ರಾಜ್ಯದ ಕರಾವಳಿ, ಮಲೆನಾಡು ಭಾಗದಲ್ಲಿ ಭಾರೀ ಮಳೆ

ಬೆಂಗಳೂರು, ಜೂ. 22: ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ವರುಣ ಆರ್ಭಟಿಸುತ್ತಿದ್ದಾನೆ. ಕಳೆದ ಮೂರು ದಿನಗಳಿಂದ ಮಂಗಳೂರು, ಕಾರವಾರ, ಶಿರಸಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಮಡಿಕೇರಿ ಸೇರಿದಂತೆ ಹಲವು ಭಾಗಗಳು ವ್ಯಾಪಕ ಮಳೆ ಪಡೆದುಕೊಳ್ಳುತ್ತಿವೆ. ಪ್ರಮುಖ ಜಲಾಶಯಗಳ ಒಳಹರಿವಿನ ಪ್ರಮಾಣದಲ್ಲಿ ತೀವ್ರ ಏರಿಕೆಯಾಗಿದೆ.

ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮುಂಗಾರು ಮಳೆ ಬಿರುಸಾಗಿದೆ. ಜತೆಗೆ ಬಿರುಗಾಳಿ ಬೀಸುತ್ತಿದ್ದು, ಹಲವಾರು ಮರಗಳು ಧರೆಗುರುಳಿವೆ. ಬಂಟ್ವಾಳ ತಾಲ್ಲೂಕಿನ ಉಳಿ ಗ್ರಾಮದ ಕಕ್ಕೆಪದವುನಲ್ಲಿ ಮಳೆ ನೀರಿನಲ್ಲಿ ಕೊಚ್ಚಿ ಹೋದ ಎರಡು ವರ್ಷದ ಬಾಲಕಿ ಮೃತಪಟ್ಟಿದ್ದಾಳೆ.[ವರುಣನ ಆರ್ಭಟಕ್ಕೆ ತೇಲಿದ ಮುಂಬೈ ಮಹಾನಗರ!]

ಮಲೆನಾಡು ಭಾಗದಲ್ಲಿ ಗಾಳಿ ಮಳೆ ಪರಿಣಾಮ ಮರಗಳು ಧರೆಗುರುಳಿದ್ದು , ವಿದ್ಯುತ್ ಸಂಪರ್ಕ ಕಡಿತವಾಗಿದೆ. ವಿಶ್ವವಿಖ್ಯಾತ ಜೋಗ ಜಲಪಾತ ವೈಭವ ತೆರೆದುಕೊಂಡಿದ್ದು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಮರಗಳೂ ಉರುಳಿದ ಪರಿಣಾಮ ರಾಜ್ಯಾದ್ಯಂತ 5 ಸಾವು ಸಂಭವಿಸಿದೆ.

ಮುಂದಿನ 24 ಗಂಟೆಗಳಲ್ಲಿ ಕರವಾಳಿ ಮತ್ತು ಮಲೆನಾಡು ಭಾಗಗಳು ವ್ಯಾಪಕ ಮಳೆ ಪಡೆದಿಕೊಂಡರೆ ದಕ್ಷಿಣ ಒಳನಾಡು ಭಾಗದಲ್ಲಿ ಸಾಧಾರಣ ಮಳೆಯಾಗಲಿದೆ. ಉತ್ತರ ಒಳನಾಡು ಭಾಗದಲ್ಲಿ ತುಂತುರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಜಲಾಶಯ ನೀರಿನ ಮಟ್ಟ
* ಆಲಮಟ್ಟಿ 507 (519 ಮೀ)
* ಲಿಂಗನಮಕ್ಕಿ 1,755 (1,819 ಅಡಿ)
* ಭದ್ರಾ 139(186 ಅಡಿ)
* ತುಂಗಭದ್ರಾ 1585 (1633 ಅಡಿ)
* ಕೆಆರ್ಎಸ್ 78 (124 ಅಡಿ)
* ಹಾರಂಗಿ 2813 (2859 ಅಡಿ)
* ಹೇಮಾವತಿ 2875(2992 ಅಡಿ)
* ಕಬಿನಿ 2266 (2 284 ಅಡಿ)
* ಘಟಪ್ರಭಾ 2079 (2175 ಅಡಿ)
* ಮಲಪ್ರಭಾ 2039 (2 079 ಅಡಿ)

ಮಲೆನಾಡಲ್ಲಿ ವರುಣನ ಆರ್ಭಟ

ಮಲೆನಾಡಲ್ಲಿ ವರುಣನ ಆರ್ಭಟ

ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಮತ್ತು ಬೆಳಗಾವಿ ಜಿಲ್ಲೆ ಹಲವೆಡೆ ಧಾರಾಕಾರ ಮಳೆಯಾಗಿದೆ. ಶಿವಮೊಗ್ಗ ಸಮೀಪದ ಗಾಜನೂರಿನ ತುಂಗಾ ಜಲಾಶಯ ಭರ್ತಿಯಾಗಿದ್ದು, 6 ಕ್ರೆಸ್ಟ್‌ ಗೇಟ್‌ಗಳ ಮೂಲಕ ನೀರನ್ನು ಹೊರ ಬಿಡಲಾಗುತ್ತಿದೆ. ಉಳಿದಂತೆ ಭದ್ರಾ ಜಲಾಶಯದ ಒಳಹರಿವು 3,132 ಕ್ಯೂಸೆಕ್‌ಗೆ ಏರಿದೆ.

ಎಲ್ಲೆಲ್ಲಿ ಭಾರೀ ಮಳೆ?

ಎಲ್ಲೆಲ್ಲಿ ಭಾರೀ ಮಳೆ?

ಬೆಳಗಾವಿ ಜಿಲ್ಲೆ ಕಣಕುಂಬಿಯಲ್ಲಿ 100 ಮಿ.ಮೀ ಮಳೆಯಾಗಿದೆ. ಕೊಪ್ಪ, ಎನ್‌.ಆರ್.ಪುರ, ಶೃಂಗೇರಿ, ಕಳಸ, ಮೂಡಿಗೆರೆ, ಹಾಸನ ಜಿಲ್ಲೆಯ ಸಕಲೇಶಪುರ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ, ಸಾಗರ, ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಹಳಿಯಾಳ, ಮುಂಡಗೋಡದಲ್ಲಿ ಭಾರೀ ಮಳೆಯಾಗುತ್ತಿದೆ.

ಇನ್ನು 15 ದಿನ ವಿದ್ಯುತ್ ಇಲ್ಲ

ಇನ್ನು 15 ದಿನ ವಿದ್ಯುತ್ ಇಲ್ಲ

ಮಲೆನಾಡು ಭಾಗದಲ್ಲಿ ಗಾಳಿ ಮಳೆ ಪರಿಣಾಮ ಮರಗಳು ಧರೆಗುರುಳಿದ್ದು , ವಿದ್ಯುತ್ ಸಂಪರ್ಕ ಕಡಿತವಾಗಿದೆ. ವಿಶ್ವವಿಖ್ಯಾತ ಜೋಗ ಜಲಪಾತ ವೈಭವ ತೆರೆದುಕೊಂಡಿದ್ದು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಮರಗಳೂ ಉರುಳಿದ ಪರಿಣಾಮ ರಾಜ್ಯಾದ್ಯಂತ 5 ಸಾವು ಸಂಭವಿಸಿದೆ.

ಮಳೆ ಪ್ರಮಾಣ ನೋಡಿ

ಮಳೆ ಪ್ರಮಾಣ ನೋಡಿ

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ 28 ಸೆಂಮೀ ಮಳೆಯಾಗಿದೆ. ಉಳಿದಂತೆ ಕೊಟ್ಟಿಗೆಹಾರ, ಕಳಸ, ಸಿದ್ದಾಪುರ, ಶೃಂಗೇರಿ, ಮಂಚಿಕೇರಿ, ಲೋಂಡಾದಲ್ಲಿ 13 ಸೆಂ ಮೀ ಮಳೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+