ನಂದಿನಿ ವಿಚಾರಕ್ಕೆ ಕೈ ಹಾಕಿದ್ದಕ್ಕೆ ಬಿಜೆಪಿಗೆ ಭಾರಿ ಹೊಡೆತ: ಇಲ್ಲಿದೆ ನೋಡಿ ಸಾಕ್ಷಿ

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಕಂಡಿದೆ. ಆಡಳಿತ ವಿರೋಧಿ ಅಲೆಯ ಹೊಡೆತಕ್ಕೆ ಹಲವು ಸಚಿವರು ಕೂಡ ಸೋತು ಮನೆ ಸೇರಿದ್ದಾರೆ. ನಂದಿನಿಯನ್ನು ಅಮೂಲ್ ಜೊತೆ ವಿಲೀನ ಮಾಡುವ ವಿವಾದ ಈ ಬಾರಿ ಬಿಜೆಪಿಗೆ ದೊಡ್ಡ ಹೊಡೆತ ನೀಡಿದೆ. ಈ ಕೆಳಗಿನ ಅಂಶಗಳೇ ಅದನ್ನು ನಿಜ ಎಂದು ಹೇಳುತ್ತವೆ.

ಇದನ್ನು ಕಾಂಗ್ರೆಸ್ ಗೆಲುವು ಅನ್ನೋದಕ್ಕಿಂತ ಬಿಜೆಪಿಯ ಸೋಲು ಎಂದು ಹೇಳಲಾಗಿದೆ. ಭ್ರಷ್ಟಾಚಾರ ಆರೋಪ, ಹಿಂದಿ ಹೇರಿಕೆ, ಅಭಿವೃದ್ಧಿಯಲ್ಲಿ ಹಿನ್ನಡೆ ಸೇರಿದಂತೆ ಹಲವು ವಿಚಾರಗಳು ಬಿಜೆಪಿ ಸೋಲಿಗೆ ಕಾರಣ ಎನ್ನಲಾಗಿದೆ. ನಂದಿನಿ ವಿಚಾರಕ್ಕೆ ಕೈ ಹಾಕಿ ಬಿಜೆಪಿ ಮಹಾ ಪ್ರಮಾದ ಎಸಗಿತು ಎನ್ನುವುದು ಸದ್ಯ ಸ್ಪಷ್ಟವಾಗಿದೆ.

How Nandini Vs Amul Makes Big impact

ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿ ವಿರುದ್ಧ ಬಳಸಿದ ಅಸ್ತ್ರಗಳಲ್ಲಿ ನಂದಿನಿ ಕೂಡ ಒಂದಾಗಿದೆ. ಅಮುಲ್ ಹಾಲನ್ನು ರಾಜ್ಯದಲ್ಲಿ ಮಾರಾಟ ಮಾಡಲು ಅನುವು ಮಾಡಿಕೊಟ್ಟ ಬಳಿಕ ರಾಜ್ಯದಲ್ಲಿ ಭಾರಿ ವಿರೋಧ ವ್ಯಕ್ತವಾಯಿತು. ಅಮಿತ್ ಶಾ ಕೂಡ ಇನ್ನುಮುಂದೆ ಅಮುಲ್ ನಂದಿನಿ ಜೊತೆಯಲ್ಲಿ ಕೆಲಸ ಮಾಡಲಿವೆ ಎಂದಿದ್ದು ಭಾರಿ ಗೊಂದಲ ಮೂಡಿಸಿತು.

ನಂದಿನಿಯನ್ನು ಅಮೂಲ್ ಜೊತೆ ವಿಲೀನ ಮಾಡಲಾಗುತ್ತದೆ ಎನ್ನುವ ಸುದ್ದಿ ಹರಿದಾಡಿದ್ದು, ಸಹಜವಾಗಿಯೇ ಪಶುಸಂಗೋಪನೆಯನ್ನು ನಂಬಿಕೊಂಡಿದ್ದವರ ಆತಂಕಕ್ಕೆ ಕಾರಣವಾಯಿತು. ನಂದಿನಿ ಕನ್ನಡಿಗರ ಅಸ್ಮಿತೆ ಅದನ್ನು ಅಮುಲ್ ಜೊತೆ ಸೇರಿಸುತ್ತಾರೆ ಎನ್ನುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಯಿತು. ಸಾಮಾಜಿಕ ಜಾಲತಾಣದಲ್ಲಿ ಸೇವ್ ನಂದಿನಿ ಅಭಿಯಾನ ಆರಂಭವಾಯಿತು ಇದಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿತು. ಬಿಜೆಪಿ ನಂತರ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಯಿತು. ನಂದಿನಿಯನ್ನು ಅಮುಲ್ ಜೊತೆ ವಿಲೀನ ಮಾಡ್ತಿಲ್ಲ ಎಂದು ಸ್ಪಷ್ಟನೆ ನೀಡಿದರು. ಅದು ಹೆಚ್ಚಿನ ಜನರನ್ನು ತಲುಪಲಿಲ್ಲ.

How Nandini Vs Amul Makes Big impact

ಹಾಲು ಉತ್ಪಾದನೆಯಾಗುವ ಜಿಲ್ಲೆಗಳಲ್ಲಿ ಬಿಜೆಪಿಗೆ ಮುಖಭಂಗ

ರಾಜ್ಯದಲ್ಲಿ ಹಾಳು ಉತ್ಪಾದನೆ ಮಾಡುವ ಐದು ಜಿಲ್ಲೆಗಳಾದ ಬೆಳಗಾವಿ, ತುಮಕೂರು, ಹಾಸನ, ಮೈಸೂರು ಮತ್ತು ಮಂಡ್ಯದಲ್ಲಿ ಬಿಜೆಪಿಗೆ ಭಾರಿ ಹೊಡೆತ ಬಿದ್ದಿದೆ. ಈ ಜಿಲ್ಲೆಗಳಲ್ಲಿ ಒಟ್ಟು 54 ವಿಧಾನಸಭಾ ಕ್ಷೇತ್ರಗಳಿದ್ದು ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ 33 ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ, 2018ರಲ್ಲಿ ಕಾಂಗ್ರೆಸ್ ಇಲ್ಲಿ 11 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಇನ್ನು 2018ರಲ್ಲಿ ಬಿಜೆಪಿ ಈ ಜಿಲ್ಲೆಗಳಲ್ಲಿ 21 ಕ್ಷೇತ್ರಗಳಲ್ಲಿ ಗೆಲುವು ಕಂಡಿದ್ದರೆ ಈ ಬಾರಿ ಅದು 12 ಸ್ಥಾನಗಳಿಗೆ ಇಳಿಕೆಯಾಗಿದೆ. ಅಂದ್ರೆ ಈ ಬಾರಿ 11 ಸ್ಥಾನಗಳನ್ನು ಬಿಜೆಪಿ ಇಲ್ಲಿ ಕಳೆದುಕೊಂಡಿದೆ.

ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ ಕೂಡ ಕರ್ನಾಟಕದಲ್ಲಿ ಪ್ರಚಾರ ಮಾಡುವ ಸಂದರ್ಭದಲ್ಲಿ ನಂದಿನಿ (ಕೆಎಂಎಫ್‌) ಬಗ್ಗೆ ಮಾತನಾಡಿದ್ದರು. ಅಮುಲ್ ಜೊತೆ ವಿಲೀನ ಮಾಡಲು ಕೇಂದ್ರ ಕುತಂತ್ರ ಮಾಡುತ್ತಿದೆ ಎಂದು ಆರೋಪಿಸಿದ್ದರು. ಇದೆಲ್ಲ ಅಂಶಗಳು ಕೂಡ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕೆಲಸ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+