ವಾಹನ ಸವಾರರಿಗೆ ನಂಬರ್ ಪ್ಲೇಟ್ ವಿಚಾರದಲ್ಲಿ ಬಂಪರ್ ಆಫರ್ ಕೊಟ್ಟ ಸಿದ್ದರಾಮಯ್ಯ ಅವರ ಸರ್ಕಾರ!

ವಾಹನಕ್ಕೆ ಹೊಸ ನಂಬರ್ ಪ್ಲೇಟ್ ಹಾಕಿಸಲು ಇಷ್ಟುದಿನ ವಾಹನಗಳ ಮಾಲೀಕರು ತೀವ್ರ ಪರದಾಟ ಪಟ್ಟರು. ಇದೀಗ ವಾಹನ ಸವಾರರ ಪರದಾಟಕ್ಕೆ ಕೊನೆಗೂ ಬ್ರೇಕ್ ಹಾಕಿದೆ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ. ಪ್ರೇಮಿಗಳ ದಿನಾಚರಣೆ ದಿನವೇ, ವಾಹನ ಪ್ರೇಮಿಗಳಿಗೆ ಈಗ ಸಿಹಿಸುದ್ದಿ ಸಿಕ್ಕಿದೆ. ಹಾಗಾದರೆ ಎಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಅಳವಡಿಕೆಗೆ ಮತ್ತೆ ಎಷ್ಟು ದಿನಗಳ ಟೈಂ ಸಿಕ್ಕಿದೆ ಗೊತ್ತಾ? ಡೆಡ್‌ಲೈನ್ ಎಷ್ಟು ತಿಂಗಳು ಮುಂದೂಡಿಕೆ ಆಗಿದೆ? ಬನ್ನಿ ತಿಳಿಯೋಣ.

ಈಗ ಖುದ್ದಾಗಿ ಸಾರಿಗೆ ಸಚಿವರೇ ಈ ಬಗ್ಗೆ ಮಾಹಿತಿ ನೀಡಿದ್ದು, ಎಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಅಳವಡಿಕೆಗಾಗಿ ಫಿಕ್ಸ್ ಆಗಿದ್ದ 2024ರ ಫೆಬ್ರವರಿ 17ರ ಡೆಡ್‌ಲೈನ್ ಅನ್ನ ಈಗ ಮುಂದೂಡಿಕೆ ಮಾಡಲಾಗಿದೆ. ಬರೋಬ್ಬರಿ 3 ತಿಂಗಳ ಕಾಲ ಇದೀಗ ಡೆಡ್‌ಲೈನ್ ಮುಂದೆ ಹಾಕಿದೆ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ. ಈ ಬಗ್ಗೆ ಕರ್ನಾಟಕ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರೇ ಮಾಹಿತಿ ನೀಡಿದ್ದಾರೆ. ಈ ಮೂಲಕ ಕರ್ನಾಟಕದ ವಾಹನಗಳ ಸವಾರರಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ. ಹಾಗಾದರೆ ಹೊಸ ಡೆಡ್‌ಲೈನ್ ಯಾವುದು? ಆ ಬಗ್ಗೆ ಮಾಹಿತಿಗೆ ಮುಂದೆ ಓದಿ.

HSRP Number Plate Installation Deadline Extended in Karnataka: Know the Last date

ವಾಹನ ಸವಾರರೇ ಇಲ್ಲಿ ಗಮನಿಸಿ!

ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ನಡೆದ ಸಾರಿಗೆ ಇಲಾಖೆ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಈ ಬಗ್ಗೆ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ಮಾಹಿತಿ ನೀಡಿದ್ದು ವಾಹನ ಸವಾರರಿಗೆ ಇದರಿಂದ ಬಿಗ್ ರಿಲೀಫ್ ಸಿಕ್ಕಿದೆ. ಇದೀಗ ನೀಡಿದಂತೆ 2024ರ ಫೆಬ್ರವರಿ 17ರ ಒಳಗಾಗಿ ವಾಹನ ಸವಾರರು ತಮ್ಮ, ತಮ್ಮ ವಾಹನಗಳಿಗೆ ಎಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಅಳವಡಿಕೆ ಮಾಡಬೇಕಿತ್ತು. ಆದ್ರೆ ಈಗ ಮತ್ತೊಮ್ಮೆ 3 ತಿಂಗಳ ಕಾಲಾವಧಿಗೆ ವಿಸ್ತರಣೆ ಮಾಡಲಾಗಿದೆ. ಇದುವೆರಗೂ ಡೆಡ್‌ಲೈನ್ ದಿನಾಂಕವನ್ನು ಸ್ಪಷ್ಟವಾಗಿ ತಿಳಿಸಿಲ್ಲ, ಈ ಹಿನ್ನೆಲೆ ಭಾರಿ ಕುತೂಹಲ ಮೂಡಿದೆ.

1 ಸಾವಿರ ರೂಪಾಯಿ ದಂಡ

ಎಚ್‌ಎಸ್‌ಆರ್‌ಪಿ ಪ್ಲೇಟ್ ಅಳವಡಿಕೆ ಮಾಡದಿದ್ದರೆ ದಂಡ ಗ್ಯಾರಂಟಿ ಎಂಬುದು ಕೂಡ ವಾಹನ ಸವಾರರಿಗೆ ತಲೆನೋವು ತರಿಸಿತ್ತು. ಫೆಬ್ರವರಿ 17ಕ್ಕೆ ಗಡುವು ಮುಗಿದ ನಂತರ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಇಲ್ಲದಿದ್ದ ವಾಹನದ ಮಾಲಿಕರಿಗೆ ದಂಡ ವಿಧಿಸುವುದಾಗಿ ಸಾರಿಗೆ ಇಲಾಖೆಯೂ ಎಚ್ಚರಿಕೆ ನೀಡಿತ್ತು. ಎಚ್‌ಎಸ್‌ಆರ್‌ಪಿ ನಿಯಮದ, ಮೊದಲ ಬಾರಿ ಉಲ್ಲಂಘನೆಗಾಗಿ 1 ಸಾವಿರ ರೂಪಾಯಿ ದಂಡ. ನಂತರದ ಉಲ್ಲಂಘನೆಗೆ ಪ್ರತಿ ಬಾರಿ ಕೂಡ, 1 ಸಾವಿರ ರೂಪಾಯಿ ದಂಡ ಗ್ಯಾರಂಟಿ ಆಗಿತ್ತು.

HSRP Number Plate Installation Deadline Extended in Karnataka: Know the Last date

ಹೀಗಿದ್ದಾಗ ಸರ್ವರ್‌ ಸಮಸ್ಯೆ ಸೇರಿ ಹಲವು ಕಾರಣದಿಂದ, ಎಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಅಳವಡಿಕೆ ಕಷ್ಟವಾಗಿತ್ತು. ಹೀಗಾಗಿಯೇ ವಾಹನಗಳ ಸವಾರರು ಕೂಡ ಈ ಕುರಿತು, ಕರ್ನಾಟಕ ಸರ್ಕಾರಕ್ಕೆ ಒತ್ತಾಯ ಮಾಡಿದ್ದರು. ಇದೀಗ 3 ತಿಂಗಳು ಮುಂದಕ್ಕೆ ಹೋಗಿರುವ ಡೆಡ್‌ಲೈನ್, ಕರ್ನಾಟಕದ ವಾಹನ ಸವಾರರಿಗೆ ದೊಡ್ಡ ರಿಲೀಫ್ ನೀಡಿದೆ. ಹಾಗೇ ಹೊಸ ಡೆಡ್‌ಲೈನ್ ಯಾವಾಗ? ಅನ್ನೋದು ಇನ್ನೇನು ಕೆಲ ಹೊತ್ತಲ್ಲಿ ಅಧಿಕೃತವಾಗಿ ಗೊತ್ತಾಗಲಿದೆ. ಈ ಮೂಲಕ ವಾಹನ ಸವಾರರಿಗೆ ನಂಬರ್ ಪ್ಲೇಟ್ ಬದಲಾವಣೆಗೆ ಮತ್ತಷ್ಟು ಟೈಂ ಇದೀಗ ಸಿಕ್ಕಂತಾಗಿದೆ.

ವೆಬ್‌ಸೈಟ್ ವಿಳಾಸ ಇಲ್ಲಿದೆ ನೋಡಿ

ರಾಜ್ಯ ಸರ್ಕಾರದ ಅಧಿಸೂಚನೆ ಪ್ರಕಾರ ವಾಹನ ಸವಾರರು ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಪಡೆಯಲು ಸಾರಿಗೆ ಇಲಾಖೆ ಅಧಿಕೃತ ವೆಬ್ಸೈಟ್ https://transport.karnataka.gov.in ಅಥವಾ www.siam.in ಮೂಲಕ ಮಾತ್ರ ನೋಂದಣಿಯ ಮಾಡಿಕೊಳ್ಳುವಂತೆ ಸಾರಿಗೆ ಇಲಾಖೆ ಸೂಚನೆ ನೀಡಿದೆ. ನಂಬರ್ ಪ್ಲೇಟ್ ಅಳವಡಿಕೆ ಸಮಯದಲ್ಲಿ ಸರ್ಕಾರ ಸೂಚಿಸಿರುವ ವೆಬ್‌ಗೆ ಮಾತ್ರ ಭೇಟಿ ನೀಡಬೇಕು. ಕರೆಗಳ ವಿಚಾರದಲ್ಲಿ ಕೂಡ ಮುನ್ನೆಚ್ಚರಿಕೆ ವಹಿಸಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+