ವಿಜಯಪುರ: ದಲಿತನನ್ನು ವಿವಾಹವಾಗಿದ್ದ ಗರ್ಭಿಣಿಯ ಸಜೀವ ದಹನ
ವಿಜಯಪುರ, ಜೂನ್ 6: ಮನೆಯವರ ಒಪ್ಪಿಗೆ ಇಲ್ಲದೆ ದಲಿತನೊಬ್ಬನನ್ನು ಮದುವೆಯಾದ ಮಹಿಳೆಯನ್ನು, ಆ ಮಹಿಳೆಯ ಕುಟುಂಬದ ಸದಸ್ಯರೇ ಸಜೀವವಾಗಿ ಸುಟ್ಟು ಕೊಂದ ಘಟನೆ ವಿಜಯಪುರ ಜಿಲ್ಲೆಯ ಗುಂಡನಕಾಳ ಎಂಬ ಹಳ್ಳಿಯಲ್ಲಿ ನಡೆದಿದೆ.
ಬಾನು ಬೇಗಂ(21) ಎಂಬ ಯುವತಿ ಸಾಯಬಣ್ಣ ಶರಣಪ್ಪ ಕೊನ್ನೂರು(24) ಎನ್ನುವವರನ್ನು ಪ್ರೀತಿಸುತ್ತಿದ್ದರು. ಮನೆಯವರ ವಿರೋಧ ವ್ಯಕ್ತವಾಗಿದ್ದರಿಂದ ಇಬವರಿಬ್ಬರೂ ಗೊವಾಕ್ಕೆ ಹೋಗಿ ಮದುವೆಯಾಗಿದ್ದರು.[ದಾವಣಗೆರೆ: ಪ್ರಿಯಕರನ ಎದುರೇ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ]

ನಂತರ ಗರ್ಭಿಣಿಯಾದ ಆಕೆ, ಈಗಲಾದರೂ ತಂದೆ-ತಾಯಿ ತನ್ನನ್ನು ಒಪ್ಪಿಕೊಳ್ಳಬಹುದೆಂದು ಪಾಲಕರ ಬಳಿ ಬಂದಿದ್ದಾಳೆ. ಆದರೆ ಮನೆಗೆ ಬಂದ ಮಗಳು ಅಳಿಯನ ಮೇಲೆ ಹಲ್ಲೆ ನಡೆಸಿ, ಗರ್ಭಿಣಿ ಮಗಳನ್ನು ಸಜೀವ ದಹನ ಮಾಡಿದ ಕುಟುಂಬದ ನಿರ್ದಯತೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.
ಮರ್ಯಾದಾ ಹತ್ಯೆಯ ಹೆಸರಿನಲ್ಲಿ ಹೆತ್ತ ಮಕ್ಕಳನ್ನು ಪಾಲಕರೇ ಸಾಯಿಸುತ್ತಿರುವುದು ನಿಜಕ್ಕೂ ಶೋಚನೀಯ.












Click it and Unblock the Notifications