Heavy Rain: ಮಳೆ.. ಮಳೆ.. ಭರ್ಜರಿ ಮಳೆ! ಯಾವ ಯಾವ ಜಿಲ್ಲೆಗಳಲ್ಲಿ?
ಮಳೆ ಇಲ್ಲದೆ, ಬೆಳೆ ಕೈಗೆ ಬರದೆ ಕಂಗಾಲಾಗಿ ಕೂತಿರುವ ರೈತರಿಗೆ ಗುಡ್ ನ್ಯೂಸ್ ಸಿಗುತ್ತಿದೆ. ಇಷ್ಟು ದಿನ ಮಳೆ ಇಲ್ಲ ಅಂತಾ ಪರದಾಡಿದ್ದ ಅನ್ನದಾತ ರೈತರಿಗೆ ಭರ್ಜರಿ ಮಳೆ ಸಿಂಚನ, ಇನ್ನು ಮುಂದೆ ಆಗಲಿದೆ. ಅದರಲ್ಲೂ, ಕರ್ನಾಟಕದಲ್ಲಿ ಭಾರಿ ಮಳೆ ಸುರಿಯುವ ಕುರಿತಾಗಿ ಈಗ ಮುನ್ಸೂಚನೆ ಸಿಕ್ಕಿದೆ ಹವಾಮಾನ ಇಲಾಖೆಯಿಂದ. ಹಾಗಾದ್ರೆ ಯಾವ ಯಾವ ಜಿಲ್ಲೆಗೆ ಭರ್ಜರಿ ಮಳೆ ಬರಲಿದೆ? ಬನ್ನಿ ತಿಳಿಯೋಣ.
2024ರ ಆರಂಭದಲ್ಲಿ ಪರಿಸ್ಥಿತಿ ಹೇಗೆ ಆಗಿತ್ತು ಅಂದ್ರೆ ಮಳೆಯೇ ಇಲ್ಲದೆ ಜನರು ನಲುಗಿದ್ದರು. ಬೆಳೆಗೆ ಬಿಡಿ, ಕನಿಷ್ಠ ಕುಡಿಯುವ ನೀರಿಗೂ ನರಳುವ ಪರಿಸ್ಥಿತಿ ನಿರ್ಮಾಣ ಆಗಿತ್ತು. ಹೀಗಾಗಿ ಜನರು ದೇವರ ಮೊರೆ ಹೋಗಿದ್ದರು. ಕಪ್ಪೆಗೆ ಮದುವೆ ಮಾಡಿಸೋದು, ಕತ್ತೆಗಳಿಗೆ ಮದುವೆ ಮಾಡಿಸೋದು ಹೀಗೆ ನಾನಾ ತಂತ್ರಗಳ ಮೊರೆ ಹೋಗಿದ್ದರು. ಇನ್ನೂ ಕೆಲವರು ಹೋಮ & ಹವನ ಮಾಡಿಸಿ ವರುಣ ದೇವನಿಗೆ ಪ್ರಿಯವಾಗುವ ಪ್ರಯತ್ನ ಮಾಡಿದ್ದರು.

ಕಳೆದ ತಿಂಗಳು ಭರ್ಜರಿ ಮಳೆ!
ಇಂತಹ ಪರಿಸ್ಥಿತಿ ಎದುರಾದ ಸಮಯದಲ್ಲೇ ಮಳೆರಾಯ ಕರುಣೆ ತೋರಿಸಿ ಕನ್ನಡಿಗರ ನೆಲವನ್ನ ತಂಪು ಮಾಡಿದ್ದ. ಈ ರೀತಿ ಸತತವಾಗಿ ಭರ್ಜರಿ ಮಳೆ ಬಂದ ಕಾರಣ ಏಪ್ರಿಲ್ & ಮೇ ತಿಂಗಳಲ್ಲಿ ಒಂದಷ್ಟು ಖುಷಿ ಮೂಡಿತ್ತು. ಆದರೆ ಈಗ ಮತ್ತೆ ಮಳೆ ನಿಂತು ಹೋಗಿದೆ. ಹಾಗಾದರೆ ಭರ್ಜರಿ ಮಳೆ ಬರೋದು ಯಾವಾಗ? ಕರ್ನಾಟಕದ ಯಾವ ಯಾವ ಜಿಲ್ಲೆಯಲ್ಲಿ ಮಳೆ ಅಬ್ಬರಿಸಲಿದೆ? ಸಂಪೂರ್ಣ ಮಾಹಿತಿಯನ್ನ ಇಲ್ಲಿ ತಿಳಿಯೋಣ ಬನ್ನಿ.
ಯಾವ ಜಿಲ್ಲೆಗಳಲ್ಲಿ ಮತ್ತೆ ಮಳೆ?
ಜೂನ್ 1ರಿಂದ ಮಳೆ ಅಬ್ಬರ ಮತ್ತೆ ಶುರುವಾಗುವ ನಿರೀಕ್ಷೆ ಇದ್ದು, ಇಂದು ಮಳೆ ಆರ್ಭಟದ ಮುನ್ಸೂಚನೆ ಸಿಕ್ಕಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕೊಡಗು & ಚಿಕ್ಕಮಗಳೂರು, ಉತ್ತರ ಕನ್ನಡದಲ್ಲಿ ಮಳೆಯ ಮುನ್ಸೂಚನೆ ಇದೆ. ಬೆಂಗಳೂರು ಸುತ್ತಮುತ್ತ ಕೂಡ ಮಳೆಯಾಗುವ ನಿರೀಕ್ಷೆ ಇದ್ದು ಜೂನ್ 3 ರಂದು ಮಳೆ ತನ್ನ ಅಸಲಿ ಮುಖ ತೋರಿಸಲಿದೆ ಎಂಬ ಮಾಹಿತಿ ಇದೆ. ಯಾಕಂದ್ರೆ ಕರ್ನಾಟಕದ ಭಾಗಶಃ ಜಿಲ್ಲೆಗಳಲ್ಲಿ ನಾಡಿದ್ದು ಅಂದರೆ, ಜೂನ್ 3 ರಿಂದ ಭರ್ಜರಿ ಮಳೆ ಸುರಿಯಲು ಆರಂಭಿಸುವ ಸಾಧ್ಯತೆ ಇದೆ.
ಕಲಬುರಗಿ, ವಿಜಯಪುರ, ಗದಗ..
ಜೂನ್ 3 ರಂದು ಉತ್ತರ ಕರ್ನಾಟಕದ ವಿಜಯಪುರ, ಕಲಬುರಗಿ & ರಾಯಚೂರು ಸೇರಿದಂತೆ ಯಾದಗಿರಿ, ಬೀದರ್, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಕೊಪ್ಪಳ, ಧಾರವಾಡ, ಗದಗ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಹೀಗೆ ಭಾರಿ & ಭರ್ಜರಿ ಮಳೆ ಆಗಮನಕ್ಕೆ ಈಗ ಮುಹೂರ್ತ ಫಿಕ್ಸ್ ಆಗಿದೆ. ರೈತರು ಕೂಡ ಈ ಸುದ್ದಿಯನ್ನ ಕೇಳಿ ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದಾರೆ. ವಾತಾವರಣದಲ್ಲಿ ಯಾವುದೆ ಏರುಪೇರು ಆಗದೇ ಇದ್ದರೆ ಮುನ್ಸೂಚನೆ ನಿಜವಾಗಲಿದೆ. ಇದರ ಜೊತೆಗೆ ಮುಂಗಾರು ಮಳೆ ಕೂಡ ಅಬ್ಬರಿಸಲು ಶುರು ಮಾಡಲಿದೆ.
ತುಂಬುತ್ತಿವೆ ಕರ್ನಾಟಕದ ಡ್ಯಾಂಗಳು
ಮಳೆ ಇಲ್ಲದೆ ಬೆಳೆ ಕಳೆದುಕೊಳ್ಳುವ ಹಂತಕ್ಕೆ ಬಂದು ಚಿಂತೆಯಲ್ಲಿ ಮುಳುಗಿದ್ದ, ಕನ್ನಡ ನಾಡಿನ ರೈತರಿಗೆ ಭಾರಿ ಸುದ್ದಿ ಸಿಕ್ಕಿದೆ. ಏನಂದರೆ ಕರ್ನಾಟಕದಲ್ಲಿ ಮಳೆ ಭಾರಿ ಆರ್ಭಟ ತೋರಿಸುತ್ತಿದ್ದು ಇದರ ಜೊತೆಗೆ ಮತ್ತೊಂದು ಗುಡ್‌ನ್ಯೂಸ್ ಸಿಕ್ಕಿದೆ. ಮುಂಗಾರು ಮಳೆಯ ಆಗಮನಕ್ಕೆ ಮೊದಲೇ ಕರ್ನಾಟಕದಲ್ಲಿ ಭರ್ಜರಿ ಮಳೆಯಾಗುತ್ತೆ ಅಂತ, ಹವಾಮಾನ ಇಲಾಖೆ ತಿಳಿಸಿದೆ. ಈ ಬಾರಿ ಮಳೆ ಅಬ್ಬರದ ಪರಿಣಾಮ, ಈಗಾಗಲೇ ಕರ್ನಾಟಕದ ಡ್ಯಾಂಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಕೂಡ ಬರುತ್ತಿದೆ.
ಭರ್ಜರಿ ಮಳೆಗೆ ತುಂಬುತ್ತಿವೆ ಡ್ಯಾಂ!
ಮಳೆ ಇಲ್ಲದೆ ಮನುಷ್ಯರ ಬದುಕು ಊಹೆಗೂ ನಿಲುಕದು. ಯಾಕಂದ್ರೆ ಮನುಷ್ಯರ ಬಹು ಮುಖ್ಯ ಅಂಶ ಅಂದ್ರೆ ನೀರು. ಹೀಗಾಗಿ ನೀರು ಇಲ್ಲದೆ ಮನುಷ್ಯರು ಏನೂ ಮಾಡಲು ಆಗೋದಿಲ್ಲ. ಆದ್ರೆ ಮನುಷ್ಯ ತಾನೇ ಮಾಡಿಕೊಂಡಿದ್ದ ತಪ್ಪುಗಳಿಂದ ಸಾಕಷ್ಟು ಸಮಸ್ಯೆ ಎದುರಿಸುವ ವಾತಾವರಣ ನಿರ್ಮಾಣ ಆಗಿದೆ. ಸರಿಯಾದ ಸಮಯಕ್ಕೆ ಮಳೆಯೇ ಬೀಳುತ್ತಿಲ್ಲ. ಬಿಸಿಲು & ಬಿಸಿ ಗಾಳಿ ಕೂಡ ಹೆಚ್ಚಾಗುತ್ತಿದೆ. ಹೀಗಾಗಿ ಮನುಷ್ಯರು ಪರದಾಡುತ್ತಿದ್ದು ನೀರಿಗೆ ಯುದ್ಧವೇ ನಡೆಯುತ್ತೇನೋ.? ಎಂಬ ಭಯವು ಕೂಡ ಆವರಿಸಿತ್ತು. ಇದೇ ಸಮಯದಲ್ಲಿ ಸರಿಯಾಗಿ ಭರ್ಜರಿ ಮಳೆ ಬರುತ್ತಿದ್ದು, ಕಾವೇರಿ ನದಿ ಸೇರಿದಂತೆ ಹಲವು ಡ್ಯಾಂಗಳು ತುಂಬುತ್ತಿವೆ.
ಮಳೆ ಅಬ್ಬರಕ್ಕೆ ಅಂಡರ್‌ಪಾಸ್ ಬಂದ್!
ಬೆಂಗಳೂರಿನಲ್ಲಿ ಮಳೆ ಅಬ್ಬರಿಸಿದ ರೀತಿಗೆ ಅಂಡರ್‌ಪಾಸ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆ ನೀರು ಅವಾಂತರ ಸೃಷ್ಟಿ ಮಾಡಿತ್ತು. ಅದರಲ್ಲೂ ಬೆಂಗಳೂರು ಹೃದಯ ಭಾಗದಲ್ಲಿ ಈ ಸಮಸ್ಯೆ ಹೆಚ್ಚಾಗಿತ್ತು. ಹೀಗೆ ಭಾರಿ ಮಳೆ ಬಿದ್ದ ಸುದ್ದಿ ಗೊತ್ತಾಗದೆ ನೇರವಾಗಿ ರಸ್ತೆಗಳಿಗೆ ಬೈಕ್ & ಕಾರ್‌ನಲ್ಲಿ ಎಂಟ್ರಿ ಕೊಟ್ಟ ಸವಾರರು ರೋಡ್‌ನಲ್ಲಿ ನಿಂತಿದ್ದ ಎದೆ ಎತ್ತರದ ನೀರು ನೋಡಿ ಬೆಚ್ಚಿಬಿದ್ದರು.












Click it and Unblock the Notifications