Get Updates
Get notified of breaking news, exclusive insights, and must-see stories!

#ಮಿಟೂ: ಶೃತಿ ಹರಿಹರನ್‌ ಮೇಲೆ ಮೊಕದ್ದಮೆ ಹೂಡುತ್ತೇನೆಂದ ಅರ್ಜುನ್ ಸರ್ಜಾ

ಬೆಂಗಳೂರು, ಅಕ್ಟೋಬರ್ 20: ತಮ್ಮ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿರುವ ನಟಿ ಶೃತಿ ಹರಿಹರನ್‌ ಮೇಲೆ ಮಾನನಷ್ಟೆ ಮೊಕದ್ದಮೆ ಹೂಡುವುದಾಗಿ ನಟ ಅರ್ಜುನ್ ಸರ್ಜಾ ಹೇಳಿದ್ದಾರೆ.

'ವಿಸ್ಮಯ' ಕನ್ನಡ ಚಿತ್ರದ ಚಿತ್ರೀಕರಣದ ವೇಳೆ ಅರ್ಜುನ್ ಸರ್ಜಾ ಅವರು ನನ್ನ ಒಪ್ಪಿಗೆ ಇಲ್ಲದೆ ಅಸಭ್ಯವಾಗಿ ನನ್ನನ್ನು ತಬ್ಬಿಕೊಂಡಿದ್ದರು ಹಾಗೂ ಶೂಟಿಂಗ್‌ ಮುಗಿದ ನಂತರ ಖಾಸಗಿಯಾಗಿ ಭೇಟಿಯಾಗಲು ಕೇಳಿದ್ದರು ಎಂದು ನಟಿ ಶೃತಿ ಹರಿಹರನ್ ಅವರು ಆರೋಪ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಅರ್ಜುನ್ ಸರ್ಜಾ, ಶೃತಿ ಹರಿಹರನ್ ಅವರ ಆರೋಪಗಳೆಲ್ಲವೂ ಸುಳ್ಳು ಎಂದಿದ್ದಾರೆ. ಶೃತಿ ಅವರ ಆರೋಪಗಳನ್ನು ಕೇಳಿ ಆಘಾತವಾಗಿದೆ ಎಂದಿರುವ ಅವರು, ಇಷ್ಟು ವರ್ಷದ ಚಿತ್ರಜೀವನದಲ್ಲಿ ಈ ರೀತಿಯ ಕ್ಷಣ ನಾನು ಅನುಭವಿಸಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

I will go to court against Shruthi Hariharan: Arjun Sarja

ಶೃತಿ ಅವರು ಉದ್ದೇಶಪೂರ್ವಕವಾಗಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದಿರುವ ಅರ್ಜುನ್ ಸರ್ಜಾ. ಶೃತಿ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಂಡೇ ತೀರುವುದಾಗಿ ಹೇಳಿದ್ದಾರೆ.

ಶೃತಿ ಹೇಳಿದ ರೀತಿ ಯಾವುದೇ ಘಟನೆ ನಡೆದಿಲ್ಲ, 'ವಿಸ್ಮಯ' ಚಿತ್ರದಲ್ಲಿ ಗಂಡ-ಹೆಂಡತಿಯಾಗಿ ನಾವು ನಟಿಸಿದ್ದೆವು ಅದರಲ್ಲಿ ಬಹಳ ಉತ್ಕತೆಯ ದೃಶ್ಯಗಳಿದ್ದವು ಆದರೆ ನಾನೇ ಅದಕ್ಕೆ ಬೇಡ ಎಂದು ಹೇಳಿದೆ ಹಾಗಾಗಿ ನಿರ್ದೇಶಕರು ಅಂತಹಾ ದೃಶ್ಯಗಳನ್ನು ಚಿತ್ರೀಕರಿಸಲಿಲ್ಲ ಎಂದು ಅವರು ಹೇಳಿದ್ದಾರೆ.

#ಮಿಟೂ ಅಭಿಯಾನ ಉತ್ತಮವಾಗಿ ನಡೆಯುತ್ತಿದ್ದು, ಶೋಷಿತ ಮಹಿಳೆಯರಿಗೆ ಇದರಿಂದ ನ್ಯಾಯ ಸಿಗಬೇಕು ಆದರೆ ಈ ರೀತಿಯ ಸುಳ್ಳು ಆರೋಪಗಳಿಂದ ಅಭಿಯಾನ ಅರ್ಥ ಕಳೆದುಕೊಳ್ಳುತ್ತದೆ ಎಂದು ಅವರು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+