Karnataka Elections Survey: ರಾಜ್ಯದ ಮತದಾರನಿಂದ ಮತ್ತೆ ಅತಂತ್ರ ಫಲಿತಾಂಶ? ಕಾಂಗ್ರೆಸ್ ಮೇಲುಗೈ, ಜೆಡಿಎಸ್ ಕಿಂಗ್ ಮೇಕರ್?

ಬೆಂಗಳೂರು,ಮೇ 10: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಶೇ 65.69 ರಷ್ಟು ಮತದಾನವಾಗಿದೆ. ಇದರ ಬೆನ್ನಲ್ಲೇ ಕರ್ನಾಟಕ ವಿಧಾನಸಭೆ ಚುನಾವಣೋತ್ತರ ಸಮೀಕ್ಷೆಗಳು ಒಂದರ ಹಿಂದೆ ಒಂದು ಬಿಡುಗಡೆಯಾಗಿದ್ದು, ಟೈಮ್ಸ್ ನೌ, ಎನ್​ಡಿಟಿವಿ, ಇಂಡಿಯಾ ಟುಡೆ ಸೇರಿದಂತೆ ವಿವಿಧ ಸುದ್ದಿಸಂಸ್ಥೆಗಳು ನಡೆಸಿರುವ ಮತಗಟ್ಟೆ ಸಮೀಕ್ಷೆಗಳ ಪ್ರಕಟಗೊಂಡಿದೆ.

ಇನ್ನೂ ಚುನಾವಣಾ ಮತದಾನಕ್ಕೂ ಮುನ್ನ ಹಲವು ಸಮೀಕ್ಷೆ ಹಾಗೂ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂದು ಹಲವು ತಂತ್ರಗಳನ್ನ ನಡೆಸಿದ್ದ ಬಿಜೆಪಿಗೆ ಹಲವು ಸಮೀಕ್ಷೆಗಳಿಂದ ಅಘಾತವಾಗಿದೆ. ಇನ್ನೂ ಈ ಬಾರಿ ಅಧಿಕಾರಕ್ಕೆ ಬರುವ ವಿಶ್ವಾಸದಲ್ಲಿರುವ ಕಾಂಗ್ರೆಸ್‌ ಸಹ ಹಲವು ಸಮೀಕ್ಷೆಗಳಲ್ಲಿ ಮೊದಲ ಸ್ಥಾನವನ್ನ ಪಡೆದುಕೊಂಡರು ಸ್ಪಷ್ಟ ಬಹುಮತ ಮಾತ್ರ ಯಾವ ಪಕ್ಷಕ್ಕೂ ಬರುವ ಸಾಧ್ಯತೆ ಕಡಿಮೆಯಾಗಿದೆ. ಹೀಗಾಗಿ ಈ ಬಾರೀಯೂ ದಳಪತಿಗಳೇ ಕಿಂಗ್‌ ಮೇಕರ್‌ ಆಗಲಿದ್ದಾರೆ ಎಂದು ಹಲವು ಸಮೀಕ್ಷೆಗಳಲ್ಲಿ ತಿಳಿದು ಬಂದಿದೆ.

hd kumarswamy

ರಿಪಬ್ಲಿಕ್ ಮತ್ತು ಪಿ-ಮಾರ್ಕ್ ಎಕ್ಸಿಟ್ ಪೋಲ್: ಯಾರಿಗೆ ಎಷ್ಟು ಸ್ಥಾನ?

ರಿಪಬ್ಲಿಕ್ ಮತ್ತು ಪಿ-ಮಾರ್ಕ್ ಸಂಸ್ಥೆಗಳು ನೀಡಿರುವ ಎಕ್ಸಿಟ್ ಪೋಲ್ ಪ್ರಕಾರ ಕರ್ನಾಟಕದಲ್ಲಿ ಅತಂತ್ರ ಫಲಿತಾಂಶ ಹೊರಬೀಳಲಿದೆ. ರಿಪಬ್ಲಿಕ್ ಮತ್ತು ಪಿ-ಮಾರ್ಕ್ ಸಂಸ್ಥೆಗಳು ನೀಡಿರುವ ಎಕ್ಸಿಟ್ ಪೋಲ್ ಪ್ರಕಾರ ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿ 85 ರಿಂದ 100 ಸ್ಥಾನದಲ್ಲಿ ಗೆಲುವು ಸಾಧಿಸಲಿದೆ. ಕಾಂಗ್ರೆಸ್ ಪಕ್ಷ 94 ರಿಂದ 108 ಸ್ಥಾನದಲ್ಲಿ ಗೆಲ್ಲಲಿದ್ದು, ಜೆಡಿಎಸ್ ಪಕ್ಷ 24 ರಿಂದ 32 ಸ್ಥಾನದಲ್ಲಿ ಗೆಲುವು ಸಾಧಿಸುವ ನಿರೀಕ್ಷೆ ಇದೆ. ಇನ್ನೊಂದು ಕಡೆ ಇತರರು 2ರಿಂದ 6 ಸ್ಥಾನದಲ್ಲಿ ಗೆಲ್ಲಬಹುದು ಎನ್ನಲಾಗಿದೆ. ಈ ಮೂಲಕ ಕರ್ನಾಟಕದಲ್ಲಿ ಈ ಬಾರಿಯೂ ಅತಂತ್ರ ಪರಿಸ್ಥಿತಿ ಸೃಷ್ಟಿಯಾಗುವ ಸಾಧ್ಯತೆ ಹೆಚ್ಚಾಗಿದೆ.

ಪೋಲ್ ಸ್ಟಾರ್ಟ್ ಸಮೀಕ್ಷೆ ಹೇಳಿದ್ದೇನು?

ಪೋಲ್ ಸ್ಟಾರ್ಟ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್‌ 99ರಿಂದ 109 ಸ್ಥಾನಗಳನ್ನು ಗೆಲ್ಲಲಿದೆ ಎಂದು ತಿಳಿಸಿದ್ದು, ಬಿಜೆಪಿ ಪಕ್ಷ 88ರಿಂದ 98 ಸ್ಥಾನಗಳಿಗೆ ತೃಪ್ತಿಪಡಲಿದೆ. ಇನ್ನು ಜೆಡಿಎಸ್ 21ರಿಂದ 26 ಸ್ಥಾನಗಳಲ್ಲಿ ಗೆಲ್ಲಲಿದೆ. ಇನ್ನೂ ಪಕ್ಷೇತರರು 0ರಿಂದ 4 ಸ್ಥಾನಗಳಲ್ಲಿ ಜಯ ಗಳಿಸಲಿದೆ ಎಂದು ಹೇಳಲಾಗಿದೆ.

TV 9 ಭಾರತ್‌ವರ್ಷ- ಪೋಲ್‌ಸ್ಟ್ರಾಟ್ ಸಮೀಕ್ಷೆಯಲ್ಲಿ ಯಾರಿಗೆ ಜಯ?

TV 9 ಭಾರತ್‌ವರ್ಷ- ಪೋಲ್‌ಸ್ಟ್ರಾಟ್ ಎಕ್ಸಿಟ್ ಪೋಲ್ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್ 99 ರಿಂದ 109 ಕ್ಷೇತ್ರಗಳಲ್ಲಿ ಗೆಲುವು ಕಾಣಲಿದ್ದು, ಆಡಳಿತರೂಢ ಬಿಜೆಪಿ 88 ರಿಂದ 98 ಸ್ಥಾನಗಳಲ್ಲಿ ಗೆಲ್ಲಲಿದೆ. ಇನ್ನೂ ಜೆಡಿಎಸ್‌ 21ರಿಂದ 26 ಸ್ಥಾನಗಳನ್ನು ಪಡೆಯಲಿದೆ. ಇತರರು ನಾಲ್ಕು ಸ್ಥಾನಗಳನ್ನು ಗೆಲ್ಲಬಹುದು ಎಂದು ಎಕ್ಸಿಟ್ ಪೋಲ್ ತಿಳಿಸಿದೆ.

Jan Ki Baat ಸಂಸ್ಥೆ ಹಾಗೂ ಸುವರ್ಣ ಕನ್ನಡ ಟಿವಿ ಹೇಳಿದ್ದೇನು?

Jan Ki Baat ಸಂಸ್ಥೆ ಹಾಗೂ ಸುವರ್ಣ ಕನ್ನಡ ಟಿವಿ ಮಾಡಿರುವ ಎಕ್ಸಿಟ್‌ ಪೋಲ್‌ ಸಮೀಕ್ಷೆ ಪ್ರಕಾರ ಬಿಜೆಪಿಗೆ 94ರಿಂದ 117 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದೆ. ಅಲ್ಲದೆ ಕಾಂಗ್ರೆಸ್‌ 91ರಿಂದ 106 ಹಾಗೂ ಜೆಡಿಎಸ್‌ 14ರಿಂದ 24 ಸ್ಥಾನಗಳನ್ನು ಪಡೆಯಲಿದ್ದು, ಇತರರು 2 ಸ್ಥಾನಗಳು ಬರಲಿದೆ ಎಂದು ಹೇಳಿದೆ.

vidhana soudha

ಟೈಮ್ಸ್ ನೌ ಸಮೀಕ್ಷೆಯಲ್ಲಿ ಯಾರಿಗೆ ಜಯ?

ಟೈಮ್ಸ್ ನೌ ನಡೆಸಿದ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಸಿಕ್ಕಿದೆ. ಸಮೀಕ್ಷೆ ಪ್ರಕಾರ ಕಾಂಗ್ರೆಸ್ +113 ಹಾಗೂ ಬಿಜೆಪಿಗೆ - 85, ಜೆಡಿಎಸ್‌ಗೆ +23, ಪಕ್ಷೇತರರು 3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ.

ಎಬಿಪಿ ನ್ಯೂಸ್-ಸಿವೋಟರ್ ಸಮೀಕ್ಷೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು?

ಎಬಿಪಿ ನ್ಯೂಸ್-ಸಿವೋಟರ್ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್‌ಗೆ ಬಹುಮತ ಸಿಗಲಿದೆ. ಸಮೀಕ್ಷೆ ಪ್ರಕಾರ ಕಾಂಗ್ರೆಸ್‌ 81ರಿಂದ 101 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಇನ್ನೂ ಬಿಜೆಪಿ 66 ರಿಂದ 86 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದ್ದರೆ, ಜೆಡಿಎಸ್ 20ರಿಂದ 27 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ ಎಂದು ಅಂದಾಜಿಸಲಾಗಿದೆ.

ಸೌತ್ ಫಸ್ಟ್ ಎಕ್ಸಿಟ್ ಪೋಲ್ ಸರ್ವೆ ಹೇಳಿದೆಷ್ಟು?

ಸೌತ್ ಫಸ್ಟ್ ಎಕ್ಸಿಟ್ ಪೋಲ್ ಸರ್ವೆ ಪ್ರಕಾರ ಕಾಂಗ್ರೆಸ್ ಈ ಬಾರಿ 107 ರಿಂದ 119 ಸ್ಥಾನಗಳಲ್ಲಿ ಗೆಲುವು ಪಡೆಯಲಿದೆ. ಆಡಳಿತಾರೂಢ ಬಿಜೆಪಿ 78 ರಿಂದ 90 ಸ್ಥಾನಗಳನ್ನಷ್ಟೇ ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ. ಜೆಡಿಎಸ್ 23 ರಿಂದ 29 ಸ್ಥಾನಗಳನ್ನು ಪಡೆಯಲಿದ್ದು, ಇತರೆ 1-3 ಸ್ಥಾನಗಳು ಬರಬಹುದು ಎಂದು ಹೇಳಿದೆ.

ನ್ಯೂಸ್‌ ನೇಷನ್‌ ಸಮೀಕ್ಷೆಯಲ್ಲಿ ಯಾರಿಗೆ ಜಯ?

ನ್ಯೂಸ್‌ ನೇಷನ್‌ ಸಮೀಕ್ಷೆ ಪ್ರಕಾರ ಬಿಜೆಪಿ 114 ಸ್ಥಾನ ಪಡೆದರೆ, ಕಾಂಗ್ರೆಸ್‌ 86 ಸ್ಥಾನಗಳನ್ನು ಪಡೆಯಲಿದೆ, ಜೆಡಿಎಸ್‌ 21 ಸ್ಥಾನಗಳನ್ನು ಪಡೆಯಲಿದೆ ಹಾಗೂ ಇತರೆ 3 ಸ್ಥಾನಗಳನ್ನು ಪಡೆಯಲಿದೆ ಎಂದು ತಿಳಿಸಿದೆ.

ಝೀ ನ್ಯೂಸ್ ಸಮೀಕ್ಷೆಯಲ್ಲಿ ಕೈಗೆ ಅಧಿಕಾರ

ಕಾಂಗ್ರೆಸ್‌ಗೆ 103ರಿಂದ 118 ಸ್ಥಾನಗಳು ಬರಲಿವೆ ಎಂದು ಝೀ ನ್ಯೂಸ್ ಸಮೀಕ್ಷೆ ತಿಳಿಸಿದ್ದು, ಸ್ಪಷ್ಟ ಬಹುಮತದತ್ತ ಸಾಗಲಿದೆ ಎಂದು ಹೇಳಲಾಗಿದೆ. ಇನ್ನು ಬಿಜೆಪಿ ಪಕ್ಷ 79ರಿಂದ 94 ಸ್ಥಾನಗಳನ್ನು ಮಾತ್ರ ಗಳಿಸಲಿದೆ. ಇನ್ನು ಜೆಡಿಎಸ್ 25ರಿಂದ 33 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳಲಿದೆ. ಅಲ್ಲದೇ ಪಕ್ಷೇತರರು 2ರಿಂದ 5 ಸ್ಥಾನಗಳಲ್ಲಿ ಜಯ ಗಳಿಸಲಿದ್ದಾರೆ.

ಟಿ.ವಿ 9 ಮತ್ತು ಸಿ ವೋಟರ್ ಸಮೀಕ್ಷೆಯಲ್ಲಿ ಹೇಳಿದೆಷ್ಟು?

ಟಿ.ವಿ 9 ಮತ್ತು ಸಿ ವೋಟರ್ ನಡೆಸಿದ ಚುನಾವಣೋತ್ತರ ಸಮೀಕ್ಷೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ 100-112 ಸ್ಥಾನಗಳನ್ನು ಪಡೆದಿದ್ದರೆ, ಬಿಜೆಪಿ 83-95 ಸ್ಥಾನಗಳನ್ನು ಪಡೆದಿದೆ ಇನ್ನು ಜೆಡಿಎಸ್‌ 21-29 ಸ್ಥಾನಗಳನ್ನು ಪಡೆದಿದ್ದು, ಇತರರು 02-06 ಸ್ಥಾನಗಳನ್ನು ಪಡೆಯಲಿದೆ ಎಂದು ಟಿವಿ 9 ಮತ್ತು ಸಿ ವೋಟರ್ ಚುನಾವಣೋತ್ತರ ಸಮೀಕ್ಷೆಯಲ್ಲಿ ತಿಳಿಸಿದೆ.

ಇಂಡಿಯಾ ಟುಡೇ ಸಮೀಕ್ಷೆಯಲ್ಲಿ ಯಾರಿಗೆ ಎಷ್ಟು ಸ್ಥಾನ?

ಇಂಡಿಯಾ ಟುಡೇ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ 122-140, ಬಿಜೆಪಿ 62-80, ಜೆಡಿಎಸ್‌ 20-25, ಇತರರು 0-3 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಸರ್ವೆ ಮೂಲಕ ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+