ಎಲೈಟ್ 'ಮಿಸ್ ಇಂಡಿಯಾ' ಸ್ಪರ್ಧೆಗೆ ಹುಬ್ಬಳ್ಳಿ ಹುಡುಗಿ ಆಯ್ಕೆ
ಹುಬ್ಬಳ್ಳಿ, ನವೆಂಬರ್, 19 : ಪ್ರಸಕ್ತ ವರ್ಷದ ಎಲೈಟ್ ಇಂಡಿಯಾ ಪೆಜಂಟ್ ಪ್ರಾಯೋಜಿಸಿದ 'ಮಿಸ್ ಇಂಡಿಯಾ-2015' ಸ್ಪರ್ಧೆಗೆ ಹುಬ್ಬಳ್ಳಿಯ ಪ್ರಿಯಾಂಕ ಕೋಳ್ವೇಕರ ಅಂತಿಮ ಹಂತಕ್ಕೆ ತಲುಪಿದ್ದಾರೆ.
ಅಂತಿಮ ಹಂತದಲ್ಲಿ ಒಟ್ಟು 21 ಸ್ಪರ್ಧಿಗಳು ಆಯ್ಕೆಯಾಗಿದ್ದಾರೆ. ರಾಜ್ಯದಿಂದ ಆಯ್ಕೆಗೊಂಡ ಮೂವರಲ್ಲಿ ಪ್ರಿಯಾಂಕ ಕೂಡ ಒಬ್ಬರು. ಇನ್ನಿಬ್ಬರು ಸ್ಪರ್ಧಾಳುಗಳಲ್ಲಿ ಒಬ್ಬರು ಬೆಂಗಳೂರಿನವರು, ಮತ್ತೊಬ್ಬರು ಮಡಿಕೇರಿಯವರು. ನವೆಂಬರ್ 21 ರಂದು ಅಂತಿಮ ಆಯ್ಕೆ ನಡೆಯಲಿದೆ.[ಪಂಚಕ್ಷೇತ್ರದ ಸಾಧಕಿ 'ಪಂಚಮಿ'ಗೆ ಪ್ರಪಂಚವೇ ಬೆರಗು]

ಸದ್ಯ ನವದೆಹಲಿಯಲ್ಲಿ ನಡೆಯುತ್ತಿರುವ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವ ಪ್ರಿಯಾಂಕ, ನಗರದ ಕೆಎಲ್ ಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕಾನಿಕಲ್ ಎಂಜಿನಿಯರ್ ಪದವಿ ಪಡೆದಿದ್ದು, ಐಬಿಎಂಆರ್ ನಲ್ಲಿ ಪ್ರಥಮ ವರ್ಷದ ಎಂಬಿಎ ವ್ಯಾಸಂಗ ಮಾಡುತ್ತಿದ್ದಾರೆ
ಹುಬ್ಬಳ್ಳಿಯ ಮುರಾರ್ಜಿ ನಗರದ ನಿವಾಸಿಯಾದ ಈಕೆಯ ತಂದೆ ಗಣಪತಿ ಬಂಗಾರ ಕುಸರಿ ಕೆಲಸ ನಿರ್ವಹಿಸುತ್ತಿದ್ದಾರೆ. ತಾಯಿ ಮಂಗಳಾ ಅವರು ಲ್ಯಾಮಿಂಗ್ಟನ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಈ ಹಿಂದೆ "ಮಿಸ್ ಮಂಗಳೂರು', "ಮಿಸ್ ಕರ್ನಾಟಕ" ಸ್ಪರ್ಧೆಗಳಲ್ಲಿ ಪಾಲ್ಗೊಂಡು ಗೆಲುವಿನ ಸೆಮಿಫೈನಲ್ ಹಂತದವರೆಗೂ ತಲುಪಿದ್ದ ಪ್ರಿಯಾಂಕ ಈ ಬಾರಿ 'ಮಿಸ್ ಇಂಡಿಯಾ ಸ್ಪರ್ಧೆಯನ್ನು ಗೆದ್ದೇ ಗೆಲ್ಲುತ್ತೇನೆ' ಎಂಬ ಆತ್ಮವಿಶ್ವಾಸ ಹೊಂದಿದ್ದಾರೆ. ಐದು ವರ್ಷಗಳಿಂದ ಮಾಡೆಲ್ ಲೋಕದಲ್ಲಿ ತಮ್ಮದೇ ಆದ ಹೆಸರು ಮಾಡಿಕೊಂಡಿರುವ ಪ್ರಿಯಾಂಕಗೆ ಚಲನಚಿತ್ರಗಳಲ್ಲಿ ನಟಿಸಲು ಸಾಕಷ್ಟು ಅವಕಾಶಗಳು ಬಂದಿವೆ.












Click it and Unblock the Notifications