ಗಡಿ ಜಿಲ್ಲೆಯಲ್ಲಿ ಧಾರಾಕಾರ ಮಳೆ: 22 ಸೇತುವೆ ಮುಳುಗಡೆ, 44 ಗ್ರಾಮಗಳ ಸಂಪರ್ಕ ಕಡಿತ
ರಾಜ್ಯದಲ್ಲಿ ಧಾರಾಕಾರ ಮಳೆ ಆಗುತ್ತಿದೆ. ಹಲವು ಜಿಲ್ಲೆಗಳು ಮಳೆಯ ರೌದ್ರ ನರ್ತನಕ್ಕೆ ನಲುಗಿ ಹೋಗಿವೆ. ಇನ್ನು ಹಲವು ಜಿಲ್ಲೆಗಳು ಮಳೆಯಿಂದಾಗಿ ನಾನಾ ರೀತಿಯ ತೊಂದರೆಗಳನ್ನು ಅನುಭವಿಸುತ್ತಿವೆ. ರಾಜ್ಯದ ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕ ಭಾಗದ ಕೆಲವೆಡೆ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ. ಇದರಿಂದ ಜನರ ಜೀವನ ನರಕವಾದಂತೆ ಆಗಿದೆ.
ಗಡಿ ಜಿಲ್ಲೆಗಳಲ್ಲಿ ಮಳೆಯ ಕಾಟ ಜೋರಾಗಿದೆ. ಸಪ್ತನದಿಗಳ ಬೀಡು ಎಂದೇ ಖ್ಯಾತಿ ಪಡೆದಿರುವ ಬೆಳಗಾವಿ ಜಿಲ್ಲೆಯಲ್ಲಿ ಮಳೆ, ರಗಳೆಯನ್ನೇ ಸೃಷ್ಟಿ ಮಾಡಿದೆ. ಇಲ್ಲಿನ ಜನ ಮೊದಲು ಮಳೆಗಾಗಿ ಹರಿಕೆ ಹೊತ್ತರೆ, ಈಗ ಮಳೆ ನಿಲ್ಲಲೆಂದು ಹರಿಕೆ ಹೊತ್ತುಕೊಳ್ಳವ ಹಾಗೆ ಆಗಿದೆ.

ನದಿಗಳು ಭರ್ತಿ
ಬೆಳಗಾವಿ ಜಿಲ್ಲೆಯಲ್ಲಿ ಘಟಪ್ರಭಾ, ಮಲಪ್ರಭಾ, ವೇದಗಂಗಾ, ದೂದಗಂಗಾ, ಕೃಷ್ಣಾ, ಪಂಚಗಂಗಾ, ಹಿರಣ್ಯಕೇಶಿ, ಮಾರ್ಕಂಡೇಯ ನದಿಗಳು ತುಂಬಿ ಹರಿಯುತ್ತಿವೆ. ಜಿಲ್ಲೆಗಳ ಜೀವನಾಡಿಗಳಾದ ಈ ನದಿಗಳು ತುಂಬಿ ಹರಿಯುತ್ತಿರುವುದರಿಂದ ಅನೇಕ ಆವಂತರಗಳು ಸೃಷ್ಟಿಯಾಗಿವೆ. ಈವರೆಗೆ ಜಿಲ್ಲೆಯಲ್ಲಿ 22 ಸೇತುವೆಗಳು ಮುಳಗಿದ್ದು, ಇದರಿಂದ 64 ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ 160ಕ್ಕೂ ಹೆಚ್ಚು ಮನೆಗಳು ಭಾಗಶಃ ಕುಸಿದಿವೆ. ಮಳೆ ನೀರಿನಿಂದಾಗಿ ಸಾವಿರಾರು ಎಕರೆ ಜಮೀನಿಗೆ ನೀರು ನುಗಿದ್ದರು ಬೆಳದಿದ್ದ ಬೆಳೆ ಮಣ್ಣಪಾಲಾಗಿದೆ.
ಸೇತುವೆ ಮುಳುಗಡೆ
ಹುಕ್ಕೇರಿ, ಚಿಕ್ಕೋಡಿ, ನಿಪ್ಪಾಣಿ, ಮೂಡಲಗಿ, ಗೋಕಾಕ್ ಭಾಗದಲ್ಲಿ ಸೇತುವೆಗಳು ಮುಳಗಡೆ ಆಗಿದ್ದು, ಸಂಪರ್ಕ ಅಸ್ತವ್ಯಸ್ಥವಾಗಿದೆ. ಘಟಪ್ರಭಾ ಜಲಾಶಯದಿಂದ ನೀರು ಹರಿದು ಬಿಡುತ್ತಿರುವುದದಿಂದ ಹಲವು ಗ್ರಾಮಗಳು ತೊಂದರೆಯನ್ನು ಅನುಭವಿಸುವಂತಾಗಿದೆ. ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದು, ನದಿ ಪಕ್ಕದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

ಭಾರೀ ಮಳೆಗೆ ಜಿಲ್ಲೆಯಲ್ಲಿ ವಿದ್ಯುತ್ ವ್ಯತ್ಯಯ ಕಂಡು ಬಂದಿದ್ದು, ಜನ ಕತ್ತಲಿನಲ್ಲಿ ಜೀವನ ಕಳೆಯುವಂತಾಗಿದೆ. ಇನ್ನು ಹಿಡಕಲ್ ಜಲಾಶಯದಲ್ಲಿ 10 ಸಾವಿರ ಕ್ಯೂಸಿಕ್ ನೀರು ಬಿಡುಗಡೆ ಮಾಡಲಾಗಿದೆ. ಈ ಜಲಾಶಯ ಭರ್ತಿಗೆ ಇನ್ನು 8 ಟಿಎಂಸಿ ನೀರು ಮಾತ್ರ ಅಗತ್ಯ ಇದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ.
ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆ
ಕಳೆದ ಐದು ವರ್ಷದ ಹಿಂದಿನ 2019ರ ಕುಂಭದ್ರೋಣ ಮಳೆ ನೆನಪಿಸುವಂತಹ ಮಳೆ ರಾಜ್ಯದಾದ್ಯಂತ ಆವರಿಸಿದ್ದು, ಈ ಭಾರಿಯೂ ಬೆಳಗಾವಿ ಜಿಲ್ಲೆ ಅಪಾಯದಂಚಿಗೆ ಬಂದು ತಲುಪಿದೆ. ನೆರೆ, ಉಬ್ಬರ ಇಲ್ಲವೇ ಜನ ಜಾನುವಾರುಗಳ ಸಾವು ನೋವು ಕಾಣಿಸದಿದ್ದರೂ ವಿಪರೀತ ಮಳೆಯಿಂದ ಬೆಳಗಾವಿ ನಗರ ಸೇರಿದಂತೆ ಇಡೀ ಜಿಲ್ಲೆಯ ಜನಜೀವನ ವ್ಯಾಪಾರ ಉದ್ಯಮವಂತೂ ಬಿದ್ದು ಹೋಗಿದೆ.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮತ್ತು ಎಸ್ಪಿ ಡಾ. ಭೀಮಾಶಂಕರ ಗುಳೇದ ಮುಳುಗಡೆಯಾದ ಸೇತುವೆಗಳು ಹಾಗೂ ನೆರೆ ಪ್ರದೇಶಗಳಿಗೆ ಎಡೆಬಿಡದ ಭೇಟಿ ನೀಡಿ ಆಡಳಿತದ ಮೇಲ್ವಿಚಾರಣೆ ನಡೆಸಿದ್ದಾರೆ.
ಮಲ್ಲಿಗವಾಡ-ದತ್ತವಾಡ, ಕುಡಚಿ, ಸದಲಗಾ ಬೊರಗಾಂವ ಸಹಿತ ಸಣ್ಣ ದೊಡ್ಡ ಎಲ್ಲಿ ಸೇತುವೆಗಳು ಮುಳುಗಡೆಯಾಗಿವೆ. ಈ ಮಧ್ಯೆ ಮೊಸಳೆಗಳ ಕಾಟ ಹೆಚ್ಚಾಗಿದ್ದು, ಜನತೆ ನದಿಮೂಲಗಳು ಹಾಗೂ ಮರೆಯಾಗುವ ಹೊಲಗದ್ದೆ ಪ್ರದೇಶಗಳ ಬಳಿ ತೆರಳದಂತೆ ಎಸ್ಪಿ ಡಾ. ಭೀಮಾಶಂಕರ ಮನವಿ ಮಾಡಿದ್ದಾರೆ.
NDRF ಹಾಗೂ SDRF ತಂಡಗಳನ್ನು ಈಗಾಗಲೇ ಚಿಕ್ಕೋಡಿ ತಾಲೂಕಿನ ಸದಲಗಾದಲ್ಲಿ ಅಗತ್ಯ ಪರಿಕರ, ಬೋಟಗಳೊಂದಿಗೆ ಸಜ್ಜಾಗಿಡಲಾಗಿದೆ. ನೆರೆ ಎದುರಿಸುವ ಸಂಬಂಧ ಜಿಲ್ಲಾಧಿಕಾರಿಗಳು, ಅಧಿಕಾರಿಗಳ ಸರಣಿ ಸಭೆ ನಡೆಸಿದ್ದು ಜಿಲ್ಲಾಡಳಿತ ಸರ್ವಸನ್ನದ್ಧವಾಗಿದೆ.












Click it and Unblock the Notifications