ಬ್ಯೂಟಿಪಾರ್ಲರ್ ಹೈಟೆಕ್ ವೇಶ್ಯಾವಾಟಿಕೆ: 3 ಬಂಧನ

ಬ್ಯೂಟಿಪಾರ್ಲರ್ ತರಬೇತಿ ಕೊಡಿಸುವುದಾಗಿ ನಂಬಿಸಿ ಇಂಟರ್ನೆಟ್ ಮೂಲಕ ಯುವತಿಯರನ್ನು ವೇಶ್ಯಾವಾಟಿಕೆ ಪ್ರಲೋಭೆಗೆ ಒಡ್ಡುತ್ತಿದ್ದ ಮೂವರನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಸಫಲರಾಗಿದ್ದಾರೆ. ಆದರೆ...
bangaloreescorts ಮುಂತಾದ ವೆಬ್ ಸೈಟುಗಳ ಮೂಲಕ ಈ ಜಾಹೀರಾತು ಯಾವುದೇ ಎಗ್ಗುಸಿಗ್ಗು ಇಲ್ಲದೆ ರಾಜಾರೋಶವಾಗಿ ನಡೆಯುತ್ತಿದೆ. ಆದರೂ ಪೊಲೀಸರು ಮೀನಾ (30), ಸಣ್ಣೇಗೌಡ (28) ಮತ್ತು ಅಭಿಷೇಕ್ (20) ಎಂಬ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂರ್ಟನೆಟ್ ಜಾಹೀರಾತಿನಲ್ಲಿ ನೀಡಿದ್ದ ಮೊಬೈಲ್ ನಂಬರಿಗೆ ಕರೆ ಮಾಡಿದ ಪೊಲೀಸರು ಜಾಲ ಜಾಡು ಬೆಂಬತ್ತಿದಾಗ ಪ್ರಕರಣ ಬಯಲಾಗಿದೆ.
ಸ್ಥಳ: ರಾಮಮೂರ್ತಿ ನಗರದ ಸರ್ ಎಂವಿ ನಗರದ 19ನೇ ಮುಖ್ಯ ರಸ್ತೆಯಲ್ಲಿರುವ ಮನೆಯೊಂದರ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ನಾಲ್ವರು ಯುವತಿಯರನ್ನು ರಕ್ಷಿಸಿದ್ದಾರೆ.
ಆದರೆ ಗೂಗಲ್ ಸರ್ಚ್ ಇಂಜಿನ್ನಿನಲ್ಲಿ bangaloreescorts ಎಂದು ಹುಡುಕಾಡಿದಾಗ ಹೈಟೆಕ್ ವೇಶ್ಯಾವಾಟಿಕೆಯ ದೊಡ್ಡ ದೊಡ್ಡ ಜಾಲಗಳು ನಗ್ನವಾಗುತ್ತವೆ. ಸಿಸಿಬಿ ಪೊಲೀಸರು ಇದರ ವಿರುದ್ಧವೂ ಕ್ರಮ ಕೈಗೊಳ್ಳಲಿ.












Click it and Unblock the Notifications