ನಾನು ಲೋಕಸಭೆ ಟಿಕೆಟ್ ಆಕಾಂಕ್ಷಿಯಲ್ಲ: ಎಸ್ ಎ ರಾಮದಾಸ್
ಕೊಪ್ಪಳ, ಅಕ್ಟೋಬರ್ 27: ನಾನು ಲೋಕಸಭೆ ಟಿಕೆಟ್ ಆಕಾಂಕ್ಷಿಯಲ್ಲ. ನಾನು ನನ್ನ ಕ್ಷೇತ್ರದಲ್ಲಿ ಬಿಜೆಪಿ ಅಧ್ಯಕ್ಷರನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದೇನೆ ಎಂದು ಮಾಜಿ ಸಚಿವ ಎಸ್ ಎ ರಾಮದಾಸ್ ಹೇಳಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಬಿಟ್ಟಿ ಯೋಜನೆಗಳು ಆದರೆ ಕೇಂದ್ರ ಸರಕಾರ ಜಾರಿ ತಂದಿರುವ ವಿಶ್ವಕರ್ಮ ಯೋಜನೆ ಬಿಟ್ಟಿ ಯೋಜನೆ ಅಲ್ಲ ಎಂದು ಮಾಜಿ ಸಚಿವ ಎಸ್ ಎ ರಾಮದಾಸ್ ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದಿರೋದು ಕರ್ನಾಟಕದ ದುರ್ದೈವ. ಜನರು 135 ಸ್ಥಾನ ನೀಡಿದರೂ ಅವರಿಗೆ ಆಂತರಿಕ ಯುದ್ಧ ಮಾಡುವಂತಹದ್ದು ಅವರ ಹಣೆ ಬರಹ ಬರೆದಿದೆ. ಅದಕ್ಕೆ ಸಂಬಂಧಿಸಿದಂತೆ ಅವರಿಗೆ ಜನರು ಲೋಕಸಭೆಯಲ್ಲಿ ಉತ್ತರ ಕೊಡುತ್ತಾರೆ ಎಂದರು. ಮೋದಿ ರಾಜ್ಯಕ್ಕೆ, ದೇಶಕ್ಕೆ ಏನೇನ್ ಕೊಟ್ಟಿದ್ದಾರೋ ಅದನ್ನು ತಲುಪಿಸಲು ಯಾವುದೇ ಸರಕಾರವಿರಲಿ ಕಟ್ಟಕಡೆಯ ವ್ಯಕ್ತಿಯನ್ನು ಗುರುತಿಸುತ್ತೇವೆ.ಅವರ ಹಾಗೆ ರಾಜಕಾರಣ ಮಾಡಿ ನಾವು ಬದುಕುತ್ತಿಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಗ್ಯಾರಂಟಿ ಯೋಜನೆ ಬಿಟ್ಟಿ ಊಟ ಮಾಡೋಕೆ ಆಗಿದೆ. ನಮ್ಮ ವಿಶ್ವಕರ್ಮ ಯೋಜನೆ ಬಿಟ್ಟಿ ಊಟ ಮಾಡೋಕೆ ಅಲ್ಲ. ನಮ್ಮ ಯೋಜನೆಗಳು ಸರಕಾರವನ್ನು ಬರ್ಬಾದ್ ಮಾಡುವಂತದ್ದಲ್ಲ. ಊಟಕ್ಕೆ ಏನು ಬಂಡವಾಳ ಬೇಕೋ ಅದನ್ನು ಕೊಡುತ್ತಿದ್ದೇವೆ. ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಗ್ಯಾರಂಟಿ ಯೋಜನೆಗೆ ಪರ್ಯಾಯ ಯೋಜನೆಯಲ್ಲ. ಅಲ್ಲದೆ ಇದು ಚುನಾವಣೆಗೂ ಸಂಬಂಧವಿಲ್ಲ ಎಂದು ಹೇಳಿದರುಉ.
ಇನ್ನೂ ಈ ವೇಳೆ ಸಂಸದ ಕರಡಿ ಸಂಗಣ್ಣ ಮಾತನಾಡಿ, ನವಿಲುಗರಿ ಬಳಸುವ ಮೌಲ್ವಿಗಳ ಮೇಲೆ ಕ್ರಮವಾಗಬೇಕು ಎಂಬ ಅರವಿಂದ ಬೆಲ್ಲದ ಹೇಳಿರುವುದು ಸರಿ. ಅರವಿಂದ ಬೆಲ್ಲದ ಒಂದು ಕಡೆ ಹೇಳಿರೋದು ಸತ್ಯವೆನಿಸುತ್ತದೆ. ಸರಕಾರ ಆ ಬಗ್ಗೆ ಕ್ರಮ ಕೈಗೊಳ್ಳಬೇಕು. ಹುಲಿ ಉಗುರಿನ ಪೆಂಡೆಂಟ್ ಪ್ರಕರಣದಲ್ಲಿ ಕಾನೂನು ಅಂದ್ರೆ ಎಲ್ಲರಿಗೂ ಒಂದೇ. ತಪ್ಪು ಮಾಡಿದರೆ ಎಲ್ಲರೂ ಶಿಕ್ಷೆಗೆ ಅರ್ಹರು. ಒಬ್ಬರಿಗೊಂದು, ಇನ್ನೊಬ್ಬರಿಗೊಂದು ಮಾಡೋದು ಸರಿಯಾದ ಕ್ರಮವಲ್ಲ ಎಂದರು.

ಎರಡೂವರೆ ವರ್ಷ ಒಬ್ಬೊಬ್ಬ ಸಿಎಂ ಎಂದು ಅವರ ಶಾಸಕರು ಹೇಳುತ್ತಿದ್ದಾರೆ.ಅದು ಅವರ ಪಕ್ಷದ ವಿಚಾರ. ಅವರ ಪಕ್ಷದವರು ಹೇಳಿರುವುದರಲ್ಲಿ ಸತ್ಯವಿರಬಹುದು ಎಂದರು.
ರಾಜ್ಯಕ್ಕೆ ಬಸವಣ್ಣ ಹೆಸರಿಡಬೇಕೆಂದು ಯತ್ನಾಳ ಹೇಳಿಕೆ ಸರಿ ಅಲ್ಲ. ವಿಜಯಪುರ ಬಸವಣ್ಣನವರ ಜನ್ಮ ಸ್ಥಳ ಹೀಗಾಗಿ ಅಲ್ಲಿಡಬೇಕು ನಿರ್ಧಾರವಾಗಬೇಕು. ಆದರೆ ಇಡೀ ರಾಜ್ಯಕ್ಕೆ ಹೆಸರಿಡಬೇಕೆನ್ನುವುದು ಸರಿ ಅಲ್ಲ ಎಂದರು.
ಇನ್ನೂ ಈ ವೇಳೆ ಕುಷ್ಟಗಿಯ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ನವಿಲು ಗರಿಗಳು ಮಸೀದಿಯಲ್ಲಾದರೂ ಇರಲಿ. ಗುಡಿಗಳಲ್ಲಾದರೂ ಇರಲಿ ವಶ ಪಡಿಸಿಕೊಳ್ಳಲಿ ಎಂದು ಹೇಳಿದರು. ಹುಲಿ ಉಗುರು ಧರಿಸಿರುವ ಪ್ರಕರಣವನ್ನು ರಾಜ್ಯ ಸರಕಾರ ಮುಚ್ಚಿ ಹಾಕುವ ಯತ್ನ ಮಾಡುತ್ತಿದೆ.ಸೆಲೆಬ್ರಿಟಿ ಗಳಾರೇ ಆಗಲಿ ಅವರ ಮೇಲೆ ಕ್ರಮ ಕೈಗೊಳ್ಳಲಿ.ಕೇವಲ ರೈತರ ಮೇಲೆ ಕ್ರಮ ಕೈಗೊಳ್ಳುತ್ತಿದ್ದಾರೆ. ಈ ವಿಷಯದಲ್ಲಿ ರಾಜ್ಯ ಸರಕಾರ ಕಣ್ಣಮುಚ್ಚಾಲೆ ಆಡುತ್ತಿದೆ ಎಂದು ಹೇಳಿದರು.
ಇದೇ ವೇಳೆ ರಾಜ್ಯ ಸರಕಾರ ಬದುಕಿಲ್ಲ. ರಾಜ್ಯದಲ್ಲಿ ತೀವ್ರ ಬರ, ವಿದ್ಯುತ್ ಸಮಸ್ಯೆ ಇದೆ. ಸಿಎಂ, ಸಚಿವರು ಬರ ಪ್ರದೇಶಕ್ಕೆ ಭೇಟಿ ನೀಡುತ್ತಿಲ್ಲ.ಈಗ ರಾಜ್ಯ ಸರಕಾರ ಕೇಂದ್ರಕ್ಕೆ 1700 ಕೋಟಿ ರೂಪಾಯಿ ಬೇಡಿಕೆ ಸಲ್ಲಿಸಿದೆ ಎಂದು ಆರೋಪಿಸಿದರು. ಸಿಎಂ ಸಿದ್ದರಾಮಯ್ಯ ಲವಲವಿಕೆಯಿಂದಲೇ ಸಿಎಂ ಬದಲಾಗಬಹುದು. ಅನುದಾನ ಕೊರತೆಯಿಂದ ಅಭಿವೃದ್ದಿ ಕಾರ್ಯಗಳಿಲ್ಲ ಸಿಎಂ ರಾಜ್ಯ ಪ್ರವಾಸ ಮಾಡುತ್ತಿಲ್ಲ ಎಂದರು. ಈ ಮೊದಲು ಬಿಜೆಪಿಯಿಂದ ಕಾಂಗ್ರೆಸ್ ಗೆ ಬರುತ್ತಾರೆ ಎನ್ನುತ್ತಿದ್ದರು. ಈಗ ಬಿಜೆಪಿಯವರು ಕಾಂಗ್ರೆಸ್ ರವರನ್ನು ಕರೆದು ಕೊಳ್ಳುತ್ತಿದ್ದಾರೆ ಎನ್ನುತ್ತಾರೆ.ಅಂತಹ ಯಾವುದೇ ಪ್ರಕ್ರಿಯೆ ಬಿಜೆಪಿಯಲ್ಲಿಲ್ಲ ಎಂದು ಹೇಳಿದರು.












Click it and Unblock the Notifications