Breaking: ಕರ್ನಾಟಕದಲ್ಲಿ ಭಾರಿ ಮಳೆ; ಹಾಸನ, ಕೊಡಗಿಗೆ 'ರೆಡ್ ಅಲರ್ಟ್'
ಬೆಂಗಳೂರು ಸೆಪ್ಟಂಬರ್ 07: ಕರ್ನಾಟಕದಾದ್ಯಂತ ಮುಂದಿನ ಮೂರು ದಿನ ಭಾರಿ (ಸೆ.10) ಮಳೆ ಮುಂದುವರಿಯಲಿದೆ. ಎರಡು ಜಿಲ್ಲೆಗಳಲ್ಲಿ ಮಾತ್ರ ಅತ್ಯಂತ ಭಾರಿ ಮಳೆ ಸುರಿಯುವ ನಿರೀಕ್ಷೆ ಹಿನ್ನೆಲೆ 'ರೆಡ್ ಅಲರ್ಟ್' ಕೊಡಲಾಗಿದೆ.
ಕರ್ನಾಟಕ ಹವಾಮಾನದ ಕುರಿತು ಮುನ್ಸೂಚನೆ ನೀಡಿರುವ ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಕೇಂದ್ರವು, ಕರಾವಳಿ ಹಾಗೂ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಭಾರಿ ಮಳೆ ಆಗಲಿದೆ. ಇದರಲ್ಲಿ ದಕ್ಷಿಣ ಒಳನಾಡಿನ ಹಾಸನ ಮತ್ತು ಕೊಡಗು ಜಿಲ್ಲೆಯಲ್ಲಿ ಗುರುವಾರ ಒಂದು ಸುಮಾರು 20 ಸೆಂ.ಮೀ.ಗಿಂತಲೂ ಅತ್ಯಧಿಕ ಭಾರಿ ಮಳೆ ಬೀಳಲಿದೆ. ಹೀಗಾಗಿ ಈ ಎರಡು ಜಿಲ್ಲೆಗೆ 'ರೆಡ್ ಅಲರ್ಟ್' ಎಚ್ಚರಿಕೆ ಕೊಡಲಾಗಿದೆ ಎಂದು ತಿಳಿಸಿದೆ.
ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ, ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಚಿಕ್ಕಮಗಳೂರು, ಕೊಡಗಿಗೆ ಸೆಪ್ಟಂಬರ್ 10ರವರೆಗೆ 'ಆರೆಂಜ್ ಅಲರ್ಟ್' ನೀಡಲಾಗಿದೆ. ಉಳಿದಂತೆ ಒಡಳನಾಡಿನ ಇನ್ನಿತರ ಜಿಲ್ಲೆಗಳಾದ ಬೀದರ್, ಗದಗ, ಹಾವೇರಿ, ಕೊಪ್ಪಳ, ಕಲಬುರಗಿ, ಚಿತ್ರದುರ್ಗ, ಕೊಡಗು, ಶಿವಮೊಗ್ಗ, ತುಮಕೂರು, ಮಂಡ್ಯ, ಮೈಸೂರು ಜಿಲ್ಲೆಗಳ ಹಲವೆಡೆ ಸಾಧಾರಣದಿಂದ ಭಾರಿ ಮಳೆ ಬೀಳಲಿದೆ. ಹೀಗಾಗಿ ಅವೆಲ್ಲ ಜಿಲ್ಲೆಗಳಿಗೆ ಶನಿವಾರದವರೆಗೆ 'ಯೆಲ್ಲೋ ಅಲರ್ಟ್' ಎಚ್ಚರಿಕೆ ನೀಡಲಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿಗೂ ಭಾರಿ ಮಳೆ
ಇನ್ನೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವರುಣಾರ್ಭಟ ಈಗಾಗಲೇ ಜೋರಿದೆ. ಇದು ಗುರುವಾರದವರೆಗೆ ಮುಂದುವರಿಯುವ ಸಾಧ್ಯತೆ ಇದೆ. ಬುಧವಾರ ಸಂಜೆ ಇಲ್ಲವೇ ರಾತ್ರಿ ವೇಳೆಗೆ ಅಬ್ಬರ ಮಳೆ ಶುರುವಾಗಲಿದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.
ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಮುಂದಿನ 48 ಗಂಟೆಯಲ್ಲಿ ಮಳೆಯಿಂದಾಗಿ ಇನ್ನಷ್ಟು ತೊಂದರೆ ಅನುಭವಿಸಲಿವೆ ಎನ್ನಲಾಗಿದೆ. ಈ ಅವಧಿಯಲ್ಲಿ ತಾಪಮಾನ ಕಡಿಮೆಯಾಗಲಿದ್ದು, ಎಲ್ಲೆಡೆ ಮೋಡ ಕವಿದ ಹಾಗೂ ತಂಪು ವಾತಾವರಣವೇ ಕಂಡು ಬರಲಿದೆ. ಈ ವೇಳೆ ನಗರದಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ವರದಿ ತಿಳಿಸಿದೆ.












Click it and Unblock the Notifications