ಮಂಡ್ಯದಿಂದ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಎಚ್‌ಡಿ ರೇವಣ್ಣ ಸ್ಪರ್ಧೆ: ಇದು ಅಣ್ಣ-ತಮ್ಮನ ಸ್ಪರ್ಧೆ ನಾ?
ಮಂಡ್ಯ, ಏಪ್ರಿಲ್ 05: ಮಂಡ್ಯ ಲೋಕಸಭಾ ಕ್ಷೇತ್ರ ಈ ಬಾರಿಯೂ ತೀವ್ರ ಕುತೂಹಲ ಮೂಡಿಸಿದೆ. ಬೇಸಿಗೆಯ ಬಿಸಿಲಿನ ಕಾವಿಗಿಂತ ಚುನಾವಣಾ ಕಾವು ಏರುತ್ತಿದ್ದು, ಆಡಳಿತರೂಢ ಕಾಂಗ್ರೆಸ್ ನಿಂದ ಸ್ಟಾರ್ ಚಂದ್ರ ಅಭ್ಯರ್ಥಿಯಾಗಿದ್ರೆ, ಇತ್ತ ಕಾಂಗ್ರೆಸ್ ಠಕ್ಕರ್ ಕೊಡುವ ನಿಟ್ಟಿನಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರನ್ನ ಕಣಕ್ಕಿಳಿಸಿದ್ದಾರೆ.
ಹೌದು, ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಖುದ್ದು ಕಣಕ್ಕಿಳಿದಿದ್ದು, ಮಂಡ್ಯದಲ್ಲಿ ಈ ಬಾರಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ದೊಡ್ಡ ಸವಾಲು ಎದುರಾಗಿದೆ. ಮಂಡ್ಯ ಮೈತ್ರಿ ಅಭ್ಯರ್ಥಿಯಾಗಿ ಹೆಚ್ ಡಿ ಕುಮಾರಸ್ವಾಮಿ ಕಣದಲ್ಲಿದ್ದು, ಕುಮಾರಸ್ವಾಮಿ ಅವರ ವಿರುದ್ಧವಾಗಿ ಹೆಚ್ ಡಿ ರೇವಣ್ಣ ಕಣಕ್ಕಿಳಿದಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ.

ಇತ್ತ ಕುಮಾರಸ್ವಾಮಿ ಅವರನ್ನ ಸೋಲಿಸುವ ನಿಟ್ಟಿನಲ್ಲಿ ಆಡಳಿತರೂಢ ಕಾಂಗ್ರೆಸ್ ಮಾಸ್ಟರ್ ಪ್ಲಾನ್ ನಡೆಸಿದ್ರೆ, ಇತ್ತ ಎಚ್‌ಡಿ ಕುಮಾರಸ್ವಾಮಿಯವರಿಗೆ ಸೋಲಿನ ರುಚಿ ಉಣ್ಣಿಸಲು ಎಚ್‌ಡಿ ರೇವಣ್ಣ ಅವರೇ ಮಂಡ್ಯದಲ್ಲಿ ಲೋಕಸಭಾ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಕುಮಾರಸ್ವಾಮಿ ಅವರ ವಿರುದ್ಧ ಹೆಚ್ ಡಿ ರೇವಣ್ಣ ಅವರು ಕಣಕ್ಕಿಳಿದಿರುವುದು ಹಲವು ಗೊಂದಲಗಳಿಗೆ ಕಾರಣವಾಗುತ್ತಾ ಎನ್ನುವ ಚರ್ಚೆ ಶುರುವಾಗಿದೆ.
ಕೊನೆಗೂ ಮೈತ್ರಿಯಿಂದ ಮಂಡ್ಯ ಕ್ಷೇತ್ರವನ್ನ ಪಡೆಯುವಲ್ಲಿ ಯಶಸ್ವಿಯಾದ ದಳಪತಿಗಳಿಗೆ ಮತ್ತೊಂದು ಸವಾಲ್ ಎದುರಾಗಿದೆ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಎಚ್‌ಡಿ ರೇವಣ್ಣ ಅವರೇ ಖುದ್ದು ಮಂಡ್ಯ ಕಣಕ್ಕಿಳಿದಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸುಮಲತಾ ಅಂಬರೀಶ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ನಡೆಸಿದ್ರೆ, ಈ ಚುನಾವಣೆಯಲ್ಲಿ ಅಣ್ಣ ತಮ್ಮಂದಿರ ಮಧ್ಯೆ ಕದನ ಶುರುವಾಯ್ತಾ ಎಂದು ನೀವು ಪ್ರಶ್ನಿಸಬಹುದು.
ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಎಚ್‌ಡಿ ರೇವಣ್ಣ ಅವರೇ ಸ್ಪರ್ಧೆ ಮಂಡ್ಯದಲ್ಲಿ ಸ್ಪರ್ಧೆ ಮಾಡಿದ್ದಾರೆ. ಆದರೆ ನೀವು ತಿಳಿದುಕೊಂಡಂತೆ ಇವರು ಕುಮಾರಸ್ವಾಮಿ ಅವರ ಸಹೋತರ ಹೆಚ್ ಡಿ ರೇವಣ್ಣ ಅಲ್ಲ, ಇವರು ಬೇರೆ ಎಚ್ ಡಿ ರೇವಣ್ಣ, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಎಚ್‌ಡಿ ರೇವಣ್ಣ ಎಂಬುವರು ಸ್ಪರ್ಧಿಸುತ್ತಿದ್ದಾರೆ. ಗುರುವಾರ ಮಂಡ್ಯ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಎಚ್‌ಡಿ ರೇವಣ್ಣ ತಮ್ಮ ನಾಮಪತ್ರ ಸಲ್ಲಿಸಿದ್ದು, ಮಂಡ್ಯದಿಂದ ಹೆಚ್ ಡಿ ಕುಮಾರಸ್ವಾಮಿ ಅವರ ವಿರುದ್ಧವಾಗಿ ಹೆಚ್ ಡಿ ರೇವಣ್ಣ ಸ್ಪರ್ಧೆ ಎಂದರೇ ಜನಸಾಮಾನ್ಯರಿಗೂ ಸಹ ಅನುಮಾನ ಮೂಡುವುದರಲ್ಲಿ ಎರಡು ಮಾತಿಲ್ಲ.












Click it and Unblock the Notifications