ಆರೋಪಿ ಶಾಸಕ ಗಣೇಶ್ ಪೊಲೀಸರಿಗೆ ಸಿಕ್ಕಿ ಬಿದ್ದದ್ದು ಹೇಗೆ?
ರಾಮನಗರ, ಫೆಬ್ರವರಿ 20: ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿ ಒಂದು ತಿಂಗಳಿನಿಂದಲೂ ತಲೆ ಮರೆಸಿಕೊಂಡಿದ್ದ ಶಾಸಕ ಗಣೇಶ್ ಕೊನೆಗೂ ಇಂದು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಒಂದು ತಿಂಗಳಿನಿಂದಲೂ ಪೊಲೀಸರಿಗೆ ತಲೆನೋವಾಗಿದ್ದ ಶಾಸಕ ಗಣೇಶ್ ಅವರನ್ನು ಪತ್ತೆ ಹಚ್ಚಲು ರಾಮನಗರ ಪೊಲೀಸರು ಸತತ ಒಂದು ತಿಂಗಳು ಶ್ರಮ ಪಟ್ಟಿದ್ದಾರೆ.
ಒಬ್ಬ ಶಾಸಕನನ್ನು ಹುಡುಕಲು ಬರೋಬ್ಬರಿ ಒಂದು ತಿಂಗಳು ಹಿಡಿದಿದೆ ಪೊಲೀಸರಿಗೆ. ಆದರೆ ಶಾಸಕ ಗಣೇಶ್ ಅವರನ್ನು ಪತ್ತೆ ಮಾಡುವುದು ಅವರಿಗೆ ಸುಲಭದ ಕೆಲಸವಾಗಿರಲಿಲ್ಲ.
ಈ ಬಗ್ಗೆ ಮಾಧ್ಯಮಗಳಿಗೆ ಮಾತನಾಡಿರುವ ರಾಮನಗರ ಎಸ್‌ಪಿ ರಮೇಶ್ ಬಾನೋತ್, ಕಾರ್ಯಾಚರಣೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಶಾಸಕ ಗಣೇಶ್ ಅವರನ್ನು ಗೋವಾ ನಲ್ಲಿ ಬಂಧಿಸಲಾಗಿದೆ ಎನ್ನುವ ಸುದ್ದಿ ಹರಡಿತ್ತು. ಆದರೆ ಅದನ್ನು ನಿರಾಕರಿಸಿರುವ ಎಸ್‌ಪಿ, ಅವರನ್ನು ಗುಜರಾತ್‌ನ ಸೋಮನಾಥ ಎಂಬುವ ಕಡೆ ಮಧ್ಯಾಹ್ನ ಎರಡು ಗಂಟೆಗೆ ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಗೋವಾ, ಮುಂಬೈನಲ್ಲೂ ಇದ್ದ ಗಣೇಶ್
ಶಾಸಕ ಗಣೇಶ್ ಅವರು ಗೋವಾ ಮತ್ತು ಮುಂಬೈನಲ್ಲಿ ಹೋಗಿದ್ದರಂತೆ. ಆದರೆ ಎರಡೂ ಕಡೆ ಅವರು ಹೆಚ್ಚು ದಿನ ಇರದೆ ಎರಡೂ ಸ್ಥಳಗಳಿಂದ ಕಾಲು ಕಿತ್ತಿದ್ದಾರೆ. ಮುಂಬೈನಲ್ಲಿ ಅಂತೂ ಪೊಲೀಸರು ಬಂಧಿಸಲು ಹೋಗುವ ಒಂದು ದಿನ ಮುಂಚೆ ಅಲ್ಲಿಂದ ಕಾಲು ಕಿತ್ತು ಗುಜರಾತ್‌ಗೆ ಪಲಾಯನ ಮಾಡಿದ್ದರು.

ಫೋನ್ ಕರೆಗಳಿಂದ ಗೊತ್ತಾಯ್ತು ಮಾಹಿತಿ
ಶಾಸಕ ಗಣೇಶ್ ಗುಜರಾತ್‌ನಲ್ಲಿರುವುದು ಪೊಲೀಸರಿಗೆ ಮೂರು ದಿನಗಳ ಮುಂಚೆ ಗೊತ್ತಾಗಿತ್ತು. ಅವರು ಮಾಡಿದ ಕರೆಗಳ ಆಧಾರದಲ್ಲಿ ಅದನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಅಂತೆಯೇ ಇಂದು ಮಧ್ಯಾಹ್ನ ಅವರು ಸೋಮನಾಥ ಎಂಬಲ್ಲಿ ಸುಖ ಸಾಗರ್ ಹೊಟೆಲ್‌ಗೆ ಊಟಕ್ಕೆ ಬಂದಿದ್ದಾಗ ಅವರನ್ನು ಸೆರೆ ಹಿಡಿಯಲಾಗಿದೆ. ಅಲ್ಲೇ ಸ್ಥಳೀಯ ನ್ಯಾಯಾಲಯಕ್ಕೆ ಅವರನ್ನು ಹಾಜರುಪಡಿಸಲಾಗಿದೆ.

ಗಣೇಶ್ ಜೊತೆ ಇದ್ದರು ನಾಲ್ವರು ಚೇಲಾಗಳು
ಬಂಧನ ನಡೆದ ವೇಳೆ ಗಣೇಶ್ ಅವರ ಜೊತೆ ನಾಲ್ಕು ಜನರು ಇದ್ದರಂತೆ, ಮೂರು ಜನ ಕರ್ನಾಟಕದವಾರದೆ, ಒಬ್ಬ ವ್ಯಕ್ತಿ ಗುಜರಾತ್‌ನವನೇ ಎನ್ನಲಾಗಿದೆ. ಅಷ್ಟೂ ಜನರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಲಾಗುತ್ತದೆ ಎಂದು ಎಸ್‌ಪಿ ರಮೇಶ್ ಬಾನೋತ್ ಹೇಳಿದ್ದಾರೆ.

ಬಂಧನಕ್ಕೆ ವಿಶೇಷ ತಂಡ ರಚನೆ
ಶಾಸಕ ಗಣೇಶ್ ಅವರನ್ನು ಬಂಧಿಸಲು ರಾಮನಗರ ಪೊಲೀಸರು ಒಂದು ತಿಂಗಳಿನಿಂದಲೂ ಬಲೆ ಹೆಣೆದಿದ್ದರು. ಈ ಕಾರ್ಯಾಚರಣೆಗೆಂದು ಎಸ್‌ಪಿ ರಮೇಶ್ ಬಾನೋತ್ ನೇತೃತ್ವದಲ್ಲಿ ಇಬ್ಬರು ವೃತ್ತ ನಿರೀಕ್ಷಕರು, ನಾಲ್ಕು ಎಸ್‌ಐ ಮತ್ತು ಕಾನ್‌ಸ್ಟೇಬಲ್‌ಗಳನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು.

ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ್ದ ಶಾಸಕ
ಶಾಸಕ ಗಣೇಶ್ ಅವರು ಜನವರಿ 19ರಂದು ರಾತ್ರಿ ಬಿಡದಿಯ ಈಗಲ್‌ಟನ್ ರೆಸಾರ್ಟ್‌ನಲ್ಲಿ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ್ದರು. ಜನವರಿ 21 ರಂದು ಅವರ ಮೇಲೆ ಎಫ್‌ಐಆರ್ ದಾಖಲಾದ ಮೇಲೆ ಅವರು ತಲೆಮರೆಸಿಕೊಂಡಿದ್ದರು.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications