Government Employees: ಸರ್ಕಾರಿ ನೌಕರರ ಗಮನಕ್ಕೆ: 7 ನೇ ವೇತನ ಆಯೋಗ ಕುರಿತು ಮಹತ್ವ ಮಾಹಿತಿ
ಬೆಂಗಳೂರು, ಏಪ್ರಿಲ್ 17: 7ನೇ ವೇತನ ಆಯೋಗ ಜಾರಿ ಮಾಡಬೇಕು ಎಂದು ಸರ್ಕಾರಿ ನೌಕರರು ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಏಳನೇ ವೇತನ ಆಯೋಗ ಜಾರಿಗೆ ಭಾರೀ ದೊಡ್ಡ ಮಟ್ಟದ ಹೋರಾಟಗಳು ನಡೆದಿದ್ದವು. ಇತ್ತ ಸರ್ಕಾರಿ ನೌಕರರ ನಿರಂತರದ ಹೋರಾಟದ ಬಗ್ಗೆ ಸರ್ಕಾರವು ಸಹ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. 7 ನೇ ವೇತನ ಆಯೋಗದ ಕುರಿತು ಆರ್ಥಿಕ ಇಲಾಖೆ ಮಹತ್ವದ ಆದೇಶವನ್ನ ಪ್ರಕಟಿಸಿದೆ.
ಆರ್ಥಿಕ ಇಲಾಖೆಯು ಹೊರಡಿಸಿರುವ 7 ನೇ ವೇತನ ಆಯೋಗದ ಆದೇಶಗಳನ್ವಯ ಸರ್ಕಾರಿ ನೌಕರರ ಪ್ರರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನವನಾನು ಹಚ್. ಆರ್. ಎಂ. ಎಸ್-1.0 ರಲ್ಲಿಯೇ ನಿಗಧಿಪಡಿಸವುದು ಹಾಗೂ ನಿಗಧಿಪಡಿಸಿದ ಪ್ರರಿಷ್ಕೃತ ವೇತನವು ಸರಿಯಿದೆಯೇ ಯೆಂದು ಖಚಿತಪಡಿಸಿಕೊಳ್ಳುವುದು, ಇಲ್ಲದಿದ್ದಲ್ಲಿ ತದನಂತರ ಹೆಚ್.ಆರ್.ಎಂ.ಎಸ್ 2.0 ನ ತಂತ್ರಾಂಶದಲ್ಲಿ ವೇತನ ಮಾಡ್ಯುಲ್ (Pay Roll Module) ನಿಂದ ನಿಮ್ಮ ಇಲಾಖೆಯ ಡಿ.ಡಿ.ಓ ಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನೌಕರರಿಗೆ ಪ್ರರಿಷ್ಕೃತ ವೇತನ ಸೆಳೆಯಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದೆ.

ರಾಷ್ಟ್ರೀಯ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಪಿಂಚಣಿ ಯೋಜನೆಯಡಿಯಲ್ಲಿರುವ ಸರ್ಕಾರಿ ನೌಕರರು PRAN ಸಂಖ್ಯೆಯನ್ನು ಹಚ್. ಆರ್. ಎಂ. ಎಸ್-1.0 ರಲ್ಲಿ ಕಡ್ಡಾಯವಾಗಿ ನಮೂದಿಸಬೇಕು/ ನವೀಕರಿಸಬೇಕು.ರಾಷ್ಟ್ರೀಯ ಪಿಂಚಣಿ ಯೋಜನೆಯಡಿಯಲ್ಲಿರುವ ಸರ್ಕಾರಿ ನೌಕರರು ವಯೋನಿವೃತ್ತಿಹೊಂದುವ 6 ತಿಂಗಳ ಮುಂಚಿತವೇ ಮಾಸಿಕ ಪ್ರೀಮಿಯಂ ಮೊತ್ತವನ್ನು ನಿಲ್ಲಿಸಿರುವ ಬಗ್ಗೆ ಹೆಚ್. ಆರ್. ಎಂ. ಎಸ್ -1.0 ನಲ್ಲಿ ಕಡ್ಡಾಯವಾಗಿ ನವೀಕರಿಸುವುದು.
ಸರ್ಕಾರಿ ನೌಕರರು ಬಾಡಿಗೆ ರಹಿತ ವಸತಿಗೃಹವನ್ನು ಉಪಯೋಗಿಸುತ್ತಿದ್ದಲ್ಲಿ. ಅಂತಹ ಸರ್ಕಾರಿ ನೌಕರರಿಗೆ ಆರ್ಥಿಕ ಇಲಾಖೆಯಿಂದ ಹೊರಡಿಸಿರುವ ಮನೆ ಬಾಡೊಗೆ ಭತ್ಯೆ ಹಾಗೂ ವಸತಿಗೃಹದ ಬಗ್ಗೆ ನವೀಕೃತ ಆದೇಶದನ್ವಯ ಮನೆ ಬಾಡಿಗೆ ಭತ್ಯೆಯ ಬಗ್ಗೆ ಸರಿಯಾಗಿ ಲೆಕ್ಕಾಚಾರ ಹಾಕಿದ ಮಾಹಿತಿಯನ್ನು ಹೆಚ್ ಆರ್ ಎಂ ಎಸ್ 1.0 ರಲ್ಲಿ ಕಡ್ಡಾಯವಾಗಿ ಸವೀಕರಿಸುವುದು ಎಂದು ತಿಳಿಸಲಾಗಿದೆ. ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ /ಆರ್ಥಿಕ ಇಲಾಖೆಯಿಂದ ಸಮ್ಮತಿ ಪಡೆದಿರುವ ನವೀಕೃತ ಮಾಹಿತಿಯನ್ನು ನವೀಕರಿಸುವುದು.
ಇಲಾಖೆಯ ರಾಜದ್ಯಾಂತ/ ದೇಶದ್ಯಾಂತ ಇರುವ ಕಛೇರಿಗಳಲ್ಲಿ ರಾಜ್ಯ ಮಟ್ಟದ, ತಾಲ್ಲೂಕು, ವಲಯ, ವೃತ್ತ, ವಿಭಾಗ ಹಾಗೂ ಇತರೆ ಹಂತಗಳಿರುವ ಇಲಾಖಾ-ಕಛೇರಿಗಳ ನಿಖರವಾದ ವಿಳಾಸವನ್ನು ಕ್ರಮಾನುಗತವಾಗಿ ಹೆಚ್.ಆರ್.ಎಂ.ಎಸ್. -2.0 ತಂತ್ರಾಂಶದ ORGANOGRAM ನಲ್ಲಿ ನವೀಕರಿಸುವುದು.
ಹೆಚ್.ಆರ್.ಎಂ.ಎಸ್. - 2.0 ಯೋಜನೆಯ ಅಭಿವೃದ್ಧಿ ಹಂತದಲ್ಲಿದ್ದು ಈಗಾಗಲೇ ವೇತನ ಮಾಡ್ಯುಲ್ (Pey Roll Module) ನ್ನು 21 ಇಲಾಖೆಗಳಿಗೆ ಪ್ರಯೋಗಕವಾಗಿ ಜಾರಿಗೆ ತರಲಾಗಿದೆ. ಹೆಚ್. ಆರ್.ಎಂ.ಎಸ್ 2.0 ವೇತನ ಮಾಡ್ಯುಲ್ ಮೂಲಕವೇ ಪ್ರಯೋಗಕವಾಗಿ ಆಯ್ಕೆ ಮಾಡಲಾದ ಈ 21 ಇಲಾಖೆಗಳ ಸರ್ಕಾರಿ ನೌಕರರಿಗೆ ವೇತನವನ್ನು ವಿಸ್ತರಿಸಲಾಗುತ್ತಿದೆ. ಮುಂದುವರೆದು, ಹೆಚ್ ಆರ್.ಎಂ.ಎಸ್. -2.0 ನ ಯೋಜನೆಯ ತಂತ್ರಂಶದಲ್ಲಿ 36 ಮಾಡ್ಯುಲ್‌ಗಳು ಅಭಿವೃದ್ಧಿಯ ಹಂತದಲ್ಲಿದ್ದು ಹಾಗೂ ಈ ಯೋಜನೆಯನ್ನು ಯಶಸ್ವಿಗೊಳಿಸಲು ಈ 36 ಮಾಡ್ಯುಲ್‌ಗಳು ಒಂದಕ್ಕೊಂದು ನಮಕ್ರಮ ಹೊಂದಾಣಿನೆಯಿಂದ ನಡುಸಲೇಬೇಕಾಗಿರುವುದರಿಂದ ಈ ಕೆಳಗಿನಂತೆ ಕೋರಿರುವ ಮಾಹಿತಿಯನ್ನು ಒದಗಿಸುವುದು.
ನೌಕರರ ಕೆ.ಜಿ.ಐ.ಡಿ ಆಧಾರ ಜೋಡಣೆ ಕರ್ನಾಟಕ ಆರೋಗ್ಯ ಸಂಜೀವನಿ ಯೋಜನೆ (KASS) (ಸರ್ಕಾರಿ ನೌಕರರ ಕುಟುಂಬ ಅವಲಂಬಿತ ಸದಸ್ಯರನ್ನು ಒಳಗೊಂಡಂತೆ), ಕರ್ನಾಟಕ ಹಾಜರಾತಿ ನಿರ್ವಹಣೆ ವ್ಯವಸ್ಥೆ (KAMS) ನ ತಂತ್ರಾಂಶಗಳು ಅಭಿವೃದ್ಧಿಯ ಹಂತದಲ್ಲಿದ್ದು, ಸರ್ಕಾರಿ ನೌಕರರಿಗಾಗಿ ಪ್ರಸ್ತುತ ಚಾಲ್ತಿಯಲ್ಲಿರುವ ಹಾಗೂ ಮುಂಬರುವ ವಿವಿಧ ಯೋಜನೆಗಳನ್ನು ಪ್ರಮಾಣದಲ್ಲಿ ಜಾರಿಗೊಳಿಸಿ ಉಪಯೋಗಿಸಿಕೊಳ್ಳಲು ರಾಜ್ಯದ ಎಲ್ಲಾ ಸರ್ಕಾರಿ ನೌಕರರ ಕೆ.ಜೆ.ಐ.ಡೊ ಆಧಾರ ಜೋಡಣೆ ಪ್ರಕ್ರಿಯೆ [ಉಲ್ಲೇಖ: https://hrms.karnataka.gov.in/ ನ ಅಂತರ್ಜಾಲದಲ್ಲಿ DDO ರವರು ತಮ್ಮ Login ನಲ್ಲಿ SERVICE Rrsister
ಸರ್ಕಾರಿ ನೌಕರರ ಕೆ.ಜಿ.ಐ.ಡಿ ಆಧಾರ್' ಜೋಡಣೆ (KGID-Adhar Seeding) ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು ಬಹಳ ಅವಶ್ಯಕವಾಗುರುವುದರಿಂದ ಆದ್ಯತೆ ಮೇರೆಗೆ ಪೂರ್ಣಗೊಳಿಸುವುದು. ಈ ಬಗ್ಗೆ ಈವರೆವಿಗೂ ಇಲಾಖಾವಾರು "ಕೆ.ಜಿ.ಐ.ಡಿ - ಆಧಾರ್ ಜೋಡನೆಯ" ದತ್ತಂಶದ ಪ್ರಗತಿಯ ವರದಿಯನ್ನು ಲಗತ್ತಿಸಲಾಗಿದೆ.












Click it and Unblock the Notifications