HSRP: ನಂಬರ್ ಪ್ಲೇಟ್‌ಗಾಗಿ ಸರ್ಕಾರ ನಿಗದಿಪಡಿಸಿ ಹಣವಷ್ಟೇ ಪಾವತಿಸಿ: ಮೋಸ ಹೋಗದಿರಿ
ಬೆಂಗಳೂರು, ಫೆಬ್ರವರಿ 14: ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಜಾರಿಗೆ ಬಂದಿರುವಂತೆ ಕರ್ನಾಟಕದಲ್ಲೂ 'ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್' (HSRP) ಅಳವಡಿಕೆ ಕಡ್ಡಾಯಗೊಳಿಸಿದೆ. ಇಷ್ಟು ಹಣವನ್ನಷ್ಟೇ ನೀವು ಪಾವತಿಸಬೇಕು. ಹಾಗಾದರೆ ಯಾವ ವಾಹನಗಳಿಗೆ ಎಷ್ಟು ದರ ಇದೆ? ನಂಬರ್ ಪ್ಲೇಟ್ ಹಾಕಿಸಲು ಎಷ್ಟು ಖರ್ಚು ಬರುತ್ತದೆ ಎಂಬ ಅನುಮಾನ, ಗೊಂದಲಗಳು ಹಲವರಲ್ಲಿದೆ. ಇದರ ನಿವಾರಣೆಗಾಗಿ ಇಲ್ಲಿ ನೀಡಿದ ಮಾಹಿತಿ ತಿಳಿಯಿರಿ.
ಸದ್ಯ ರಾಜ್ಯದಲ್ಲಿ ಎಲ್ಲಿ ನೋಡಿದರೂ ಈ HSRP ನಂಬರ್ ಪ್ಲೇಟ್ ಸುದ್ದಿ ಹರಿದಾಡುತ್ತಿದೆ. ಸರ್ಕಾರ ಇದರ ಅಳವಡಿಕೆಗೆ ಫೆಬ್ರುವರಿ 17ರವರೆಗೆ ನೀಡಿದ್ದ ಗಡುವನ್ನು ಮುಂದಿನ ಮೂರು ತಿಂಗಳವರೆಗೆ ವಿಸ್ತರಣೆ ಮಾಡಿದೆ. ಇದೇ ಅವಕಾಶ ಲಾಭ ಪಡೆಯುವ ಹಲವರು ಹೆಚ್ಚು ಹಣ ಪೀಕಬಹುದು. ಆದ್ದರಿಂದ ವಾಹನ ಸವಾರರು ಎಚ್ಚರ ವಹಿಸುವುದು ಅಗತ್ಯ.

ಮೋಸ ಹೋಗದೇ ನಿಗದಿತ ಹಣವಷ್ಟೇ ನೀಡಿ
'ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್' (HSRP) ಪ್ಲೇಟ್‌ಗೆ ಅಳವಡಿಕೆಗೆ ಇಂತಿಷ್ಟು ಎಂದು ರಾಜ್ಯ ಸರ್ಕಾರ ಸೂಕ್ತ ಬೆಲೆ ಕೂಡಾ ನಿಗದಿ ಮಾಡಿದೆ. ಇದರಿಂದ ಸವಾರರಿಗೆ ಗೊಂದಲವಾಗದಂತೆ ಮುನ್ನೆಚ್ಚರಿಕೆ ವಹಿಸಿದೆ. ಸರ್ಕಾರ ಸೂಚಿಸಿದ ವಾಹನಗಳ ಸವಾರರು ಮುಂಗಿನ ಮೂರು ತಿಂಗಳವರೆಗೆ ಕಾಯದೇ ಈ ಕೂಡಲೇ ನಿಮ್ಮ ಹತ್ತಿರದ ಡಿಜಿಟಲ್ ಸೇವಾ ಕೇಂದ್ರ, ಅಥವಾ ನಿಮ್ಮ ಕಂಪ್ಯೂಟರ್ ಸೆಂಟರ್‌ಗೆ ಭೇಟಿ ನೀಡಿ ನಂಬರ್ ಪ್ಲೇಟ್ ಹಾಕಿಸಿಕೊಳ್ಳಬಹುದು.
ವಿವಿಧ ವಾಹನಗಳಿಗೆ ಹಣ ನಿಗದಿಯ ವಿವರ
HSRP ನಂಬರ್ ಪ್ಲೇಟ್ ಅಳವಡಿಕೆಗಾಗಿ ದ್ವಿಚಕ್ರವಾಹನ ಸವಾರರಿಗೆ (ಬೈಕ್) ಸರ್ಕಾರ 450 ರೂಪಾಯಿ 550 ರೂಪಾಯಿವರೆಗೆ ನಿಗದಿ ಮಾಡಿದೆ. ಇಷ್ಟು ಹಣವನ್ನು ಮಾತ್ರವೇ ಕೊಡಬೇಕು ಎಂದು ತಿಳಿಸಲಾಗಿದೆ.
ಇದರೊಂದಿಗೆ ಆಟೋ ಸೇರಿದಂತೆ ತ್ರಿಚಕ್ರ ವಾಹನಗಳಿಗೆ 450 ರೂಪಾಯಿ 550 ರೂಪಾಯಿಗಳವರೆಗೆ ಹಣ ನಿಗದಿ ಮಾಡಿದ್ದು, ಅವರ ಇಷ್ಟೇ ಹಣ ನೀಡಿ ನಂಬರ್ ಪ್ಲೇಟ್ ಹಾಕಿಸಿಕೊಳ್ಳಬೇಕು. ಕಾರು ಅಥವಾ 4 ಚಕ್ರದ ವಾಹನಗಳಿಗೆ ರೂಪಾಯಿ 650 ರಿಂದ 780 ರೂ.ವರೆಗೆ ಹಣ ಕೊಟ್ಟು HSRP ನಂಬರ್ ಪ್ಲೇಟ್ ಅಳವಡಿಸಬೇಕು. ಇನ್ನೂ ಭಾರೀ ವಾಹನಗಳಾದ ಟ್ರಕ್‌ಗಳು ಬಸ್‌ಗಳು ಸೇರಿದಂತೆ 10 ಚಕ್ರದ ವಾಹನಗಳಿಗೆ ಸರ್ಕಾರ 650 ರೂಪಾಯಿಯಿಂದ 800 ರೂಪಾಯಿ ಹಣ ನಿಗದಿ ಮಾಡಿದೆ.

2019ರ ಏಪ್ರೀಲ್ ಮುನ್ನ ಖರೀದಿಸಿ ವಾಹನಗಳಿಗೆ ಅನ್ವಯ
ಮೊದಲು ಫೆ.17 ಗಡುವು ನೀಡಿತ್ತು. ನಂಬರ್ ಪ್ಲೇಟ್ ಇಲ್ಲದ ವಾಹನ ಸವಾರರಿಗೆ ದಂಡ ವಿಧಿಸಲು ಸಂಚಾರಿ ಪೊಲೀಸರು ನಿರ್ಧರಿಸಿದ್ದರು. ಈವರೆಗೆ ಸುಮ್ಮನಿದ್ದ ವಾಹನ ಸವಾರರು ಗಡುವು ಹತ್ತಿರ ಬರುತ್ತಿದ್ದಂತೆ ದಿಢೀರನೇ ಸೇವಾಕೇಂದ್ರದತ್ತ ಮುಖ ಮಾಡಿದರು. ಹೀಗಾಗಿ ಸರ್ವರ್ ಸಮಸ್ಯೆ ಉಂಟಾಯಿತು.
2019ರ ಏಪ್ರೀಲ್ 1ಕ್ಕೂ ಮೊದಲು ಖರೀದಿಸಿದ ಎಲ್ಲ ವಿಧಧ ವಾಹನಗಳಿಗೆ ಈ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯವಾಗಿದೆ. ಅಂದಾಜಿನ ಪ್ರಕಾರ ಒಟ್ಟು 1.88 ಕೋಟಿ ವಾಹನಗಳಿಗೆ ಹೊಸ ನಂಬರ್ ಪ್ಲೇಟ್ ಅಳವಡಿಕೆ ಆಗಬೇಕಿದ್ದು, ಆದರೆ ಈವರೆಗೆ ಕೇವಲ 12ಕ್ಕೂ ಹೆಚ್ಚು ವಾಹನಗಳಿಗೆ ಮಾತ್ರವೇ ಇದರ ಅಳವಡಿಕೆ ಆಗಿದೆ. ಇವು ಸೇರಿ ಕೆಲವು ಕಾರಣಗಳಿಂದ ಗಡುವು ವಿಸ್ತರಣೆ ಮಾಡಲಾಗಿದೆ. ಕೊನೆ ದಿನದವರೆಗೂ ಕಾಯದೇ ಕೂಡಲೇ ಹೊಸ ನಂಬರ್ ಪ್ಲೇಟ್ ಪಡೆದುಕೊಳ್ಳುವಂತೆ ಸರ್ಕಾರ ಸೂಚಿಸಿದೆ.
ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಮತ್ತೆ ಮೂರು ತಿಂಗಳು ಗಡುವು ವಿಸ್ತರಣೆ ಮಾಡಲಾಗಿದೆ. ಇದೇ ಕೊನೆಯ ಗಡುವು ಆಗಿದೆ. ನಿಗದಿತ ದಿನಾಂಕದೊಳಗೆ ನಂಬರ್ ಪ್ಲೇಟ್ ಹಾಕಿಸಿಕೊಳ್ಳದಿದ್ದರೆ ದಂಡ ಕಟ್ಟಬೇಕಾಗುತ್ತದೆ ಎಂದು ಸಾರಿಗೆ ಇಲಾಖೆ ಎಚ್ಚರಿಸಿದೆ.
ವಾಹನ ಸವಾರರು ನಿಮ್ಮ ಹತ್ತಿರ ಸೇವಾ ಕೇಂದ್ರಗಳಲ್ಲಿ ಹೊಸ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಆದಷ್ಟು ಶೀಘ್ರವೇ ಅಳವಡಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.












Click it and Unblock the Notifications