ಹಿಜಾಬ್ ಅರ್ಜಿ; ಹೈಕೋರ್ಟ್‌ನಲ್ಲಿ 11ನೇ ದಿನದ ವಿಚಾರಣೆ

ಬೆಂಗಳೂರು, ಫೆಬ್ರವರಿ 24; ಹಿಜಾಬ್ ಧರಿಸಲು ಅನುಮತಿ ಕೋರಿದ್ದ ಉಡುಪಿಯ ವಿದ್ಯಾರ್ಥಿಗಳ ಅರ್ಜಿ ಮತ್ತು ಇದೇ ವಿಚಾರದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಕರ್ನಾಟಕ ಹೈಕೋರ್ಟ್‌ನಲ್ಲಿ ಗುರುವಾರ ಮುಂದುವರೆದಿದೆ.

ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ತಿ ನೇತೃತ್ವದ ವಿಶೇಷ ಪೀಠದಲ್ಲಿ ವಿಚಾರಣೆ ನಡೆಯುತ್ತಿದೆ. ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್, ನ್ಯಾಯಮೂರ್ತಿ ಖಾಜಿ ಜೈಬುನ್ನಿಸಾ ಮೊಹಿದ್ದೀನ್ ಅವರನ್ನು ಒಳಗೊಂಡಿರುವ ಪೀಠ ಪ್ರತಿದಿನ ಅರ್ಜಿಗಳ ವಿಚಾರಣೆ ನಡೆಸುತ್ತಿದೆ.

Hijab Case Karnataka High Court Three Judge Bench Resumed Hearing Of 11th Day

ಬುಧವಾರ ಕಾಲೇಜು ಆಡಳಿತ ಮಂಡಳಿ ಪರವಾಗಿ, ಕಾಲೇಜು ಪ್ರಾಂಶುಪಾಲರ ಪರವಾಗಿ ವಾದ ಮಂಡನೆ ನಡೆದಿತ್ತು. ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ತಿ ಅವರು ಈ ವಾರ ವಾದ ಮಂಡನೆ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಗುರುವಾರದ ಅರ್ಜಿ ವಿಚಾರಣೆ ಆರಂಭವಾದಾಗ ಸರ್ಕಾರದ ಪರವಾಗಿ ಎಜಿ ಪ್ರಭುಲಿಂಗ ನಾವದಗಿ ಶಿಕ್ಷಕರ ದೂರಿನ ಮೇಲೆ ಎಫ್‌ಐಆರ್ ದಾಖಲಾಗಿದೆ ಎಂದು. ಮುಚ್ಚಿದ ಲಕೋಟೆಯಲ್ಲಿ ಎಫ್‌ಐಆರ್ ಪ್ರತಿಯನ್ನು ಸಲ್ಲಿಕೆ ಮಾಡಿದರು.

ಗುರುವಾರದ ಕಲಾಪದಲ್ಲಿ ಚರ್ಚೆಯಾದ ಅಂಶಗಳು

* ಅರ್ಜಿಗಳ ವಿಚಾರಣೆಯನ್ನು ಶುಕ್ರವಾರ ಮಧ್ಯಾಹ್ನಕ್ಕೆ ಮುಂದೂಡಲಾಗಿದೆ.

* ಕುರಾನ್. ಕಾಂನ ಪ್ರತಿಯನ್ನು ಕೋರ್ಟ್‌ಗೆ ನೀಡಿ ವಕೀಲ ದೇವದತ್ ಕಾಮತ್‌ ವಾದ ಮುಂದುವರೆಸಿದ್ದಾರೆ. 5 ಗಂಟೆಗೆ ಮುಗಿಯಬೇಕಿದ್ದ ಕೋರ್ಟ್ ಕಲಾಪದ ಸಮಯ ವಿಸ್ತರಣೆ ಮಾಡಲಾಗಿದೆ.

* 25(1) ಅಡಿಯಲ್ಲಿ ಮೂಲಭೂತ ಹಕ್ಕಿನ ಮೇಲಿನ ನಿರ್ಬಂಧವಿಲ್ಲ. ಧರ್ಮದ ಚಿಹ್ನೆಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಬಾರದು ಎಂಬ ವಿಚಾರಕ್ಕೆ ಸಂವಿಧಾನ ಸಭೆಯಲ್ಲಿ ತಿದ್ದುಪಡಿ ತರಲಾಯಿತು ಎಂದು ವಾದ ಮಂಡಿಸಿದರು.

* ಎಜಿ ಮತ್ತು ಪ್ರತಿವಾದಿಗಳ ವಾದಗಳನ್ನು ಮರೆತು ಬಿಡಿ. ನೀವು ಹಿಜಾಬ್ ಧರಿಸಲು ಒತ್ತಾಯ ಮಾಡುತ್ತಿದ್ದೀರಿ. ಸಂಸ್ಥೆಯೊಳಗೆ ಧರಿಸುವುದು ಮೂಲಭೂತ ಹಕ್ಕು ಎಂದು ಹೇಳಿದ್ದೀರಿ. ಹೇಗೆ ಮೂಲಭೂತ ಹಕ್ಕು ಎಂದು ವಿವರಣೆ ನೀಡಿ ಎಂದರು.

* ವಕೀಲ ದೇವದತ್ ಕಾಮತ್‌ ಹಿಜಾಬ್ ಧರಿಸಬೇಕು ಎಂಬುದು ವಿದ್ಯಾರ್ಥಿಗಳ ನಂಬಿಕೆ. ಸಂವಿಧಾನ ರಚನಾ ಸಭೆಯಲ್ಲಿ ಧಾರ್ಮಿಕ ಗುರುತು ನಿರ್ಬಂಧನೆ ಮಾಡುವ ಪ್ರಸ್ತಾಪವಿತ್ತು. ಆದರೆ ಆಗ ರಚನಾಕಾರರು ಇದಕ್ಕೆ ಒಪ್ಪಲಿಲ್ಲ. ಆದರೆ ಸರ್ಕಾರ ಈಗ ಅದನ್ನು ಹೇರಲು ಪ್ರಯತ್ನ ನಡೆಸುತ್ತಿದೆ ಎಂದು ವಾದಿಸಿದರು.

* ಮುಖ್ಯ ನ್ಯಾಯಮೂರ್ತಿಗಳು ನೀವು ಹೇಳುವ ಮೂಲಭೂತ ಹಕ್ಕುಗಳು ಯಾವುದು?. ನಾವು ಕೋರ್ಟ್ ಸಮಯವನ್ನು ವಿಸ್ತರಣೆ ಮಾಡುತ್ತೇವೆ. ನೀವು ಇಂದೇ ವಾದವನ್ನು ಮುಗಿಸಿ ಎಂದು ವಕೀಲ ದೇವದತ್ ಕಾಮತ್‌ಗೆ ಸೂಚಿಸಿದರು.

* ವಕೀಲ ದೇವದತ್ ಕಾಮತ್‌ ಈ ಪ್ರಕರಣದಲ್ಲಿ ಇಆರ್‌ಪಿ (ಅಗತ್ಯ ಧಾರ್ಮಿಕ ಆಚರಣೆ) ವಿಚಾರ ಬರುವುದಿಲ್ಲ. ಸಿಡಿಸಿ ಮಾರ್ಗದರ್ಶಕ ಮಂಡಳಿಯಾಗಿ ಉಳಿದರೆ ತೊಂದರೆ ಇಲ್ಲ. ಶಾಸನಬದ್ಧ ಕಾರ್ಯಗಳನ್ನು ಅವರಿಗೆ ನೀಡಿದರೆ ತೊಂದರೆ ಉಂಟಾಗುತ್ತದೆ ಎಂದು ವಾದ ಮಂಡಿಸಿದರು.

* ವಕೀಲ ದೇವದತ್ ಕಾಮತ್‌ ಸಂವಿಧಾನದ ವಿರುದ್ಧ ಸಾರ್ವಜನಿಕ ಆದೇಶದ ವ್ಯಾಖ್ಯಾನವನ್ನು ಹಾಕಲಾಗಿದೆ. ಕಾಲೇಜು ಅಭಿವೃದ್ಧಿ ಸಮಿತಿಗೆ ಈ ವಿಚಾರ ಸೂಚಿಸುವ ಅಧಿಕಾರವಿದೆಯೇ?. ಶಿಕ್ಷಣ ಕಾಯಿದೆಯ ಸೆಕ್ಷನ್ 143 ಅನ್ವಯ 2014ರ ಸುತ್ತೋಲೆಯಡಿ ಮಂಡಳಿ ರಚನೆ ಮಾಡಲಾಗಿದೆ. ಸಿಡಿಸಿಯಲ್ಲಿ ಕಾರ್ಯನಿರ್ವಾಹಕ ಕಾರ್ಯಗಳನ್ನು ಮಾಡುವುದನ್ನು ಪ್ರಶ್ನಿಸಲಾಗುತ್ತಿದೆ ಎಂದು ವಾದಿಸಿದರು.

* ವಕೀಲ ದೇವದತ್ ಕಾಮತ್‌ ಸರ್ಕಾರ ಉಲ್ಲೇಖಿಸಿದ ಕೋರ್ಟ್ ತೀರ್ಪುಗಳು ಇಲ್ಲಿಗೆ ಅನ್ವಯವಾಗುವುದಿಲ್ಲ. ಹಿಜಾಬ್‌ ಅನಿವಾರ್ಯವಲ್ಲ ಎಂದು ಅವರೇ ಹೇಳಿದ್ದಾರೆ. ಅವರು ಉಲ್ಲೇಖಿಸಿದ ತೀರ್ಪುಗಳ ವಿವರಣೆ ನೀಡಿಲ್ಲ ಎಂದು ವಾದ ಮಂಡಿಸಿದರು.

* ವಕೀಲ ದೇವದತ್ ಕಾಮತ್‌ ನಾನು ಎಲ್ಲರೂ ಹಿಜಾಬ್‌ ಧರಿಸುವಂತೆ ಘೋಷಣೆ ಮಾಡಿ ಎಂದು ಕೇಳಿಲ್ಲ. ಸರ್ಕಾರದ ಆದೇಶ ರದ್ದುಪಡಿಸಲು ಮತ್ತು ಅರ್ಜಿದಾರರು ಹಿಜಾಬ್‌ ಧರಿಸಲು ಅನುಮತಿ ನೀಡಿ ಎಂದು ಮಾತ್ರ ಮನವಿ ಮಾಡಿದ್ದೇನೆ. ಸರ್ಕಾರದ ಆದೇಶದ ಕುರಿತ ಶೇ 90ರಷ್ಟು ವಿಚಾರಗಳನ್ನು ಎಜಿ ವಾದದಲ್ಲಿ ಕೈ ಬಿಟ್ಟಿದ್ದಾರೆ ಎಂದು ವಾದ ಮಂಡಿಸಿದರು.

* ವಕೀಲ ದೇವದತ್ ಕಾಮತ್‌ ಹಿಜಾಬ್ ಧರಿಸುವುದು ಸಂವಿಧಾನದ 25ನೇ ನಿಯಮಗಳ ಉಲ್ಲಂಘನೆಯಾಗುವುದಿಲ್ಲ ಎಂದು ವಾದ ಮಂಡಿಸಿದರು. ಬಾಂಬೆ ಹೈಕೋರ್ಟ್, ಮದ್ರಾಸ್ ಹೈಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿದರು.

* ಅರ್ಜಿದಾರರ ಪರವಾಗಿ ವಕೀಲ ದೇವದತ್ ಕಾಮತ್‌ಗೆ ವಾದ ಮಂಡನೆ ಮಾಡಲು ಅವಕಾಶ ನೀಡಿದ ಕೋರ್ಟ್.

* ವಕೀಲ ಎ. ಎಂ. ದಾರ್ ವಾದ ಮಂಡನೆ ಪೂರ್ಣಗೊಂಡಿದೆ. 25ನೇ ವಿಧಿಯ ಅಡಿ ನಮಗೆ ಸಂವಿಧಾನದ ರಕ್ಷಣೆಯೂ ಇದೆ. ಹಿಜಾಬ್ ಮಹಿಳೆಯರ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ. ಇದು ಅವರ ಘನತೆ ಹೆಚ್ಚಿಸುತ್ತದೆ. ನೈತಿಕತೆಗೆ ಧಕ್ಕೆ ಉಂಟು ಮಾಡುವುದಿಲ್ಲ ಎಂದು ವಾದಿಸಿದರು.

* ವಕೀಲ ಎ. ಎಂ. ದಾರ್ ಕುರಾನ್ ಅಧ್ಯಾಯಗಳನ್ನು ಓದಿದರು. ನಾವು ಭಾರತದವರಯ. ಇಲ್ಲಿನ ಕಾನೂನಿನಡಿ ವಾಸಿಸುತ್ತಿದ್ದೇವೆ. ಹಿಜಾಬ್ ನಮಗೆ ಪವಿತ್ರವಾದ್ದು. ನಾವು ಫ್ಯಾಷನ್‌ಗಾಗಿ ಧರಿಸಲು ಅವಕಾಶ ಕೇಳುತ್ತಿಲ್ಲ. ಕುರಾನ್‌ನಲ್ಲಿ ಧರಿಸುವುದು ಕಡ್ಡಾಯ ಎಂದು ಹೇಳಲಾಗಿದೆ ಎಂದು ವಾದಿಸಿದರು.

* ವಕೀಲ ಎ. ಎಂ. ದಾರ್ ಕೂದಲು, ಮುಖ, ಎದೆ ಭಾಗ ಮುಚ್ಚುವುದು ನಮ್ಮ ಧರ್ಮದ ಅತ್ಯಗತ್ಯ ಭಾಗವಾಗಿವೆ ಎಂದು ವಾದಿಸಿದರು. ಹಜ್ ಯಾತ್ರೆ ಮಾಡುವಾಗಲೂ ಇವುಗಳನ್ನು ಮುಚ್ಚುವುದು ಅತ್ಯಗತ್ಯ ಎಂದು ಉಲ್ಲೇಖಿಸಿದರು.

* ತಮ್ಮ ವಾದದ ವೇಳೆ ಹಲವು ಅಂಶಗಳನ್ನು ಉಲ್ಲೇಖಿಸಿದ ವಕೀಲ ಎ. ಎಂ. ದಾರ್ ವಿದ್ಯಾರ್ಥಿಗಳು ಬುರ್ಖಾ ತೊಡಲು ಅನುಮತಿ ಕೇಳುತ್ತಿಲ್ಲ. ತಲೆ, ಕೂದಲು, ಎದೆ ಭಾಗವನ್ನು ಮುಚ್ಚಬೇಕೆಂದು ಖುರಾನ್‌ನಲ್ಲಿ ಹೇಳಲಾಗಿದೆ ಎಂದು ವಾದಿಸಿದರು. ಇದಕ್ಕಾಗಿ ಹಿಜಾಬ್ ಧರಿಸಲು ಅನುಮತಿ ಕೇಳಿದ್ದಾರೆ ಎಂದರು.

Recommended Video

      ಉಕ್ರೇನ್-ರಷ್ಯಾ ಯುದ್ಧವನ್ನು ರೋಮಾಂಚನಕಾರಿ ಎಂದು ಬಣ್ಣಿಸಿದ ಪಾಕ್ PM ವಿಡಿಯೋ ವೈರಲ್ | Oneindia Kannada

      * ವಕೀಲ ಎ. ಎಂ. ದಾರ್ ಪ್ರತಿದಿನ 5 ಬಾರಿ ಪ್ರಾರ್ಥನೆ, ಝಕಾತ್, ಉಪವಾಸ ಮತ್ತು ಹಜ್ ಮುಂತಾದ ಅಂಶಗಳನ್ನು ಉಲ್ಲೇಖಿಸಿ ವಾದ ಮಂಡನೆ ಮಾಡುತ್ತಿದ್ದಾರೆ. ಹಿಜಾಬ್ ಧರಿಸುವುದು ಕಡ್ಡಾಯವಾಗಿದೆ. ಪ್ರವಾದಿಯ ಪತ್ನಿಯರು ಸಹ ಅದನ್ನು ಧರಿಸುತ್ತಾರೆ. ನಾನು ಸೂರಾಗಳನ್ನು ಓದುತ್ತೇನೆ. ಕುರಾನ್‌ನಿಂದ ಪಠಿಸಲು ನನಗೆ ಅನುಮತಿ ನೀಡಬಹುದು ಎಂದು ಮನವಿ ಮಾಡಿದರು.

      * ನ್ಯೂ ಹಾರಿಜನ್ ಕಾಲೇಜಿನಲ್ಲಿಯೂ ಹಿಜಾಬ್‌ಗೆ ನಿಷೇಧ ಹೇರಲಾಗಿದೆ ಎಂದು ವಾದ ಮಂಡಿಸಿದರು. ಇದು ಸರ್ಕಾರಿ ಕಾಲೇಜೋ ಎಂದು ಸಿಜೆ ಪ್ರಶ್ನೆ ಮಾಡಿದರು. ಇವುಗಳು ಸರ್ಕಾರದ ನೆರವು ಪಡೆಯುವ ಕಾಲೇಜುಗಳು ಎಂದು ವಕೀಲ ಎ. ಎಂ. ದಾರ್ ಹೇಳಿದರು. ಆಗ ಅಡ್ವೊಕೇಟ್ ಜನರಲ್ ಇದು ಖಾಸಗಿ ಸಂಸ್ಥೆ, ನಾನು ಓದಿದ್ದೇನೆ ಎಂದರು.

      * ನಾನು ಅರೇಬಿಕ್‌ ಭಾಷೆ ಅಧ್ಯಯನ ಮಾಡಿದ್ದೇನೆ ಎಂದು ವಾದ ಮಂಡಿಸಿದರು. ಕ್ರೈಸ್ತರೂ ಕೂಡ ತಲೆ ಮೇಲೆ ವಸ್ತ್ರ ಧರಿಸುತ್ತಿದ್ದರು ಎಂದು ವಾದಿಸಿದರು.

      * ಹಿರಿಯ ವಕೀಲ ಎ. ಎಂ. ದಾರ್ ವಿದ್ಯಾರ್ಥಿನಿಯರ ಪರವಾಗಿ ವಾದ ಮಂಡನೆ ಆರಂಭಿಸಿದರು. ಖುರಾನ್ ಬಗ್ಗೆ ಯಾರೂ ಸರಿಯಾಗಿ ವಾದ ಮಾಡಿಲ್ಲ ಎಂದರು. ಇಸ್ಲಾಂನಲ್ಲಿ ಉಲ್ಲೇಖಿಸಿರುವ ನಾಲ್ಕು ವಿಧವಾದ ಉಡುಪಿನ ಬಗ್ಗೆ ಗಮನ ಸೆಳೆದರು.

      * ಇದು ರಾಷ್ಟ್ರೀಯ ಪ್ರಾಮುಖ್ಯತೆಯ ವಿಚಾರವಾಗಿದೆ. ಹಿಜಾಬ್ ಮಾತ್ರ ಧರಿಸುತ್ತಾರೆ ಏಕೆ ಅನುಮತಿ ನೀಡುತ್ತಿಲ್ಲ? ಎಂದು ವಕೀಲೆ ಕೀರ್ತಿ ಸಿಂಗ್ ವಾದ ಮಂಡಿಸಿದರು. ಹಲವಾರು ಮನವಿ ಸಲ್ಲಿಕೆ ಮುಂದುವರೆಸಿದರು. ಮುಖ್ಯ ನ್ಯಾಯಮೂರ್ತಿಗಳು ಅರ್ಜಿಯನ್ನು ರದ್ದುಗೊಳಿಸಿದ್ದೇವೆ ಎಂದರು.

      * ವಕೀಲೆ ಕೀರ್ತಿ ಸಿಂಗ್ ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಅಸೋಸಿಯೇಷನ್‌ ಪರವಾಗಿ ಅರ್ಜಿ ಸಲ್ಲಿಕೆ ಮಾಡಿದ್ದರು. ನಮ್ಮದು ನೋಂದಾಯಿತ ಸಂಸ್ಥೆಯಲ್ಲ. ನಾವು ಹಲವು ಪ್ರಕರಣಗಳ ವಿರುದ್ಧ ಹೋರಾಡಿದ ಮಹಿಳೆಯರ ಸಾಮೂಹಿಕ ಸಂಘಟನೆಯಾಗಿದೆ. ಕರ್ನಾಟಕದಲ್ಲಿಯೇ ಸುಮಾರು ಒಂದು ಲಕ್ಷ ಮಹಿಳೆಯರು ಇದ್ದಾರೆ. ಆದ್ದರಿಂದ ಅರ್ಜಿ ಸಲ್ಲಿಸಿದ್ದೇವೆ ಎಂದು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.

      * ವಕೀಲೆ ಕೀರ್ತಿ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಚಿತ್ರಣಗಳನ್ನು ನೀಡಲು ಬಯಸುತ್ತೇವೆ ಎಂದು ಮನವಿ ಮಾಡಿದರು.

      * ವಕೀಲೆ ಕೀರ್ತಿ ಸಿಂಗ್‌ ನ್ಯಾಯಪೀಠಕ್ಕೆ ಹಲವು ಮನವಿಗಳನ್ನು ಮಾಡುತ್ತಿದ್ದಾರೆ. ಕಳೆದ ವಾರ ಕೀರ್ತಿ ಸಿಂಗ್ ಮನವಿಯಲ್ಲಿ ದೋಷಗಳನ್ನು ಸರಿಪಡಿಸಲು ಕೋರ್ಟ್ ಅವಕಾಶ ನೀಡಿತ್ತು.

      * ಹಿಜಾಬ್‌ ಅರ್ಜಿದಾರರ ಪರವಾಗಿ ವಕೀಲ ದೇವದತ್ ಕಾಮತ್‌ ವಾದ ಮಂಡನೆ ಮಾಡಲು ಅವಕಾಶ ಕೇಳಿದರು. ಕೋರ್ಟ್ ವಾದ ಮಂಡನೆ ಮಾಡಲು ಅವಕಾಶ ನೀಡುವುದಾಗಿ ಹೇಳಿತು.

      * ವಿವಿಧ ಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿ ವಕೀಲ ಗುರು ಕೃಷ್ಣ ಕುಮಾರ್ ವಾದ ಮಂಡನೆ ಮಾಡಿದರು. ಜಾತಿ, ಧರ್ಮ, ಅಂತಸ್ತುಗಳ ತಾರತಮ್ಯ ಇರಬಾರದು ಎಂದು ವಾದಿಸಿದರು. ವಾದವನ್ನು ಪೂರ್ಣಗೊಳಿಸಿದರು.

      * ವಕೀಲ ಗುರು ಕೃಷ್ಣ ಕುಮಾರ್ ವಿದ್ಯಾರ್ಥಿಗಳ ನಡುವಿನ ತಾರತಮ್ಯ ನಿವಾರಣೆ ಮಾಡಲು ಸಮವಸ್ತ್ರ ಜಾರಿಗೆ ತರಲಾಗಿದೆ. ಈ ನಿಯಮವನ್ನು ಸಂವಿಧಾನದ 25(1) ಆಧರಿಸಿ ಪ್ರಶ್ನಿಸಬಾರದು ಎಂದು ವಾದ ಮಂಡನೆ ಮಾಡಿದರು.

      * ಕಾಲೇಜು ಉಪನ್ಯಾಸಕರ ಪರವಾಗಿ ವಕೀಲ ಗುರು ಕೃಷ್ಣಕುಮಾರ್ ವಾದ ಮಂಡನೆ ಆರಂಭಿಸಿದ್ದಾರೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+