ಕೊಪ್ಪಳ : ಮನೆ ಮಾಲೀಕನಿಗೆ ಚಪ್ಪಲಿ ಸೇವೆ ಮಾಡಿದ ಬಾಡಿಗೆದಾರರು
ಕೊಪ್ಪಳ, ಅಕ್ಟೋಬರ್ 13 : ಬಾಡಿಗೆದಾರರ ಮೇಲೆ ದರ್ಪ ತೋರುತ್ತಿದ್ದ ಮನೆಯ ಮಾಲೀಕನಿಗೆ ಥಳಿಸಿದ ಘಟನೆ ಕೊಪ್ಪಳದ ಕಲ್ಯಾಣ ನಗರದಲ್ಲಿ ನಡೆಸಿದೆ. ಬಾಡಿಗೆದಾರರಿಗೆ ಮಾಲೀಕ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.
ಬಾಡಿಗೆ ಕೊಡುವುದು ತಡವಾಗಿದ್ದಕ್ಕೆ ಬಾಡಿಗೆದಾರರ ಮನೆಯ ವಿದ್ಯುತ್ ಸಂಪರ್ಕವನ್ನು ಮಾಲೀಕ ಕಟ್ ಮಾಡಿದ್ದ. ನೀರಿನ ಪೈಪ್ ಕಟ್ ಮಾಡಿ ಬಾಡಿಗೆ ಕೊಟ್ಟರೆ ಮಾತ್ರ ಸಂಪರ್ಕ ನೀಡುವುದಾಗಿ ಕಿರುಕುಳ ನೀಡುತ್ತಿದ್ದ. ಇದರಿಂದ ಕೋಪಗೊಂಡ ಬಾಡಿಗೆದಾರ ಮತ್ತು ಆತನ ಪತ್ನಿ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದಾರೆ.

ಕಲ್ಯಾಣನಗರದ ನಿವಾಸಿ ಬಾಬಾ ಮನೆಯ ಮಾಲೀಕನಾಗಿದ್ದು, ಬಾಡಿಗೆದಾರರ ಮೇಲೆ ದರ್ಪ ತೋರಿಸುತ್ತಿದ್ದ. ಬಾಡಿಗೆ ನೀಡುವುದು ಸ್ವಲ್ಪ ತಡವಾದರೂ ಮಾನವೀಯತೆ ಮರೆತು ಮಾತಾಡುತ್ತಿದ್ದ. ಈತನಿಂದ ನಿರಂತರ ಕಿರುಕುಳ ಅನುಭವಿಸಿದ ಬಾಡಿಗೆದಾರರು ಆತನ ಮೇಲೆ ಹಲ್ಲೆ ಮಾಡಿದ್ದಾರೆ.
ಕರೆಂಟ್, ನೀರಿನ ಪೈಪ್ ಕಟ್ ಮಾಡಿದ್ದ ಮಾಲೀಕನಿಗೆ ಧರ್ಮದೇಟು ಕೊಟ್ಟು ಬೀದಿಯಲ್ಲಿ ಮಾನ ಹರಾಜು ಹಾಕಿದ್ದಾರೆ. ಗಂಡ ಹೆಂಡತಿ ಇಬ್ಬರೂ ಸೇರಿ ಮನೆಯಲ್ಲಿ ಅವಿತು ಕುಳಿತಿದ್ದ ಮಾಲೀಕನನ್ನು ಹೊರಗಡೆ ಎಳೆದುಕೊಂಡು ಬಂದು, ಚಪ್ಪಲಿಯಲ್ಲಿ ಥಳಿಸಿದ್ದಾರೆ.













Click it and Unblock the Notifications