ಹುಬ್ಬಳ್ಳಿ: ಹಾಸ್ಟೆಲ್ ಅವ್ಯವಸ್ಥೆ ಸರಿಪಡಿಸಲು ಆಗ್ರಹಿಸಿ ಬೃಹತ್ ಜಾಥಾ
ಹುಬ್ಬಳ್ಳಿ, ಅಕ್ಟೋಬರ್, 06 : ಅಹಿಂದ ವಿದ್ಯಾರ್ಥಿಗಳು ಶುಲ್ಕ ವಿನಾಯ್ತಿ, ಹಾಸ್ಟೆಲ್ ಇನ್ನಿತರ ಸಮಸ್ಯೆಗಳಲ್ಲಿ ಸಿಲುಕಿರುವುದನ್ನು ಗಮನಿಸಿದ ಎಬಿವಿಪಿ ಮಂಗಳವಾರ 'ಶಿಕ್ಷಣದ ಪರಿವರ್ತನೆಗಾಗಿ' ಎಂಬ ಬೃಹತ್ ಜಾಥಾ ಹಮ್ಮಿಕೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು.
ನಗರದ ವಿದ್ಯಾನಗರದ ರಾಯ್ಕರ್ ಮೈದಾನದಿಂದ ಆರಂಭವಾದ ಬೃಹತ್ ಜಾಥಾ ಕಿತ್ತೂರು ಚೆನ್ನಮ್ಮ ವೃತ್ತದ ಬಳಿ ಕೊನೆಗೊಂಡಿದ್ದು, ಈ ಸಂದರ್ಭದಲ್ಲಿ ಸಹಿಂದ ವಿದ್ಯಾರ್ಥಿಗಳ ಹಾಸ್ಟೆಲ್ ಅವ್ಯವಸ್ಥೆ ವಿರುದ್ಧ ಎಬಿವಿಪಿ ಕಾರ್ಯಕರ್ತರು ದನಿ ಎತ್ತಿದರು. ಇದರಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.[ವಿಜಯವಾಡ-ಹುಬ್ಬಳ್ಳಿ ನೂತನ ರೈಲಿನ ವೇಳಾಪಟ್ಟಿ]

ಅಲ್ಪಸಂಖ್ಯಾತರು, ಹಿಂದುಳಿದ ವರ್ಗ ಹಾಗೂ ದಲಿತರ ಅಭಿವೃದ್ಧಿ ಹೆಸರಿನಲ್ಲಿ ಅಧಿಕಾರ ಗದ್ದುಗೆ ಏರಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಈ ವರ್ಗದ ವಿದ್ಯಾರ್ಥಿಗಳಿಗೆ ಯಾವುದೇ ಸಹಾಯ ನೀಡುತ್ತಿಲ್ಲ. ರಾಜ್ಯದ ಕಾಂಗ್ರೆಸ್ ಶಿಕ್ಷಣ ವಿರೋಧಿ ನೀತಿ ಅನುಸರಿಸುತ್ತಿದೆ. ಅಹಿಂದ ವರ್ಗದ ವಿದ್ಯಾರ್ಥಿಗಳಿಗಿದ್ದ ಶುಲ್ಕ ವಿನಾಯ್ತಿಯನ್ನು ಕಿತ್ತುಕೊಂಡಿದೆ ಎಂದು ಎಬಿವಿಪಿ ಕಾರ್ಯಕರ್ತರು ಕಿಡಿಕಾರಿದರು.
ಹಿಂದುಳಿದ ವರ್ಗಗಳ ಹಾಸ್ಟೆಲ್ ಗಳು ವಿದ್ಯಾರ್ಥಿಗಳಿಗೆ ಜೈಲಿನಂತೆ ಭಾಚವಾಗುತ್ತಿದೆ. ವಿದ್ಯಾರ್ಥಿಗಳಿಗೆ ಬರಬೇಕಾಗಿದ್ದ ಹಾಸಿಗೆ ದಿಂಬುಗಳು ಇನ್ನೂ ತಲುಪಿಲ್ಲ. ಇಡೀ ರಾಜ್ಯದಲ್ಲಿ 362 ಸರ್ಕಾರಿ ಕಾಲೇಜುಗಳಿವೆ. ಅದರಲ್ಲಿ ಅರ್ಧಕ್ಕಿಂತಲೂ ಅಧಿಕ ಕಾಲೇಜುಗಳು ಅವ್ಯವಸ್ಥೆಯಲ್ಲಿ ತೊಳಲಾಡುತ್ತಿವೆ. ಇದನ್ನು ಸರಿಪಡಿಸಲು ಮುಖ್ಯಮಂತ್ರಿ ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ.












Click it and Unblock the Notifications