Rain Alert: ಮುಂದಿನ 12 ಗಂಟೆಯಲ್ಲಿ ಗುಡುಗು ಸಹಿತ ಭರ್ಜರಿ ಮಳೆ! ಶಾಲಾ & ಕಾಲೇಜಿಗೆ ರಜೆ ಘೋಷಣೆ
ಈ ಮಳೆರಾಯ ಹಿಂಗೆ ಆಡುತ್ತಾನೆ, ಭೂಮಿಯ ಮೇಲೆ ನೀರು ಇಲ್ಲದೆ ಜನರು ಪರದಾಡುವ ಸಮಯದಲ್ಲಿ ಕೈಕೊಟ್ಟು ಹೋಗುತ್ತಾನೆ. ಮಳೆ ಬಾರದೆ ಜನರು ಪರದಾಡುವಂತೆ ಮಾಡ್ತಾ ಆಟ ನೋಡುತ್ತಾನೆ, ಆದರೆ ಮಳೆ ಬೇಡ ಎನ್ನುವ ಸಮಯದಲ್ಲಿ ಭೀಕರ ಮಳೆ ಸುರಿಸುತ್ತಾ ಸಮಸ್ಯೆ ತಂದಿಡುತ್ತಾನೆ. ಆದ್ರೆ ಈ ಬಾರಿ ಮಾತ್ರ ಮಳೆರಾಯ ಸರಿಯಾದ ಸಮಯಕ್ಕೆ ಎಂಟ್ರಿ ಕೊಡುತ್ತಿದ್ದು, ಬರದ ನಡುವೆಯೂ ಜನರಿಗೆ ಬಿಗ್ ರಿಲೀಫ್ ಸಿಗುತ್ತಿದೆ.
ಮನುಷ್ಯನ ಅತಿಯಾದ ದುರಾಸೆ & ಪ್ರಕೃತಿ ಮೇಲೆ ಅತಿಯಾದ ಒತ್ತಡ ಹಾಕುತ್ತಿರುವ ಪರಿಣಾಮ ವಾತಾವರಣದಲ್ಲಿ ಭಾರಿ ಬದಲಾವಣೆ ಎದುರಾಗಿದೆ. ಹೀಗಾಗಿ ಮಳೆ ವಿಚಾರ ಗೊಂದಲ ಸೃಷ್ಟಿ ಮಾಡುತ್ತಿದ್ದು ಮಳೆ ಬರಬೇಕಾದ ವೇಳೆ ಸರಿಯಾಗಿ ಮಳೆ ಬರ್ತಿಲ್ಲ. ಮಳೆಗಾಲ ಹೊರತು ಬೇರೆ ಸಮಯದಲ್ಲಿ ಹೆಚ್ಚು ಮಳೆ ಬೀಳುತ್ತಿದೆ. ಹವಾಮಾನ ವೈಪರಿತ್ಯದ ಪರಿಣಾಮ ಭೂಮಿ ಮೇಲೆ ಎಲ್ಲಾ ಅಯೋಮಯ ಆಗ್ತಿದೆ. ಈ ಸಂದರ್ಭದಲ್ಲೇ ಬೇಸಿಗೆ ಸಮಯದಲ್ಲಿ ಭಾರಿ ಮಳೆಯು ಬೀಳುವ ಭಾರಿ ಮುನ್ನೆಚ್ಚರಿಕೆ ನೀಡಲಾಗಿದ್ದು, ಶಾಲಾ & ಕಾಲೇಜುಗಳಿಗೆ ರಜೆ ಘೋಷಿಸಿದೆ ಸರ್ಕಾರ.

ಯಾವ ಯಾವ ಭಾಗದಲ್ಲಿ ಮಳೆ?
ಮಳೆ ಬಿದ್ದರೆ ಭೂಮಿ ತಂಪಾಗುತ್ತದೆ, ಈ ಮೂಲಕ ಬಿರು ಬಿಸಿಲಿನ ಝಳದಿಂದ ಮುಕ್ತಿಯ ಪಡೆಯಬಹುದು ಅನ್ನೋದು ಜನರ ನಿರೀಕ್ಷೆ. ಆದರೆ ಬೇಸಿಗೆ ಸಮಯದಲ್ಲಿ ಮಳೆ ಬಂದು ಭೂಮಿ ತಂಪಾಗುವುದು ಅಪರೂಪ. ಆದರೂ ಈಗ, ಗುಡುಗು & ಸಿಡಿಲು ಸಹಿತವಾಗಿಯೇ ಮಳೆ ಬೀಳುತ್ತೆ ಅಂತಿದ್ದಾರೆ ಹವಾಮಾನ ಇಲಾಖೆ ಅಧಿಕಾರಿಗಳು. ಹಾಗಾದ್ರೆ ಯಾವ ಯಾವ ಪ್ರದೇಶದಲ್ಲಿ ಮಳೆ ಬೀಳಲಿದೆ? ಎಷ್ಟು ಪ್ರಮಾಣದಲ್ಲಿ ಮಳೆ ಬೀಳುತ್ತೆ ಗೊತ್ತಾ? ಮುಂದೆ ಓದಿ.
ಶಾಲಾ & ಕಾಲೇಜಿಗೆ ರಜೆ ಘೋಷಣೆ
ಈಗಿನ ಮಾಹಿತಿ ಪ್ರಕಾರ ಜಮ್ಮು & ಕಾಶ್ಮೀರ, ಭಾರತದ ರಾಜಧಾನಿ ನವದೆಹಲಿ ಸೇರಿದಂತೆ ಉತ್ತರ ಭಾರತದ ಬಹುತೇಕ ಪ್ರದೇಶಗಳಲ್ಲಿ ಭಾರಿ ಮಳೆ ಬೀಳುತ್ತಿದೆ. ಅದ್ರಲ್ಲೂ ಕಾಶ್ಮೀರ & ಅದರ ಸುತ್ತಮುತ್ತಲ ಪ್ರದೇಶದಲ್ಲಿ ಪರಿಸ್ಥಿತಿ ಕೈಮೀರಿ ಹೋಗಿದೆ. ಹೀಗಿದ್ದಾಗಲೇ ಭಾರತದ ಶತ್ರು ದೇಶ ಪಾಕಿಸ್ತಾನದಲ್ಲಿ ಭೀಕರ ಪ್ರವಾಹದ ಭೀತಿ ಎದುರಾಗಿದ್ದು, ಜನರು ಜೀವವನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಇದೇ ಕಾರಣಕ್ಕೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲೀಗ ಶಾಲೆ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎನ್ನಲಾಗಿದೆ. ಇದರ ಜೊತೆ ನಮ್ಮ ಕರ್ನಾಟಕದಲ್ಲಿ ಕೂಡ ಮಳೆ ಬೀಳುವುದು ಬಹುತೇಕ ಪಕ್ಕಾ ಆಗಿದೆ. ಹಾಗಾದ್ರೆ ಕರ್ನಾಟಕ ರಾಜ್ಯದಲ್ಲಿ ಯಾವಾಗ ಮಳೆ ಬೀಳುತ್ತದೆ? ಯಾವ ಯಾವ ಜಿಲ್ಲೆಗೆ ಮಳೆಯಾಗುತ್ತೆ ಗೊತ್ತೆ? ಈ ಬಗ್ಗೆ ಮಾಹಿತಿಗೆ ಮುಂದೆ ಓದಿ.

ಬೆಂಗಳೂರು, ಮೈಸೂರು, ದಾವಣಗೆರೆ...
ಹವಾಮಾನ ಇಲಾಖೆ ತಜ್ಞರ ಪ್ರಕಾರ ಕರ್ನಾಟಕದಲ್ಲಿ ವರುಣ ದೇವ ಕರುಣೆಯ ತೋರಿಸಲಿದ್ದು, ಮುಂದಿನ ಕೆಲವೇ ದಿನದಲ್ಲಿ ಮಳೆ ಬೀಳುವ ನಿರೀಕ್ಷೆ ಇದೆ. ಅದರಲ್ಲೂ, ಮಾರ್ಚ್ ಮೊದಲನೇ ವಾರದಲ್ಲಿ ದಾವಣಗೆರೆ, ಬೆಂಗಳೂರು, ಮೈಸೂರು, ಕೊಡಗು ಮತ್ತು ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆ ಬರಲಿದೆ ಅಂತ ಈಗ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇದರ ಜೊತೆಗೆ ಕರ್ನಾಟಕದ ಇನ್ನೂ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಬೀಳುವ ನಿರೀಕ್ಷೆಯು ದಟ್ಟವಾಗಿದೆ.
2023ರಲ್ಲಿ ಭಾರಿ ಮಳೆ ಕೊರತೆ
ಒಟ್ನಲ್ಲಿ ಈ ಮೂಲಕ ಬಿರು ಬೇಸಿಗೆ ಸಮಯದಲ್ಲಿ ಮಳೆ ಬಿದ್ದರೆ ಒಂದಷ್ಟು ನೆಮ್ಮದಿ ಸಾಧ್ಯ ಅಂತಾ ಜನರು ಕೂಡ ಕಾಯುತ್ತಿದ್ದಾರೆ. ವರುಣ ದೇವನ ಬಳಿ, ಈ ಬಗ್ಗೆ ಮನವಿಯನ್ನೂ ಮಾಡುತ್ತಿದ್ದಾರೆ. ಹೀಗಾಗಿ ಎಷ್ಟು ಪ್ರಮಾಣದಲ್ಲಿ ಮಳೆ ಸುರಿಯಲಿದೆ ಅನ್ನೋದು ಇನ್ನೇನು ಕೆಲವೇ ದಿನದಲ್ಲಿ ನಿಖರವಾಗಲಿದೆ. ಅದರಲ್ಲೂ 2023ರಲ್ಲಿ ಭಾರಿ ಮಳೆಯ ಕೊರತೆ ನಮ್ಮ ರಾಜ್ಯಕ್ಕೆ ಕಾಡಿದ್ದ ಕಾರಣ ಕನ್ನಡಿಗರು ಬಸವಳಿದು ಹೋಗಿದ್ದಾರೆ. ರೈತರು ತಮ್ಮೆಲ್ಲಾ ಬೆಳೆ ಕಳೆದುಕೊಂಡು ಪರದಾಡುತ್ತಿದ್ದಾರೆ.
31 ಡಿಗ್ರಿ ಸೆಲ್ಸಿಯಸ್ ತಾಪಮಾನ!
ನಮ್ಮ ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿ, ಹಲವಾರು ಜಿಲ್ಲೆಗಳಲ್ಲಿ ಬಿಸಿಲು ಹೆಚ್ಚಾಗುತ್ತಿದೆ. ಅದರಲ್ಲೂ ಬೆಂಗಳೂರಲ್ಲಿ 31 ಡಿಗ್ರಿ ಸೆಲ್ಸಿಯಸ್ ಮೀರಿ ತಾಪಮಾನ ಹೆಚ್ಚಾಗಿದೆ. ಬೆಂಗಳೂರು ಸೇರಿ, ರಾಜ್ಯದಲ್ಲಿ ತಾಪಮಾನ ಹೆಚ್ಚಾಗುತ್ತ ಇದೆ. ಕರ್ನಾಟಕದಲ್ಲೂ ತಾಪಮಾನ ಈ ಬಾರಿ ವಾಡಿಕೆಗಿಂತ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ ಅಂತಿವೆ ಅಂಕಿ, ಅಂಶಗಳು. ಇದೀಗ ಹವಾಮಾನ ಇಲಾಖೆಯ ತಜ್ಞರ ಪ್ರಕಾರ ಕರ್ನಾಟಕದಲ್ಲಿ ವರುಣ ದೇವ ಕರುಣೆ ತೋರಿಸಲಿದ್ದು, ಮುಂದಿನ ಕೆಲವೇ ದಿನದಲ್ಲಿ ಮಳೆ ಬೀಳುವ ನಿರೀಕ್ಷೆ ಇದೆ. ಮಾರ್ಚ್ ಮೊದಲ ವಾರದಲ್ಲಿ ದಾವಣಗೆರೆ, ಬೆಂಗಳೂರು, ಕೊಡಗು, ಮೈಸೂರು ಮತ್ತು ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳುತ್ತೆ ಅಂತಿದ್ದಾರೆ, ಹವಾಮಾನ ಇಲಾಖೆ ತಜ್ಞರು.
ನದಿ ಹರಿಯುವ ಪ್ರದೇಶದಲ್ಲೇ ಸಂಕಷ್ಟ
ಕಾವೇರಿ, ಕೃಷ್ಣಾ, ಹೇಮಾವತಿ, ತುಂಗಾ, ಭದ್ರಾ ಹೀಗೆ ಕನ್ನಡಿಗರ ನಾಡಿನಲ್ಲಿ ದೊಡ್ಡ ದೊಡ್ಡ ನದಿಗಳೇ ಬತ್ತುತ್ತಿವೆ. ನದಿ ಹರಿಯುವ ಹಳ್ಳಿಗಳಲ್ಲೇ ನೀರಿಗೆ ಬರ ಎದುರಾಗಿದೆ, ಹಾಗೇ ಬೋರ್ ಕೂಡ ಬತ್ತಿ ಹೋಗುತ್ತಿವೆ. ಇದೇ ಕಾರಣಕ್ಕೆ ಜನರು ಕೂಡ ಪರದಾಡುತ್ತಿದ್ದಾರೆ. ಹೀಗಾಗಿ ಮಳೆಗೆ ಮೊರೆ ಇಟ್ಟಿದ್ದರು ಜನ & ರೈತರು. ಹವಾಮಾನ ಇಲಾಖೆ ಇದೀಗ ನೀಡುತ್ತಿರುವ ಮಾಹಿತಿ ಪ್ರಕಾರ ಮುಂದಿನ ಕೆಲವು ದಿನಗಳ ಕಾಲ ಭಾರಿ ಮಳೆ ಸುರಿಯುವ ಮುನ್ಸೂಚನೆ ಸಿಗುತ್ತಿದೆ. ಹೀಗಾಗಿ ಜನ ಕೂಡ ಖುಷಿಯಿಂದ ಕಾಯುತ್ತಿದ್ದಾರೆ.
ಕರ್ನಾಟಕಕ್ಕೂ ಬಾರೋ ಮಳೆರಾಯ...
ಏನೇ ಹೇಳಿ ಮಳೆ ಬಂದರೆ ಮಾತ್ರ ನಮ್ಮ ಭೂಮಿಗೆ ಕಳೆ, ಇಲ್ಲವಾದ್ರೆ ಪರದಾಟ ಗ್ಯಾರಂಟಿ. ಈ ಕಾರಣ ಸರಿಯಾಗಿ ಮಳೆ ಬೀಳಲಿ ಅಂತಾ ರೈತರು ದೇವರಲ್ಲಿ ಬೇಡುತ್ತಾರೆ. ಹೀಗಿದ್ದಾಗಲೇ ಕಳೆದ ವರ್ಷ ಮಳೆ ಕೈಕೊಟ್ಟಿತ್ತು. ಆದ್ರೆ ಈಗ ಮತ್ತೆ ಮಳೆ ಶುರುವಾಗುತ್ತಿದೆ. ದೇಶದ ಹಲವು ರಾಜ್ಯದಲ್ಲಿ ಮಳೆ ಹಾಗೂ ಆಲಿಕಲ್ಲು ಬೀಳಲಿದೆ ಎನ್ನಲಾಗಿದೆ. ಇದರ ಜೊತೆಗೆ ಕರ್ನಾಟಕದಲ್ಲಿ ಕನ್ನಡಿಗರ ನೆಲವೂ ಮಳೆಯ ಕಾರಣ ಒದ್ದೆಯಾಗಲಿದೆ. ಉತ್ತಮವಾಗಿ ಬೆಳೆ ಬೀಳಲಿದೆ ಅಂತಾ ಕೃಷಿಕರು ಕಾಯುತ್ತಿದ್ದಾರೆ. ಹಾಗೇ ಗ್ರಾಮೀಣ ಭಾಗದಲ್ಲಿ ಇಂತಹ ಸಮಯದಲ್ಲಿ ಮಳೆ ಬಿದ್ದರೆ ಇದೀಗ ಕುಡಿಯುವ ನೀರಿಗೆ ಎದುರಾಗಿರುವ ಸಮಸ್ಯೆ ಕೂಡ ಸರಿಹೋಗಲಿದೆ.
ಭಾರಿ ಮಳೆ, ಶಾಲಾ & ಕಾಲೇಜು...
ಉತ್ತರ ಭಾರತದ ಬಹುತೇಕ ರಾಜ್ಯದಲ್ಲಿ ಗುಡುಗು & ಸಿಡಿಲು ಸಹಿತ ಮಳೆ ಬೀಳುತ್ತಿದೆ. ಈ ಕಾರಣಕ್ಕೆ ಅಲ್ಲಿನ ಜನರು ಸಂಪೂರ್ಣ ನಲುಗಿ ಹೋಗಿದ್ದಾರೆ. ಅದರಲ್ಲೂ ಪರೀಕ್ಷೆ ಆರಂಭ ಆಗಿರುವ ಸಮಯದಲ್ಲೇ ಇಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಹೀಗಾಗಿ ಉತ್ತರ ಭಾರತದಲ್ಲಿ ಬಹುತೇಕ ರಾಜ್ಯಗಳ ಶಾಲಾ & ಕಾಲೇಜು ಬಂದ್ ಮಾಡಿ ರಜೆ ಘೋಷಣೆ ಮಾಡಲಾಗಿದ್ದು, ಪರೀಕ್ಷೆಗಳು ಮುಂದೂಡಿಕೆ ಆಗುವ ಸಾಧ್ಯತೆ ಇದೆ. ಅಲ್ಲದೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನೂ ಹಲವು ದಿನಗಳ ಕಾಲ ಇದೇ ರೀತಿ ಉತ್ತರ ಭಾರತದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಹೀಗಾಗಿ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ.
ಕರ್ನಾಟಕದ ಡ್ಯಾಂಗಳ ನೀರಿನ ಮಾಹಿತಿ
1) ಕೆಆರ್‌ಎಸ್ ಜಲಾಶಯ: ಈ ಡ್ಯಾಂನಲ್ಲಿ 49 ಟಿಎಂಸಿ ಗರಿಷ್ಠ ಸಾಮರ್ಥ್ಯವಿದ್ದು, ಈಗ ಜಲಾಶಯದಲ್ಲಿ 15.97 ಟಿಎಂಸಿ ನೀರು ಸಂಗ್ರಹವಾಗಿದೆ. ಆದರೆ ಕಳೆದ ವರ್ಷ ಈ ಸಮಯಕ್ಕೆ ಕೆಆರ್‌ಎಸ್ ಜಲಾಶಯದಲ್ಲಿ 28.05 ಟಿಎಂಸಿ ನೀರು ಸಂಗ್ರಹವಾಗಿತ್ತು.
2) ಕಬಿನಿ ಜಲಾಶಯ: ಕಾವೇರಿ ಕೊಳ್ಳದ ಕಬಿನಿ ಡ್ಯಾಂನಲ್ಲಿ 19.52 ಟಿಎಂಸಿ ಗರಿಷ್ಠ ನೀರು ಸಂಗ್ರಹಿಸಬಹುದು. ಆದರೆ ಈಗ 11.66 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ವೇಳೆಗೆ ಕಬಿನಿ ಜಲಾಶಯದಲ್ಲಿ 10.56 ನೀರು ಸಂಗ್ರಹವಾಗಿತ್ತು.
3) ಹೇಮಾವತಿ ಡ್ಯಾಂ: ಕಾವೇರಿ ನದಿ ಉಪನದಿ ಹೇಮಾವತಿಗೆ ಕಟ್ಟಿರುವ ಡ್ಯಾಂಗೆ ಕೂಡ ನೀರಿನ ಹರಿವು ಕಡಿಮೆಯಾಗಿದೆ. 37.10 ಟಿಎಂಸಿ ಸಾಮರ್ಥ್ಯದ ಹೇಮಾವತಿ ಜಲಾಶಯವು, ಕಳೆದ 4-5 ವರ್ಷದಿಂದ ತುಂಬಿ ತುಳುಕಿತ್ತು. ಈ ಬಾರಿ ಕೇವಲ 13.38 ಟಿಎಂಸಿ ನೀರನ್ನು ಹೊಂದಿದೆ. ಕಳೆದ ವರ್ಷ ಈ ಸಮಯಕ್ಕೆ 21.50 ಟಿಎಂಸಿ ನೀರು ಡ್ಯಾಂನಲ್ಲಿ ಇತ್ತು.
4) ತುಂಗಭದ್ರಾ ಜಲಾಶಯ: ಬಯಲು ಸೀಮೆ ಜೀವನಾಡಿ ತುಂಗಭದ್ರಾ ಡ್ಯಾಂ ಪೂರ್ತಿಯಾಗಿ ತುಂಬಿಲ್ಲ. ಗರಿಷ್ಠ 105 ಟಿಎಂಸಿ ಸಾಮರ್ಥ್ಯ ಇರುವ ತುಂಗಭದ್ರಾ ಡ್ಯಾಂನಲ್ಲಿ ಇದೀಗ ಕೇವಲ 8.65 ಟಿಎಂಸಿ ನೀರು ಸಂಗ್ರಹವಾಗಿದೆ. ಆದ್ರೆ ಕಳೆದ ವರ್ಷ ಬರೋಬ್ಬರಿ 28.69 ಟಿಎಂಸಿ ನೀರು ಸಂಗ್ರಹವಿತ್ತು.
5) ಆಲಮಟ್ಟಿ ಡ್ಯಾಂ: ಉತ್ತರ ಕರ್ನಾಟಕದ ಜನರ ಜೀವನಾಡಿ, ಆಲಮಟ್ಟಿ ಡ್ಯಾಂಗೆ ಮಾತ್ರ ಈ ಬಾರಿ ಉತ್ತಮವಾಗಿ ನೀರು ಹರಿದು ಬಂದಿದೆ. ಇಲ್ಲಿಗೆ ಮಹಾರಾಷ್ಟ್ರದಿಂದ ನೀರು ಬರಬೇಕಿದೆ. ಆಲಮಟ್ಟಿ ಜಲಾಶಯದ ಒಟ್ಟು ಸಾಮರ್ಥ್ಯ 123.08 ಟಿಎಂಸಿ, ಇದೀಗ 48.70 ಟಿಎಂಸಿ ಸಂಗ್ರಹವಾಗಿದೆ. ಆದ್ರೆ ಕಳೆದ ವರ್ಷ ಈ ಸಮಯಕ್ಕೆ 49.97 ಟಿಎಂಸಿ ನೀರು ಇತ್ತು.
6) ಲಿಂಗನಮಕ್ಕಿ ಜಲಾಶಯ: ಕರ್ನಾಟಕದ ದೊಡ್ಡ ಡ್ಯಾಂ ಎನಿಸಿಕೊಂಡಿರುವ ಲಿಂಗನಮಕ್ಕಿ ಜಲಾಶಯ ಈ ಬಾರಿ ಅರ್ಧ ಭಾಗ ಕೂಡ ತುಂಬಲಿಲ್ಲ. ಮಲೆನಾಡು ಭಾಗದಲ್ಲಿ ಭರ್ಜರಿ ಮಳೆ ಬೀಳದ ಹಿನ್ನೆಲೆ ಲಿಂಗನಮಕ್ಕಿ ಜಲಾಶಯಕ್ಕೆ ಕಡಿಮೆ ನೀರು ಬಂದಿತ್ತು. ಹೀಗಾಗಿ ಲಿಂಗನಮಕ್ಕಿ ಡ್ಯಾಂ ಒಟ್ಟು ಸಾಮರ್ಥ್ಯ 151 ಟಿಎಂಸಿ ಇದ್ದರೂ ಈಗ 39.07 ಟಿಎಂಸಿ ನೀರು ಇದೆ. ಕಳೆದ ವರ್ಷ ಈ ಸಮಯಕ್ಕೆ 66.15 ಟಿಎಂಸಿ ನೀರು ಇತ್ತು.
7) ಭದ್ರಾ ಡ್ಯಾಂ: ಭದ್ರಾ ಡ್ಯಾಂನಲ್ಲಿ 71 ಟಿಎಂಸಿ ಗರಿಷ್ಠ ನೀರು ಸಂಗ್ರಹಿಸಬಹುದು. ಆದರೆ ಕೇವಲ 25.20 ಟಿಎಂಸಿ ನೀರು ಸಂಗ್ರಹವಾಗಿದ್ದು ಕಳೆದ ವರ್ಷ ಈ ಸಮಯಕ್ಕೆ ಭದ್ರಾ ಡ್ಯಾಂ 51.53 ಟಿಎಂಸಿ ನೀರನ್ನು ಹೊಂದಿತ್ತು. ಈ ಮೂಲಕ ಭದ್ರಾ ಜಲಾಶಯದ ಅಚ್ಚುಕಟ್ಟು ಭಾಗದ ರೈತರು ನೀರೇ ಇಲ್ಲದೆ ಪರದಾಡುವ ಪರಿಸ್ಥಿತಿ ಬಂದಿದೆ. ತಮ್ಮ ತಮ್ಮ ತೋಟಗಳನ್ನು ಉಳಿಸಿಕೊಳ್ಳಲು ಪರದಾಡುವಂತಾಗಿದೆ.
8) ಘಟಪ್ರಭಾ ಜಲಾಶಯ: ಡ್ಯಾಂನಲ್ಲಿ 51 ಟಿಎಂಸಿ ಗರಿಷ್ಠ ಸಾಮರ್ಥ್ಯವಿದ್ದು, ಈಗ ಕೇವಲ 27.89 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಈ ವೇಳೆಗೆ ಘಟಪ್ರಭಾ ಜಲಾಶಯದಲ್ಲಿ 24.01 ಟಿಎಂಸಿ ನೀರು ಇತ್ತು. ಬೇಸಿಗೆ ದಗೆಯ ನಡುವೆ ಈ ಡ್ಯಾಂನಲ್ಲೂ ನೀರಿನ ಪ್ರಮಾಣ ಭಾರಿ ಪ್ರಮಾಣದಲ್ಲಿ ಇಳಿಯುತ್ತಾ ಸಾಗುತ್ತಿದೆ.
ಕಳೆದ ವರ್ಷ ಅಂದ್ರೆ 2023ರಲ್ಲಿ ಇನ್ನೇನು ಮುಂಗಾರು ಮಳೆ ಆರಂಭವಾಗುವ ಸಮಯಕ್ಕೆ, ಭೀಕರ ಚಂಡಮಾರುತ ಅಪ್ಪಳಿಸಿದ ಪರಿಣಾಮ ಎಲ್ಲವೂ ಅಲ್ಲೋಲ ಕಲ್ಲೋಲವಾಗಿತ್ತು. ಈ ಕಾರಣಕ್ಕೆ ಜನರು ಕೂಡ ಮಳೆ ಇಲ್ಲದೆ ಪರದಾಡಿದ್ದರು. ಕರ್ನಾಟಕದ ಯಾವುದೇ ಡ್ಯಾಂಗೂ ಸರಿಯಾಗಿ ನೀರು ಬರಲೇ ಇಲ್ಲ. ಹೀಗಾಗಿ ಇಡೀ ಕರ್ನಾಟಕ ಈಗ ಭಾರಿ ನೀರಿನ ಕೊರತೆಯ ಎದುರಿಸುತ್ತಿದೆ. ಜನರು ಕೂಡ ಹನಿ ಹನಿ ನೀರಿಗೂ ಪರಿತಪಿಸುತ್ತಿದ್ದಾರೆ. ಆದರೆ 2024 ರಲ್ಲಿ ಮಾತ್ರ ಕರ್ನಾಟಕಕ್ಕೆ ಭರ್ಜರಿ ಮಳೆ ಬೀಳುವ ಮುನ್ಸೂಚನೆ ಸಿಕ್ಕಿದೆ! ಹವಾಮಾನ ಇಲಾಖೆ ಈ ಬಗ್ಗೆ ಭರ್ಜರಿ ಸುದ್ದಿ ನೀಡಿದೆ. ಹಾಗಾದ್ರೆ ಕರ್ನಾಟಕದಲ್ಲಿ ಯಾವಗಿನಿಂದ ಮಳೆ ಬರುತ್ತೆ?
ಕರ್ನಾಟಕದಲ್ಲಿ ಈ ವಾರ ಮಳೆ ಗ್ಯಾರಂಟಿ?
ಹವಾಮಾನ ಇಲಾಖೆ ಈ ಹಿಂದೆಯೇ ನೀಡಿದ ಮಾಹಿತಿ ಪ್ರಕಾರ, ಕನ್ನಡಿಗರ ನೆಲದಲ್ಲಿಯೂ ಭಾರಿ ಮಳೆಯ ನಿರೀಕ್ಷೆ ಇದೆ. ಹವಾಮಾನ ಇಲಾಖೆ ಅಧಿಕಾರಿಗಳು ನೀಡಿದ್ದ ಮಾಹಿತಿಯಂತೆ ಈ ವಾರದಲ್ಲಿ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲೂ ಮಳೆ ಬೀಳುವ ನಿರೀಕ್ಷೆ ಇದೆ. ಹೀಗಾಗಿ ಕನ್ನಡಿಗರು ಕೂಡ ಉತ್ತಮವಾಗಿ ಮಳೆ ಬೀಳಲಿ ದೇವರೆ ಅಂತಾನು ಕಾಯುತ್ತಿದ್ದಾರೆ. ಅವರ ಪ್ರಶ್ನೆಗೆ ಇನ್ನೇನು ಕೆಲವೇ ದಿನದಲ್ಲಿ ಉತ್ತರ ಸಿಗಲಿದ್ದು. ಅದರಲ್ಲೂ ಒಂದು ಸರಿಯಾದ ಮಳೆ ಕರ್ನಾಟಕಕ್ಕೆ ಬಿದ್ದರೆ, ಪರಿಸ್ಥಿತಿ ಹಿಡಿತಕ್ಕೆ ಸಿಗಲಿದೆ. ಇಲ್ಲವಾದರೆ ಬರದ ನಡುವೆ ಬದುಕು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ.












Click it and Unblock the Notifications