿ' ಗ್ರೇಡ್‌ ದೇವಾಲಯಗಳಿವೆ. 'ಸಿ' ಗ್ರೇಡ್‌ ದೇವಾಲಯಗಳಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವವರು ನಿಧನರಾದರೆ ಮಾತ್ರ ಅಂಥವರ ಮಕ್ಕಳನ್ನು ಅನುಕಂಪದ ಆಧಾರದ ಮೇಲೆ ಅರ್ಚಕರ ಹುದ್ದೆಗೆ ನೇಮಕ ಮಾಡಲಾಗುತ್ತಿತ್ತು. ಆದರೆ, ಇನ್ನು ಮುಂದೆ ನಿಧನರಾಗದಿದ್ದರೂ, ಅನಾರೋಗ್ಯಕ್ಕೆ ತುತ್ತಾದರೆ, ಇಲ್ಲವೇ ವಯೋಸಹಜ ಸಮಸ್ಯೆಗಳಿಂದ ಅರ್ಚಕ ವೃತ್ತಿ ಮಾಡಲಾಗದಿದ್ದರೆ ಅಂತಹವರ ಮಕ್ಕಳನ್ನು ದೇವಾಲಯಗಳಲ್ಲಿಅರ್ಚಕರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಸಿದ್ದರಾಮಯ್ಯ ಅವರ ಸರ್ಕಾರ ಆದೇಶ ಹೊರಡಿಸಿದೆ.

If An Elderly Priest Is Serving, The Post Will Be Given To Children: Government Order

'ಸಿ' ವರ್ಗಗಳ ದೇವಾಲಯಗಳಲ್ಲಿ ವಂಶ ಪಾರಂಪರ್ಯ ವಾಗಿ ಪೂಜಾ ಕೈಂಕರ್ಯಗಳನ್ನು ನಿರ್ವಹಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿಅರ್ಚಕರು ನಿಧನರಾದರೆ ಅಥವಾ ವಯಸ್ಸಾಗಿದ್ದರೆ, ತೀವ್ರ ರೀತಿಯ ಅನಾರೋಗ್ಯದ ನಿಮಿತ್ತ ಅರ್ಚಕರಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದ ಸಂದರ್ಭಗಳಲ್ಲಿಅವರ ಅನುವಂಶಿಕ ಹಕ್ಕನ್ನು ಕಾನೂನುಬದ್ಧ ವಾರಸುದಾರರಿಗೆ ವಹಿಸಲು ಅವಕಾಶ ಕಲ್ಪಿಸಲಾಗಿದೆ. ಇದನ್ನು ಆಯಾ ತಾಲೂಕುಗಳ ತಹಸೀಲ್ದಾರ್‌ ಹಂತದಲ್ಲಿ ವರ್ಗಾವಣೆ ಮಾಡಲು ಅಧಿಕಾರ ನೀಡಿ ಆದೇಶ ಹೊರಡಿಸಲಾಗಿದೆ.

ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ 'ಸಿ' ವರ್ಗಗಳ ದೇವಾಲಯಗಳ ಅರ್ಚಕರು ಮರಣ ಹೊಂದಿದ ಸಂದರ್ಭದಲ್ಲಿಅವರ ಅನುವಂಶಿಕ ಹಕ್ಕನ್ನು ಅವರ ಕಾನೂನುಬದ್ಧ ವಾರಸುದಾರರಿಗೆ ವರ್ಗಾಯಿಸುವ ಬಗ್ಗೆ ತಹಸೀಲ್ದಾರ್‌ ಅವರಿಗೆ ಅಧಿಕಾರ ನೀಡಲಾಗಿದೆ.ಆದರೆ, ಅರ್ಚಕರು ವಯಸ್ಸಾದ ಸಂದರ್ಭದಲ್ಲಿ ಹಾಗೂ ತೀವ್ರ ರೀತಿಯ ಅನಾರೋಗ್ಯದ ನಿಮಿತ್ತ ಅರ್ಚಕರಾಗಿ ಕಾರ್ಯಧಿನಿರ್ವಹಿಸಲು ಸಾಧ್ಯವಾಗದೆ ಇರುವ ಸಂದರ್ಭಗಳಲ್ಲಿಯೂ ಅವರ ಅನು ವಂಶಿಕ ಹಕ್ಕನ್ನು ಕಾನೂನುಬದ್ಧ ವಾರಸುದಾರರಿಗೆ ವಹಿಸಲು ಅವಕಾಶ ಕಲ್ಪಿಸುವಂತೆ ಅರ್ಚಕ ಸಂಘ ಕೋರಿತ್ತು. ಸಂಘದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಪರಿಶೀಲಿಸಿ ಈ ನಿರ್ಧಾರಕ್ಕೆ ಮುಂದಾಗಿದೆ

ಷರತ್ತುಗಳೇನು?

1. ಅರ್ಚಕರು ವಯಸ್ಸಾದ ಸಂಧರ್ಭದಲ್ಲಿ ಅಥವಾ ತೀವ್ರ ರೀತಿ ಅನಾರೋಗ್ಯದ ಸಂಬಂಧ ವೈದ್ಯಕೀಯ ಧೃಢೀಕರಣ ಪಡೆಯತಕ್ಕದ್ದು

2. ಕಾನೂನುಬದ್ಧ ವಾರಸುದಾರರು ಅರ್ಚಕರು ಹುದ್ದೆಗೆ ಕಾಯ್ದೆ ಅಥವಾ ನಿಯಮಗಳಲ್ಲಿ ನಿಗಧಿಪಡಿಸಿರುವ ಅರ್ಹತೆ ಹೊಂದಿರತಕ್ಕದ್ದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+