Rain Alert: ಮಳೆ.. ಮಳೆ.. ಮುಂದಿನ 48 ಗಂಟೆ ಕರ್ನಾಟಕದ ಈ ಜಿಲ್ಲೆಗಳಿಗೆ ಭರ್ಜರಿ ಮಳೆ!

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮೇ ತಿಂಗಳಲ್ಲಿ ಮುಂಗಾರು ಮಳೆ ಅಬ್ಬರಿಸಿ ಭರ್ಜರಿಯಾಗಿ ಖುಷಿ ತರಿಸಿತ್ತು, ಆದರೆ ಯಾಕೋ ಜೂನ್ ತಿಂಗಳ ಆರಂಭದಿಂದ ಮುಂಗಾರು ಮಳೆ ಸೈಲೆಂಟ್ ಆಗಿದೆ ಅಂತಾ ಕನ್ನಡಿಗರು ಕೂಡ ಟೆನ್ಷನ್ ಟೆನ್ಷನ್ ಮಾಡಿಕೊಂಡಿದ್ದರು. ಅದ್ರಲ್ಲೂ ಈ ವರ್ಷ ಕೂಡ ಮುಂಗಾರು ಮಳೆ ಕೈಕೊಡುತ್ತ? 2023 ರೀತಿಯೇ ಮಳೆರಾಯ ಕೈಕೊಟ್ಟು ಸಮಸ್ಯೆ ಆಗುತ್ತಾ? ಅನ್ನೋ ಟೆನ್ಷನ್ ಶುರುವಾಗಿತ್ತು. ಹೀಗಿದ್ದಾಗಲೇ, ಮಳೆ.. ಮಳೆ.. ಮುಂದಿನ 48 ಗಂಟೆ ಕರ್ನಾಟಕದ ಈ ಜಿಲ್ಲೆಗಳಿಗೆ ಭರ್ಜರಿ ಮಳೆ ಫಿಕ್ಸ್ ಆಗಿದೆ!

ಹೌದು, ಮಳೆ ಇಲ್ಲದೆ 2023 ಪೂರ್ತಿ ಬರದ ಬೇಗೆಯಲ್ಲೇ ಜನರು ಪರದಾಡಿದ್ದರು. ನಂತರ ಅದು ಯಾಕೋ ಏನೋ 2024ರ ಆರಂಭದಲ್ಲೇ ಮಳೆ ಜೋರಾಗಿ ಅಬ್ಬರಿಸಲು ಶುರುವಾಯ್ತು. ಹೀಗೆ ಭರ್ಜರಿ ಮುಂಗಾರು ಮಳೆ ಸುರಿದ ಕಾರಣ ಜನರು ಕೂಡ ಪರದಾಡಿದ್ದರು. ನಂತರ ಹಿಂಗಾರು ಮಳೆ ಕೂಡ ಅಬ್ಬರಿಸಿ ಮೇ ತಿಂಗಳಿಂದ ಡಿಸೆಂಬರ್ ತನಕ ಭಾರಿ ಭರ್ಜರಿ ಮಳೆ ಸುರಿದಿತ್ತು ಹಾಗೂ ಜನವರಿ & ಫೆಬ್ರವರಿ ತಿಂಗಳಲ್ಲೂ ಮಳೆರಾಯ ತನ್ನ ಆರ್ಭಟ ಮುಂದುವರಿಸಿದ್ದ. ಹೀಗಿದ್ದಾಗ ಮೇ ತಿಂಗಳು ಪೂರ್ತಿ ಮಳೆಯ ಆರ್ಭಟ ಚನ್ನಾಗಿಯೇ ಇತ್ತು. ಇಷ್ಟೆಲ್ಲದರ ನಡುವೆ ದಿಢೀರ್ ಮಳೆ ಕೈಕೊಟ್ಟು ಟೆನ್ಷನ್ ಶುರುವಾಗಿತ್ತು, ಆದ್ರೆ ಇದೀಗ ಜೂನ್ 9 ಸೋಮವಾರದಿಂದ ಮತ್ತೆ ಮಳೆ ಅಬ್ಬರಿಸುವುದು ಗ್ಯಾರಂಟಿ ಆಗುತ್ತಿದೆ...

Heavy Rain Alert Given To Karnataka From June 09 Of 2025

ಮಳೆ.. ಮಳೆ.. ಮುಂದಿನ 48 ಗಂಟೆ!

ಯೆಸ್, ಮಳೆ ಅಬ್ಬರ ಮತ್ತೆ ಕರ್ನಾಟಕ ರಾಜ್ಯದಲ್ಲಿ ಶುರು ಆಗುತ್ತಿದೆ. ನಮ್ಮ ಕನ್ನಡಿಗರು ಕಾಯುತ್ತಿದ್ದ ಶುಭ ಸಂದರ್ಭವೂ ಬಂದೇ ಬಿಟ್ಟಿದೆ. ಮುಂಗಾರು ಮಳೆಯ ಆರ್ಭಟಕ್ಕೆ ಮತ್ತೆ ನಮ್ಮ ಕನ್ನಡ ನಾಡು ಸಾಕ್ಷಿ ಆಗಲಿದೆ. ಇದೀಗ ಹವಾಮಾನ ಇಲಾಖೆ ನೀಡಿರುವ ಎಚ್ಚರಿಕೆ ಪ್ರಕಾರ, ಮಳೆ.. ಮಳೆ.. ಮುಂದಿನ 48 ಗಂಟೆ ಕರ್ನಾಟಕದ ಈ ಜಿಲ್ಲೆಗಳಿಗೆ ಭರ್ಜರಿ ಮಳೆ ಫಿಕ್ಸ್ ಆಗಿದೆ. ಹಾಗಾದ್ರೆ ಕರ್ನಾಟಕದ ಯಾವೆಲ್ಲಾ ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ?

ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ!

ಮಳೆ ಆರ್ಭಟ ಶುರುವಾಗಿರುವ ರೀತಿ ನೋಡಿದರೆ ಜೂನ್ 9 ಸೋಮವಾರದಿಂದ ಮುಂದಿನ 48 ಗಂಟೆ ಕಾಲ ಭರ್ಜರಿ ವರುಣನ ಎಂಟ್ರಿ ಆಗಲಿದೆ. ಬೆಂಗಳೂರು ಸೇರಿದಂತೆ, ಮೈಸೂರು, ರಾಮನಗರ, ಮಂಡ್ಯ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಮಲೆನಾಡು ಭಾಗ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಮಂಗಳೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಸುರಿಯಲಿದೆ. ಹಾಗೂ ಉತ್ತರ ಕರ್ನಾಟಕ ಭಾಗ ಪೂರ್ತಿ ಭರ್ಜರಿ ಮಳೆ ಸುರಿಯುವ ಮುನ್ಸೂಚನೆ ಇದೀಗ ಸಿಕ್ಕಿದೆ. ಹೀಗಾಗಿ ಕನ್ನಡಿಗರು ಫುಲ್ ಖುಷಿಯಾಗಿದ್ದು ಭಾರಿ ಮಳೆಯ ಮುನ್ಸೂಚನೆಯಲ್ಲಿ ಇದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+