HSRP Number Plate: ವಾಹನ ಮಾಲೀಕರೆ ಈ ಸುದ್ದಿ ತಪ್ಪದೇ ಓದಿ!
ರಾಜ್ಯದ ವಾಹನ ಮಾಲೀಕರಿಗೆ ಇದು ಅತ್ಯಂತ ಮಹತ್ವದ ಸುದ್ದಿ. ಯಾಕಂದ್ರೆ ಕರ್ನಾಟಕ ಸಾರಿಗೆ ಹಾಗೂ ರಸ್ತೆ ಸುರಕ್ಷತಾ ಇಲಾಖೆ ಮಹತ್ವದ ಸೂಚನೆ ಹೊರಡಿಸಿದ್ದು, ಹೈ ಸೆಕ್ಯುರಿಟಿ ನೋಂದಣಿ ಫಲಕ ಅಳವಡಿಸಿಕೊಳ್ಳಲು ಮಾರ್ಗಸೂಚಿ ಬಿಡುಗಡೆ ಮಾಡಿದೆ. ಹಾಗಾದರೆ ಈ ಮಾರ್ಗಸೂಚಿ ಪ್ರಕಾರ ನಿಮ್ಮ ವಾಹನಕ್ಕೆ ಹೈ ಸೆಕ್ಯುರಿಟಿ ನೋಂದಣಿ ಫಲಕ ಅಂದ್ರೆ ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವುದು ಹೇಗೆ? ಅರ್ಜಿ ಸಲ್ಲಿಕೆಯ ಪ್ರತಿ ಹಂತದ ವಿವರ ಇಲ್ಲಿದೆ.
ಅಷ್ಟಕ್ಕೂ ರಾಜ್ಯ ಸಾರಿಗೆ ಮತ್ತು ರಸ್ತೆ ಸುರಕ್ಷತಾ ಇಲಾಖೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಬಗ್ಗೆ ಹೊರಡಿಸಿರುವ ಹೊಸ ಸೂಚನೆ ಅನ್ವಯ, ಕರ್ನಾಟಕದಲ್ಲಿ 2019 ರ ಏಪ್ರಿಲ್ 1ಕ್ಕಿಂತ ಹಿಂದೆ ನೋಂದಾಯಿಸಿದ ದ್ವಿಚಕ್ರ, ತ್ರಿಚಕ್ರ, ಲಘು ಮೋಟಾರು ವಾಹನಗಳು, ಪ್ರಯಾಣಿಕ ಕಾರು, ಮಧ್ಯಮ, ಭಾರಿ ವಾಣಿಜ್ಯ ವಾಹನಗಳು, ಟ್ರೈಲರ್ & ಟ್ರ್ಯಾಕ್ಟರ್‌ಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ ಅಳವಡಿಸುವುದು ಕಡ್ಡಾಯ. ಈ ಮೂಲಕ ರಾಜ್ಯದ ಸುಮಾರು ಎರಡು ಕೋಟಿ ವಾಹನಗಳಿಗೆ ಹೈ ಸೆಕ್ಯುರಿಟಿ ನೋಂದಣಿ ಫಲಕ ಅಳಡಿಸಬೇಕಿದೆ. ಹಾಗಾದರೆ ಹೊಸ ನಂಬರ್ ಪ್ಲೇಟ್‌ಗೆ ಅರ್ಜಿ ಸಲ್ಲಿಕೆ ಹೇಗೆ? ಸಂಪೂರ್ಣ ಮಾಹಿತಿ ಮುಂದೆ ಇದೆ ಓದಿ.

ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗೆ ಅರ್ಜಿ ಹಾಕಿ
1) ವೆಬ್‌ಸೈಟ್ ವಿಳಾಸ www.siam.in ಮೂಲಕ ನೀವು HSRP Number Plate ಪಡೆಯಬಹುದು. ಇದಕ್ಕೆ ವೆಬ್‌ಸೈಟ್‌ನಲ್ಲಿ ಇರುವ 'Book HSRP' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
2) 'Book HSRP' ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ವಾಹನ ತಯಾರಕರ ಕುರಿತಾಗಿ ಇರುವ ಆಯ್ಕೆ ಸೆಲೆಕ್ಟ್ ಮಾಡಿ ಮತ್ತು ಮೂಲ ವಾಹನದ ವಿವರ ಭರ್ತಿ ಮಾಡಿ.
3) ಎಚ್‌ಎಸ್‌ಆರ್‌ಪಿ ಜೋಡಣೆಗೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಡೀಲರ್ ಸ್ಥಳ ಆಯ್ಕೆ ಮಾಡಿ ಮತ್ತು ಆನ್‌ಲೈನ್‌ನಲ್ಲಿ ಎಚ್‌ಎಸ್‌ಆರ್‌ಪಿ ಶುಲ್ಕ ಪಾವತಿಗೆ ಮುಂದುವರಿಯಿರಿ.
4) ಎಚ್‌ಎಸ್‌ಆರ್‌ಪಿ ಶುಲ್ಕ ಪಾವತಿಸಲು ಹಣದ ರೂಪದಲ್ಲಿ ಪಾವತಿ ಮಾಡಲು ಆಗಲ್ಲ. ಆದರೆ ಆನ್‌ಲೈನ್ ಮೂಲಕ ಮಾತ್ರ ಶುಲ್ಕ ಪಾವತಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
5) ಇದಾದ ನಂತರ ವಾಹನ ಮಾಲೀಕರ ಮೊಬೈಲ್ ನಂಬರ್‌ಗೆ ಒಟಿಪಿ ಅಂದರೆ ಒನ್ ಟೈಂ ಪಾಸ್‌ವರ್ಡ್ ಬರುತ್ತದೆ. ನಂತರ ದಿನಾಂಕ ಮತ್ತು ಸಮಯ ಆಯ್ಕೆ ಮಾಡಬಹುದು.
6) ಪ್ರಕ್ರಿಯೆ ಮುಗಿಸಿದ ನಂತರ ವಾಹನಗಳ ಮಾಲೀಕರು ತಮ್ಮ ವಾಹನಕ್ಕೆ ಎಚ್‌ಎಸ್‌ಆರ್‌ಪಿ ಅಳವಡಿಸಲು ವಾಹನ ತಯಾರಕರು ಅಥವಾ ಡೀಲರ್ ಭೇಟಿ ಮಾಡಬೇಕು.
7) ಎಚ್‌ಎಸ್‌ಆರ್‌ಪಿ ಪಡೆಯಲು ಕೆಲವು ಡೀಲರ್‌ಗಳ ಜಾಗಕ್ಕೆ ಭೇಟಿ ನೀಡಬೇಕಿದ್ದು ಮತ್ತೆ ಕೆಲವರು ವಾಹನ ಮಾಲೀಕರ ಮನೆ ಮತ್ತು ಕಚೇರಿಗೆ ಬಂದು ಎಚ್‌ಎಸ್‌ಆರ್‌ಪಿ ಸೇವೆ ಒದಗಿಸುತ್ತಾರೆ.
ಒಟ್ನಲ್ಲಿ ರಾಜ್ಯದಲ್ಲಿ 2019 ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಾಯಿಸಿರುವ ಸುಮಾರು 2 ಕೋಟಿ ದ್ವಿಚಕ್ರ, ತ್ರಿಚಕ್ರ, ಲಘು ಮೋಟಾರು ವಾಹನ, ಪ್ರಯಾಣಿಕ ಕಾರುಗಳು, ಮಧ್ಯಮ, ಭಾರಿ ವಾಣಿಜ್ಯ ವಾಹನ, ಟ್ರೈಲರ್, ಟ್ರ್ಯಾಕ್ಟರ್‌ಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು ಅಳವಡಿಸುವುದು ಕಡ್ಡಾಯವಾಗಿದೆ. ಹಾಗೇ ಅರ್ಜಿ ಸಲ್ಲಿಸಲು ಇದೇ ನವೆಂಬರ್ 17 ಕೊನೇ ದಿನವಾಗಿದೆ. ಎಚ್‌ಎಸ್‌ಆರ್‌ಪಿ ಅಳವಡಿಸದಿದ್ರೆ ವಾಹನ ಮಾಲೀಕತ್ವ, ವಿಳಾಸ ವರ್ಗಾವಣೆ, ಕಂತು ಕರಾರು ನಮೂದು, ರದ್ದತಿ, ಅರ್ಹತಾಪತ್ರ ನವೀಕರಣ ಸೇವೆಗೆ ಅನುಮತಿ ಇರಲ್ಲ. ಇದು ಮತ್ತೊಂದು ತಲೆನೋವು ತರಲಿದೆ. ಹಾಗೇ ಇದರ ಜೊತೆ ಭಾರಿ ಪ್ರಮಾಣದ ದಂಡ ಕೂಡ ಮಾರ್ಗಸೂಚಿ ಪಾಲಿಸದ ವಾಹನ ಮಾಲೀಕರ ಜೇಬು ಸುಡಲಿದೆ.
ಹೀಗಾಗಿ ನವೆಂಬರ್ 17ರ ಗಡುವಿನ ಒಳಗೆ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಲಾಗಿದ್ದು, ಶುಲ್ಕ ಪಾವತಿಸಿರುವ ಪ್ರಕರಣಗಳಲ್ಲಿಎಚ್‌ಎಸ್‌ಆರ್‌ಪಿ ಅಳವಡಿಕೆಗೆ ನಿಗದಿತ ದಿನಾಂಕದಿಂದ 30 ದಿನಗಳವರೆಗೆ ಮಾನ್ಯವಾದ ಎಚ್‌ಎಸ್‌ಆರ್‌ಪಿ ರಸೀದಿ ಇಟ್ಟುಕೊಂಡರೆ ದಂಡ ವಿಧಿಸುವುದಿಲ್ಲ. ಹೀಗಾಗಿ ಶುಲ್ಕ ಪಾವತಿ ಮಾಡಿದ ರಸಿದಿ ಅಥವಾ ಬಿಲ್ ಅನ್ನು ಭದ್ರವಾಗಿ ಇಟ್ಟುಕೊಳ್ಳಿ. ಹಾಗೇ ಆದಷ್ಟು ಬೇಗ ವಾಹನ ಮಾಲೀಕರು ಮಾರ್ಗಸೂಚಿ ಅನುಸರಿಸಿ ನಂಬರ್ ಪ್ಲೇಟ್ ಅಪ್‌ಡೇಟ್ ಮಾಡಿಕೊಳ್ಳಬೇಕಿದೆ.












Click it and Unblock the Notifications