ಕೆಎಸ್‌ಓಯು ವಿದ್ಯಾರ್ಥಿಗಳಿಗೆ ಆಗಸ್ಟ್ 10ಕ್ಕೆ ಸಿಹಿಸುದ್ದಿ ನಿರೀಕ್ಷೆ

ಬೆಂಗಳೂರು, ಆಗಸ್ಟ್ 3: ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಮಾನ್ಯತೆಯನ್ನು ಯುಜಿಸಿ ರದ್ದುಗೊಳಿಸಿದ್ದ ಹಿನ್ನೆಲೆಯಲ್ಲಿ ಅತಂತ್ರಗೊಂಡಿದ್ದ ಸರಿಸುಮಾರು 1 ಲಕ್ಷ ವಿದ್ಯಾರ್ಥಿಗಳಿಗೆ ಆ.10 ರಂದು ಸಿಹಿಸುದ್ದಿ ನಿರೀಕ್ಷೆಯಿದೆ.

ಶುಕ್ರವಾರ ನವದೆಹಲಿಯಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಅವರನ್ನು ಭೇಟಿ ಮಾಡಿ ಈ ಕುರಿತು ಚರ್ಚೆ ನಡೆಸಿದ್ದಾರೆ.

HRD ministry may issue notification of KSOU on Aug 10

ಈ ವೇಳೆ ಸಚಿವ ಪ್ರಕಾಶ್‌ ಜಾವಡೇಕರ್ ಆಗಸ್ಟ್ 10ರಂದು ಕೆಎಸ್‌ಓಯುಗೆ ಮಾನ್ಯತೆ ನೀಡುವ ಆದೇಶ ಹೊರಬೀಳಲಿದೆ ಎಂಬ ಭರವಸೆ ನೀಡಿದ್ದಾರೆ. ಈ ಕುರಿತು ಸಚಿವ ಸದಾನಂದಗೌಡ ಅವರ ಕಚೇ ಮಾಹಿತಿ ನೀಡಿದೆ. ಈ ನಿರ್ಧಾರದಿಂದ ಅನಿಶ್ಚಿತತೆ ತೂಗುಯ್ಯಾಲೆಯಲ್ಲಿದ್ದ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಭವಿಷ್ಯವನ್ನು ನಿಶ್ಚಿತ ಗುರಿ ಮುಟ್ಟಿಸುವಲ್ಲಿ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಂತಾಗಿದೆ.

HRD ministry may issue notification of KSOU on Aug 10

ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಮಾನ್ಯತೆಯನ್ನು ಮತ್ತೆ ನೀಡುವಂತೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ಸಂಬಂಧಪಟ್ಟ ಕಡತ ರವಾನಿಸಿದೆ. ಈ ಕುರಿತು ಪ್ರಕಾಶ್‌ ಜಾವಡೇಕರ್ ಸದಾನಂದಗೌಡರ ಮನವಿಗೆ ಸ್ಪಂದಿಸಿದ್ದಾರೆ. ಆಗಸ್ಟ್ 10ರಂದು ಇದರ ಸಂಬಂಧ ಯುಜಿಸಿಯಿಂದ ಸೂಚನೆ ಹೊರಬರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+