ಮಳೆಯಿಂದ ಮನೆ ಹಾನಿ; ಪರಿಹಾರದ ಮೊತ್ತ ಹೆಚ್ಚಿಸಿದ ಸರ್ಕಾರ

ಬೆಂಗಳೂರು, ಆಗಸ್ಟ್ 04; ಕರ್ನಾಟಕ ಸರ್ಕಾರ 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಉಂಟಾದ ಅತಿವೃಷ್ಟಿ/ ಪ್ರವಾಹದಿಂದ ಹಾನಿಯಾದ ಮನೆಗಳ ಪುನರ್ ನಿರ್ಮಾಣ/ ದುರಸ್ಥಿ ಕಾರ್ಯಕ್ಕೆ ಹೆಚ್ಚಿನ ಪರಿಹಾರ ನೀಡುವ ಬಗ್ಗೆ ಆದೇಶ ಹೊರಡಿಸಿದೆ. ಹಾನಿಯನ್ನು ಎ, ಬಿ, ಸಿ ಎಂದು ಮೂರು ವರ್ಗವಾಗಿ ಮಾಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಟಿ. ಸಿ. ಕಾಂತರಾಜ್, ಸರ್ಕಾರದ ಉಪ ಕಾರ್ಯದರ್ಶಿ, ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ ಮತ್ತು ನೋಂ & ಮು) ಈ ಕುರಿತು ಆದೇಶ ಹೊರಡಿಸಿದ್ದಾರೆ.

house-damage

ರಾಜ್ಯದಲ್ಲಿ 2023ನೇ ಸಾಲಿನ ಮುಂಗಾರು ಋತುವಿನಲ್ಲಿ ಬಿದ್ದಂತಹ ಭಾರಿ ಮಳೆಯಿಂದ ಹಾಗೂ ನದಿ ಹರಿವಿನಿಂದ ರಾಜ್ಯದ ಹಲವೆಡೆ ಪ್ರವಾಹದ ಪರಿಸ್ಥಿತಿ ಉಂಟಾಗಿದ್ದು, ಇದರಿಂದ ಜನ-ಜಾನುವಾರು, ಮನೆ, ಬೆಳೆ ಹಾಗೂ ಸಾರ್ವಜನಿಕ ಮೂಲ ಸೌಕರ್ಯಗಳ ಹಾನಿಯಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳಿಂದ ವರದಿಯಾಗಿರುತ್ತದೆ ಎಂದು ಆದೇಶ ಹೇಳಿದೆ.

ರಾಜ್ಯದಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ (1ನೇ ಜೂನ್ ರಿಂದ 30ನೇ ಸೆಪ್ಟೆಂಬರ್ ವರೆಗೆ) ಅತಿವೃಷ್ಟಿ/ ಪ್ರವಾಹದಿಂದ ರಾಜ್ಯದ ಹಲವೆಡೆ ಪ್ರವಾಹ ಉಂಟಾಗಿದ್ದು, ಇದರಿಂದ ಜನ-ಜಾನುವಾರು, ಮನೆ, ಬೆಳೆ ಹಾಗೂ ಸಾರ್ವಜನಿಕ ಮೂಲ ಸೌಕರ್ಯಗಳ ಹಾನಿಯಾಗಿರುತ್ತದೆ.

ಈ ಕುರಿತು ಮುಖ್ಯಮಂತ್ರಿಗಳು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ವಿರಿಯೋ ಸಂವಾದ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸಿರುತ್ತಾರೆ. ಸರ್ಕಾರದ ಆದೇಶಗಳ ಅನುಸಾರ 2022ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿ/ ಪ್ರವಾಹದಿಂದ ಮನೆಗಳು ಹಾನಿಯಾದಂತಹ ಸಂತ್ರಸ್ತ ಕುಟುಂಬಗಳಿಗೆ ಕೇಂದ್ರ ಸರ್ಕಾರದ SDRF/ NDRF ಮಾರ್ಗಸೂಚಿಯಲ್ಲಿ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚು ಸರಿಯಾಗಿ ಪರಿಷ್ಕೃತ ದರದಲ್ಲಿ ಪರಿಹಾರವನ್ನು ಪಾವತಿಸಿರುವಂತೆ 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಪರಿಷ್ಕೃತ ದರದಲ್ಲಿ ಪರಿಹಾರ ಪಾವತಿಸಲು ಸರ್ಕಾರವು ನಿರ್ಧರಿಸಿದೆ ಎಂದು ತಿಳಿಸಿದೆ.

ಪರಿಹಾರ ಎಷ್ಟು ಹೆಚ್ಚಳ?; 2003ನೇ ಸಾಲಿನ ಮುಂಗಾರು ಋತುವಿನ (1ನೇ ಜೂನ್ ರಿಂದ 30ನೇ ಸೆಪ್ಟೆಂಬರ್ ವರಗೆ) ಅತಿವೃಷ್ಟಿ/ ಪ್ರವಾಹದಿಂದ ಮನೆಗಳು ಹಾನಿಯಾದಂತಹ ಸಂತ್ರಸ್ತ ಕುಟುಂಬಗಳಿಗೆ ಕೇಂದ್ರ ಸರ್ಕಾರದ SDRF/ NDRF ಮಾರ್ಗಸೂಚಿಯಲ್ಲಿ ನಿಗದಿಪಡಿಸಿರುವ ದರಕ್ಕಿಂತ ಈ ಕೆಳಕಂಡಂತೆ ಹೆಚ್ಚುವರಿಯಾಗಿ ಪರಿಷ್ಕೃತ ದರದಲ್ಲಿ ಪರಿಹಾರವನ್ನು ಪಾವತಿಸಲು ಮಂಜೂರಾತಿ ನೀಡಲಾಗಿದೆ.

* ಶೇ 75ಕ್ಕಿಂತ ಹೆಚ್ಚು ಸಂಪೂರ್ಣ ಮನೆ ಹಾನಿ 'ಎ' ವರ್ಗ. SDRF/ NDRF ಮಾರ್ಗಸೂಚಿ 1,20,000. ರಾಜ್ಯ ಸರ್ಕಾರದ ಹೆಚ್ಚುವರಿ ದರ 3,80,000 ರೂ., ಪರಿಷ್ಕೃತ ಮೊತ್ತ 5,00,000 ರೂ.ಗಳು.

* ಶೇ 25 ರಿಂದ ಶೇ 75 ರಷ್ಟು ತೀವ್ರ ಹಾನಿ. 'ಬಿ1' ವರ್ಗ (ದುರಸ್ಥಿ). SDRF/ NDRF ಮಾರ್ಗಸೂಚಿ 1,20,000 ರೂ. ಗಳು. ರಾಜ್ಯ ಸರ್ಕಾರದ ಹೆಚ್ಚುವರಿ ದರ 1,80,000 ರೂ., ಪರಿಷ್ಕೃತ ಮೊತ್ತ 3,00,000 ರೂ.ಗಳು.

* ಶೇ 25 ರಿಂದ ಶೇ 75 ರಷ್ಟು ತೀವ್ರ ಮನೆ ಹಾನಿ. 'ಬಿ2' ವರ್ಗ (ಕೆಡವಿ ಹೊಸ ಮನೆ ನಿರ್ಮಾಣ). SDRF/ NDRF ಮಾರ್ಗಸೂಚಿ 1,20,000. ರಾಜ್ಯ ಸರ್ಕಾರದ ಹೆಚ್ಚುವರಿ ದರ 3,80,000 ರೂ., ಪರಿಷ್ಕೃತ ಮೊತ್ತ 5,00,000 ರೂ.ಗಳು.

* ಶೇ 15-25 ರಷ್ಟು ಭಾಗಶಃ ಮನೆ ಹಾನಿ. 'ಸಿ' ವರ್ಗ. SDRF/ NDRF ಮಾರ್ಗಸೂಚಿ 6,500 ರೂ.ಗಳು. ರಾಜ್ಯ ಸರ್ಕಾರದ ಹೆಚ್ಚುವರಿ ದರ 43,500 ರೂ., ಪರಿಷ್ಕೃತ ಮೊತ್ತ 50,000 ರೂ.ಗಳು.

ಅತಿವೃಷ್ಟಿ/ ಪ್ರವಾಹದಿಂದಾಗಿ ಮನೆಹಾನಿ ಆದ ನೆರ ಸಂತ್ರಸ್ತರಿಗೆ ಪರಿಷ್ಕೃತ ದರದಲ್ಲಿ ಪರಿಹಾರವನ್ನು ಈ ಷರತ್ತುಗಳ ಅನ್ವಯ ಪಾವತಿಸಲು ಜಿಲ್ಲಾಧಿಕಾರಿಗಳಿಗೆ ಅನುಮತಿ ನೀಡಲಾಗಿದೆ.

ಷರತ್ತುಗಳು

* 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ(1ನೇ ಜೂನ್ ರಿಂದ 30ನೇ ಸೆಪ್ಟೆಂಬರ್ ವರೆಗೆ) ಅತಿವೃಷ್ಟಿ, ಪ್ರವಾಹದಿಂದ ಮನೆಹಾನಿ ಉಂಟಾದಲ್ಲಿ ಜಿಲ್ಲಾಧಿಕಾರಿಗಳು ಜಂಟಿ ತಂಡ ರಚಿಸಿ ತಂಡದವರಿಂದ ಸಂತ್ರಸ್ತರ ವಿವರಗಳನ್ನು ಪಡೆದು ಜಿಲ್ಲಾಧಿಕಾರಿಗಳು ನಿಯಮಾನುಸಾರ ಎ, ಬಿ1, ಬಿ2 ಅಥವಾ ಸಿ ವರ್ಗಕ್ಕೆ ಸೇರಿಸುವ ಬಗ್ಗೆ ಅರ್ಹತೆಯನ್ನು ಪರಿಶೀಲಿಸಿ ಅನುಮೋದಿಸಿದ ಫಲಾನುಭವಿಗಳ ವಿವರಗಳನ್ನು RGHCL ತಂತ್ರಾಂಶದಲ್ಲಿ ಕಡ್ಡಾಯವಾಗಿ ದಾಖಲಿಸುವುದು.

* ಜಿಲ್ಲಾಧಿಕಾರಿಗಳು ಎ, ಬಿ1 ಮತ್ತು ಬಿ2 ವರ್ಗದ ಮನೆಗಳ ಅರ್ಹ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ SDRF/ NDRE ಮಾರ್ಗಸೂಚಿಯನ್ವಯ ಮೊದಲನೇ ಕಂತು ರೂ. 1.20 ಲಕ್ಷಗಳನ್ನು ಅರ್ಹ ಫಲಾನುಭವಿಗಳ ಆಧಾರ್ ಜೋಡಣೆ ಆಗಿರುವ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡತಕ್ಕದ್ದು. ಮುಂದಿನ ಕಂತುಗಳ ಅನುದಾನವನ್ನು ನಿಯಮಾನುಸಾರ ಪ್ರಗತಿಯನುಸಾರ RGHCL ಸಂಸ್ಥೆಯಿಂದ ಭರಿಸಲಾಗುವುದು.

* ಜಿಲ್ಲಾಧಿಕಾರಿಗಳು 'ಸಿ' ವರ್ಗದಲ್ಲಿ ಅರ್ಹರಿರುವ ಮನೆಹಾನಿ ಫಲಾನುಭವಿಗಳಿಗೆ ತಲಾ ರೂ. 50,000ರಂತೆ (SDRFಮಾರ್ಗಸೂಚಿಯನ್ವಯ ರೂ. 6500 ಸೇರಿದಂತೆ) ಜಿಲ್ಲಾಧಿಕಾರಿಗಳ ಪಿ.ಡಿ ಖಾತೆಯಲ್ಲಿ ಲಭ್ಯವಿರುವ ಅನುದಾನದಿಂದ ನಿಯಮಾನುಸಾರ ಅರ್ಹ ಫಲಾನುಭವಿಗಳ ಆಧಾರ್ ಜೋಡಣೆ ಆಗಿರುವ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡತಕ್ಕದ್ದು.

* ನಿಯಮಾನುಸಾರ ಜಂಟಿ ಸ್ಥಳ ತನಿಖೆಯ ವರದಿ ಬಂದು ಜಿಲ್ಲಾಧಿಕಾರಿಗಳು ಅರ್ಹತೆ ಬಗ್ಗೆ ಪರಿಶೀಲಿಸಿದ 20 ದಿನದೊಳಗೆ ಪರಿಹಾರ ಪಾವತಿಸುವುದು.

* ಮನೆಹಾನಿ ಪರಿಹಾರ ಪಾವತಿಯಾಗಿರುವ ಫಲಾನುಭವಿಗಳ ವಿವರವನ್ನು ಜಿಲ್ಲಾಧಿಕಾರಿಗಳು ಜಿಲ್ಲೆಯ ಅಧಿಕೃತ ಜಾಲತಾಣದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸುವುದು. ಸದರಿ ಮಾಹಿತಿಯನ್ನು ತಾಲ್ಲೂಕು ಕಛೇರಿಯಲ್ಲಿ ಹಾಗೂ ಗ್ರಾಮ ಪಂಚಾಯತ್‌ಗಳ ಕಛೇರಿಗಳಲ್ಲಿ ಸಹ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸುವುದು.

* ಮನೆಹಾನಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಅರ್ಹತೆಯನ್ನು ಹಾಗೂ ಮಾಹಿತಿಯನ್ನು ನಮೂದಿಸುವುದರಲ್ಲಿ ಏನಾದರೂ ಲೋಪದೋಷಗಳು ಉಂಟಾದಲ್ಲಿ ಸಂಬಂಧಪಟ್ಟ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ನೇರ ಜವಾಬ್ದಾರರನ್ನಾಗಿ ಮಾಡಲಾಗುವುದು.

* ಸಂತಪರಿಗೆ ಪರಿಹಾರ ವಿತರಿಸುವ ಕುಟುಂಬವಾರು ವೆಚ್ಚದ ಲೆಕ್ಕಗಳನ್ನು ಜಿಲ್ಲಾಧಿಕಾರಿಗಳು ಕಡ್ಡಾಯವಾಗಿ ನಿರ್ವಹಿಸತಕ್ಕದ್ದು ಮತ್ತು ವೆಚ್ಚದ ಬಳಕೆ ಪ್ರಮಾಣ ವತ್ರವನ್ನು ಕಡ್ಡಾಯವಾಗಿ ಸರ್ಕಾರಕ್ಕೆ ಸಲ್ಲಿಸತಕ್ಕದ್ದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+