ಬಿಎಂಟಿಸಿ 840 ಬಸ್ ಖರೀದಿ ಮಾಡಲು ಹೈಕೋರ್ಟ್ ಹಸಿರು ನಿಶಾನೆ

ಕರ್ನಾಟಕ ಹೈಕೋರ್ಟ್ ಹೊಸದಾಗಿ 840 ಬಸ್‌ಗಳನ್ನು ಖರೀದಿ ಸಂಬಂಧ ಕಾರ್ಯಾದೇಶ ಹೊರಡಿಸಲು ಬೆಂಗಳೂರು ಮಹಾನಗರದ ಸಾರಿಗೆ ಸಂಸ್ಥೆಗೆ (ಬಿಎಂಟಿಸಿ) ಅನುಮತಿ ನೀಡಿದೆ.

ಬೆಂಗಳೂರು, ಮಾರ್ಚ್ 14; ಹಲವು ತಿಂಗಳುಗಳಿಂದ ನೆನೆಗುದಿಗೆ ಬಿದ್ದಿದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ( ಬಿಎಂಟಿಸಿ)ಯ 840 ಹೊಸ ಬಸ್‌ ಖರೀದಿ ಪ್ರಸ್ತಾವಕ್ಕೆ ಕೊನೆಗೂ ಕರ್ನಾಟಕ ಹೈಕೋರ್ಟ್ ಹಸಿರು ನಿಶಾನೆ ತೋರಿಸಿದೆ. ಇದರೊಂದಿಗೆ ಬೆಂಗಳೂರು ಜನರ ಜೀವನಾಡಿಯಾಗಿರುವ ಬಿಎಂಟಿಸಿ ಬಸ್ ಖರೀದಿ ಆದೇಶ ಹೊರಡಿಸಲು ಹಾದಿ ಸುಗಮವಾಗಿದೆ.

ಕರ್ನಾಟಕ ಹೈಕೋರ್ಟ್ ಸೋಮವಾರ ಹೊಸದಾಗಿ 840 ಬಸ್‌ಗಳನ್ನು ಖರೀದಿ ಸಂಬಂಧ ಕಾರ್ಯಾದೇಶ ಹೊರಡಿಸಲು ಅಗತ್ಯ ಕ್ರಮ ಕೈಗೊಳ್ಳಲು ಬೆಂಗಳೂರು ಮಹಾನಗರದ ಸಾರಿಗೆ ಸಂಸ್ಥೆಗೆ (ಬಿಎಂಟಿಸಿ) ಅನುಮತಿ ನೀಡಿದೆ. ಬೆಂಗಳೂರು ವಿಕಲಚೇತನ ಸುನೀಲ್ ಕುಮಾರ್ ಜೈನ್ ಹೊಸ ಬಸ್‌ಗಳ ಖರೀದಿ ಟೆಂಡರ್ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರಲೆ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಆಗ ಬಿಎಂಟಿಸಿ ವಕೀಲರ ವಾದ ಆಲಿಸಿದ ಬಳಿಕ ನ್ಯಾಯಪೀಠ ಈ ಆದೇಶ ಮಾಡಿದೆ.

High Court Green Signal For BMTC To Buy 840 News Buses

ದಿವ್ಯಾಂಗರಿಗೆ ಎಲ್ಲ ಅನುಕೂಲ: ಬಿಎಂಟಿಸಿ ಪರ ವಕೀಲರು, ಖರೀದಿಸಲು ಉದ್ದೇಶಿಸಿರುವ ಬಸ್‌ಗಳು ವಿಕಚೇತನರ ಸ್ನೇಹಿಯಾಗಿಲ್ಲ ಎಂಬುದು ಅರ್ಜಿದಾರರ ಆಕ್ಷೇಪವಾಗಿದೆ. ಆದರೆ, ಬಸ್‌ನಲ್ಲಿ ದಿವ್ಯಾಂಗರ ಪ್ರಯಾಣಕ್ಕೆ ಅನುಕೂಲವಾಗುವಂತೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಪ್ರತಿ ಬಸ್‌ನಲ್ಲಿ ವಿಶೇಷಚೇತನರಿಗೆ ನಾಲ್ಕು (ಮಹಿಳೆ/ ಪುರುಷರಿಗೆ ತಲಾ ಎರಡು) ಸೀಟು ಮೀಸಲಿರಿಸಲಾಗಿದೆ. ಕಾರ್ಯಚರಣೆಯಲ್ಲಿರುವ ಬಿಎಂಟಿಸಿ ಬಸ್‌ಗಳ ಪೈಕಿ ಶೇ.71ರಷ್ಟು ಬಸ್‌ಗಳಲ್ಲಿ ಗಾಲಿಕುರ್ಚಿ ಪ್ರಯಾಣಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಅದನ್ನು ಪರಿಗಣಿಸಿದ ನ್ಯಾಯಪೀಠ, ಹೊಸ ಬಸ್‌ಗಳು ಗಾಲಿಕುರ್ಚಿ ಪ್ರಯಾಣಿಕರ ಸ್ನೇಹಿಯಾಗಿವೆ ಎಂಬುದು ಬಿಎಂಟಿಸಿ ಸಲ್ಲಿಸಿರುವ ಫೋಟೋಗಳಿಂದ ತಿಳಿದು ಬರುತ್ತದೆ. ವಿಕಲಚೇತನರ ಪ್ರಯಾಣಕ್ಕೆ ಅನುಕೂಲಕರವಾದ ಸೌಲಭ್ಯಗಳನ್ನು ಕಲ್ಪಿಸಲು ಬಿಎಂಟಿಸಿ ವಿವಿಧ ಕ್ರಮ ಅನುಸರಿಸಲಾಗುತ್ತಿದೆ. ಅರ್ಜಿದಾರರು ಬಯಸಿದಂತೆ ಒಂದೇ ಬಾರಿಗೆ ಎಲ್ಲಾ ಕ್ರಮ ಕೈಗೊಳ್ಳಬೇಕೆಂದು ನಿರೀಕ್ಷಿಸಲು ಅಸಾಧ್ಯ. ಆದ್ದರಿಂದ ಹಂತ-ಹಂತವಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಬಿಎಂಟಿಸಿಗೆ ಸ್ವಲ್ಪ ಸಮಯ ನೀಡಬೇಕು ಎಂದು ತಿಳಿಸಿ ಹೊಸ ಬಸ್‌ಗಳ ಖರೀದಿಗೆ ಕಾರ್ಯಾದೇಶ ಹೊರಡಿಸಲು ಅನುಮತಿ ನೀಡಿ ಆದೇಶಿಸಿತು.

High Court Green Signal For BMTC To Buy 840 News Buses

ಪ್ರಕರಣದ ಹಿನ್ನೆಲೆ: ಬಿಎಂಟಿಸಿ 840 ಹೊಸ ಬಸ್‌ಗಳ ಖರೀದಿಗೆ ಟೆಂಡರ್ ಆಹ್ವಾನಿಸಿ 2022ರ ಅ.28ರಂದು ಹೊರಡಿಸಿದ ಅಧಿಸೂಚನೆಯನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ. ಖರೀದಿಸಲು ಉದ್ದೇಶಿಸಿರುವ ಬಸ್‌ಗಳ ಚಾಸಿಸ್‌ನ (ತಳಕಟ್ಟು) ಎತ್ತರ 1000 ಮಿಲಿ ಮೀಟರ್ ಇರಬೇಕು ಎಂದು ಅಧಿಸೂಚನೆಯಲ್ಲಿ ಬಿಎಂಟಿಸಿ ಹೇಳಿದೆ. ಅದರೆ, ಅದು ಮೋಟಾರು ವಾಹನ ಕಾಯ್ದೆಯ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಸಿದ್ದರು.

ಆದ್ದರಿಂದ ಬಸ್‌ನ ನೆಲಮಟ್ಟದಿಂದ ಎತ್ತರದ 400 ಮಿಲಿ ಮೀಟರ್‌ನಿಂದ 650 ಮಿಮೀ ಇರುವ ಮತ್ತು ಬಾಗಿಲು ಮೂಲಕ ಗಾಲಿ ಕುರ್ಚಿಗಳಿಂದ ಹತ್ತು ಇಳಿಯಲು ಅನುಕೂಲವಾಗುವಂತೆ ವ್ಯವಸ್ಥೆ ಇರುವ (ವೀಲ್ ಚೇರ್ ಬೋಡಿಂಗ್ ಡಿವೈಸ್) ಬಸ್‌ಗಳನ್ನು ಖರೀದಿ ಮಾಡಲು ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

2022ರಲ್ಲಿಯೇ ಬಿಎಂಟಿಸಿ 840 BS-VI ಮಾದರಿ ಬಸ್‌ಗಳನ್ನು ಖರೀದಿ ಮಾಡಲು ಟೆಂಡರ್ ಕರೆದಿತ್ತು. ಆಗ ಇದನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಹಾಕಲಾಗಿತ್ತು. ಬಿಎಂಟಿಸಿಯಲ್ಲಿ 6,600 ಬಸ್‌ಗಳಿವೆ. ಆದರೆ 5,680 ಬಸ್‌ಗಳು ಮಾತ್ರ ಕಾರ್ಯಾಚಣೆ ನಡೆಸುತ್ತಿವೆ. ಈ ಹಿನ್ನಲೆಯಲ್ಲಿ ಸಂಸ್ಥೆ 840 ಡೀಸೆಲ್ ಬಸ್‌ಗಳನ್ನು ಖರೀದಿ ಮಾಡಲು ಮುಂದಾಗಿದೆ. 989 ಬಸ್‌ಗಳನ್ನು ಗುಜರಿಗೆ ಹಾಕಲು ಬಿಎಂಟಿಸಿ ಮುಂದಾಗಿದೆ. ಆದ್ದರಿಂದ ಸಂಸ್ಥೆಗೆ ಹೊಸ ಬಸ್‌ಗಳ ಅಗತ್ಯವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+