ಸ್ಟಿಂಗ್ ಆಪರೇಷನ್ ಮಾಡಲು.₹10-₹15 ಕೋಟಿ ಖರ್ಚು; ED ತನಿಖೆ ಆಗಲಿ ಎಂದ ಹೆಚ್.ಡಿ.ಕುಮಾರಸ್ವಾಮಿ

ರಾಮನಗರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸ್ಟಿಂಗ್ ಮಾಡುವುದಕ್ಕೆ ಅಪಾರ ಪ್ರಮಾಣದ ಹಣ ಕೈ ಬದಲಾಗಿದ್ದು, ಜಾರಿ ನಿರ್ದೇಶನಾಲಯ ಮತ್ತು ತೆರಿಗೆ ಇಲಾಖೆ ತನಿಖೆ ನಡೆಸಬೇಕು ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಹೇಳಿದರು.

ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ, ರಾಜ್ಯದಲ್ಲಿ ಸ್ಟಿಂಗ್ ಅಪರೇಷನ್ ದೊಡ್ಡದಾಗಿ ಸದ್ದು ಮಾಡುತ್ತಿದೆ. ಸ್ಟಿಂಗ್ ಮಾಡಲು ₹10ರಿಂದ ₹15 ಕೋಟಿ ಖರ್ಚು ಮಾಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ. ಅದರ ಬಗ್ಗೆ ತನಿಖೆ ಅಗತ್ಯವಿದೆ ಎಂದರು.

HD Kumaraswamy Union Minister HDK Alleges 10 15 Crore Spent on Sting Operation Demands ED Probe

HD Kumaraswamy: ₹15 ಕೋಟಿಗಿಂತಲೂ ಹೆಚ್ಚಿನ ವ್ಯವಹಾರ

ನೀವು ಕೇವಲ ಹಣದ ಬಗ್ಗೆ ಯಾಕೆ ಲೆಕ್ಕ ಹಾಕುತ್ತಿರಾ? ಅದೆಲ್ಲ ಹೊರಗೆ ಬಂದರೆ ನಮ್ಮ ರಾಜ್ಯದ ಮಾನ ಮಾರ್ಯಾದೆ ಮೂರು ಕಾಸಿಗೂ ಇರಲ್ಲ. ಇವತ್ತು ಆ ರೀತಿಯ ವಾತವರಣ ನಿರ್ಮಾಣ ಆಗಿದೆ. ₹15 ಕೋಟಿಗಿಂತಲೂ ಹೆಚ್ಚಿನ ವ್ಯವಹಾರ ನಡೆದಿದೆ. ಇಡಿ ಏನಾದರೂ ಪ್ರವೇಶವಾದರೆ ಸತ್ಯ ಹೊರಗೆ ಬರುತ್ತದೆ. ಹಣಕಾಸು ಹೇಗೆಲ್ಲ ಹರಿದಾಡಿದೆ ಎಂಬ ಮಾಹಿತಿ ಸಿಗುತ್ತದೆ ಎಂದು ಅವರು ತಿಳಿಸಿದರು.

ಮುಖ್ಯಮಂತ್ರಿ ಹೇಳಿಕೆಗೆ ಆಕ್ಷೇಪ; ಬೆಂಗಳೂರು ಎಲ್ಲರದ್ದು

ಉತ್ತರ ಕರ್ನಾಟಕದ ಮಂದಿ ಬೆಂಗಳೂರಿಗೆ ಬಂದು ಇಲ್ಲೇ ಇದ್ದುಬಿಡುತ್ತಾರೆ, ಇಲ್ಲಿಂದ ವಾಪಸ್ ಹೋಗುವುದೇ ಇಲ್ಲ ಎಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಕೊಟ್ಟ ಹೇಳಿಕೆಯಿಂದ ನಮಗೆ ನೋವಾಗಿದೆ. ಇಲ್ಲಿ ಕರ್ನಾಟಕ ಎನ್ನುವುದು ಒಂದು. ನಮ್ಮ ಭಾಷೆ ಒಂದೇ. ಉತ್ತರ ಮತ್ತು ದಕ್ಷಿಣ ಎನ್ನುವ ಪ್ರಶ್ನೆಯೇ ಇಲ್ಲ. ಬೆಂಗಳೂರು ಮಹಾನಗರ ನಮ್ಮೆಲ್ಲರದ್ದು. ಯಾರೋ ಒಬ್ಬರಿಗೆ ಸೀಮಿತವಾದ ನಗರವಲ್ಲ. ಹಾಗೆ ನೋಡಿದರೆ ಬೆಂಗಳೂರು ನಗರ ಅಭಿವೃದ್ಧಿ ಹೊಂದಿದೀಯ ಹೊರತು, ಬೆಂಗಳೂರು ಅಕ್ಕಪಕ್ಕದ ಅನೇಕ ಹಳ್ಳಿಗಳು ಉತ್ತರ ಕರ್ನಾಟಕದ ಹಳ್ಳಿಗಳಂತೆ ತೀರಾ ಹಿಂದುಳಿದಿವೆ ಎಂದು ಯಾದಗಿರಿಯ ವಿದ್ಯಾರ್ಥಿನಿ ಒಬ್ಬರು ಬೇಸರ ವ್ಯಕ್ತಪಡಿಸಿದರು.

ನೋಟಿಫಿಕೇಶನ್ ಬಂದ ಮೇಲೆ ಒಂದು ಸವಾಲ್ ಆದರೆ, ರಿಸಲ್ಟ್ ಬರುವವರೆಗೂ ಅನುಭವಿಸುವ ಯಾತನೆ ಮತ್ತೊಂದು ಕಡೆ. ಅದರಲ್ಲೂ ಪರೀಕ್ಷೆ ಮತ್ತು ಎಲ್ಲಾ ಹಂತಗಳಲ್ಲೂ ತೇರ್ಗಡೆಯಾದರೂ ನೇಮಕಾತಿ ಆದೇಶ ಪತ್ರ ಪಡೆಯುವುದೇ ಎಂಬ ಮತ್ತೊಂದು ಸಂಕಷ್ಟವಾಗಿದೆ ಎಂದು ಚನ್ನಪಟ್ಟಣ ಅಭ್ಯರ್ಥಿ ಒಬ್ಬರು ಬೇಸರ ವ್ಯಕ್ತಪಡಿಸಿದರು.

ಪ್ರಾಮಾಣಿಕರ ಸಮಿತಿ ರಚನೆ ಮಾಡಬೇಕು

ಕೆಪಿಎಸ್ಸಿಯಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಇನ್ನಿಲ್ಲದ ಆಕ್ರೋಶ ವ್ಯಕ್ತಪಡಿಸಿದ ಧಾರವಾಡದ ಅಭ್ಯರ್ಥಿ ಒಬ್ಬರು, ಸಾಂವಿಧಾನಿಕವಾದ ಈ ಸಂಸ್ಥೆಯ ಸುಧಾರಣೆ ಅತ್ಯಂತ ಅಗತ್ಯವಾಗಿದೆ. ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿಯಲ್ಲಿ ಬಿಗಿ ಕ್ರಮಗಳನ್ನು ಕೈಗೊಳ್ಳಬೇಕು. ಆಯ್ಕೆಗೆ ಉನ್ನತ ಮಟ್ಟದ ಪರಿಣಿತರು ಮತ್ತು ಅತ್ಯಂತ ಪ್ರಾಮಾಣಿಕರ ಸಮಿತಿ ರಚನೆ ಮಾಡಬೇಕು. ಅಕ್ರಮ ಎಸಗುವ ಅಧ್ಯಕ್ಷ ಮತ್ತು ಸದಸ್ಯರ ಪದಚ್ಯುತಿಗೆ ತಕ್ಷಣ ನಿರ್ಧಾರ ಕೈಗೊಳ್ಳುವಂತೆ ಆಗಬೇಕು. ಇವರಿಗೆ ಸಾಂವಿಧಾನಿಕ ರಕ್ಷಣೆ ಕೊಡಬಾರದು ಎಂದು ಒತ್ತಾಯ ಮಾಡಿದರು.

ಭವಿಷ್ಯದಲ್ಲಿ ನೀವು ಹೆದರಬೇಕಾಗಿಲ್ಲ

ಇವರೊಂದಿಗೆ ಇನ್ನೂ ಅನೇಕ ಅಭ್ಯರ್ಥಿಗಳು ಸಚಿವ ಕುಮಾರಸ್ವಾಮಿ ಅವರಿಗೆ ತಮ್ಮ ಅಳಲನ್ನು ತೋಡಿಕೊಂಡರು. ಜತೆಗೆ ಪ್ರಶ್ನೆಗಳನ್ನು ಕೇಳಿ, ಸಮರ್ಪಕ ಉತ್ತರಗಳನ್ನು ಕೂಡ ಪಡೆದುಕೊಂಡರು. ಕೆಪಿಎಸ್ಸಿ ಅಕ್ರಮದ ಕುರಿತಂತೆ ನಾವೆಲ್ಲರೂ ಕೇವಲ ಈ ಚರ್ಚೆಯ ಮೂಲಕ ವಿರಮಿಸುವುದು ಬೇಡ. ಮುಂದಿನ ದಿನಗಳಲ್ಲಿ ಬಹುದೊಡ್ಡ ಹೋರಾಟಗಳನ್ನು ಸಂಘಟಿಸೋಣ. ನಾನು ನಿಮ್ಮ ಜೊತೆ ನಿಲ್ಲುತ್ತೇನೆ. ಭವಿಷ್ಯದಲ್ಲಿ ನೀವು ಹೆದರಬೇಕಾಗಿಲ್ಲ. ನಿಮ್ಮ ಕಾಳಜಿ ಮತ್ತು ಕನಸುಗಳನ್ನು ಗೌರವಿಸುವ ನಾಯಕರಿಗೆ ಮಣೆ ಹಾಕಿ. ನಿಮ್ಮ ಭಾವನೆಗಳಿಗೆ ದನಿಯಾಗುವ ವ್ಯಕ್ತಿಗಳಿಗೆ ಅವಕಾಶ ನೀಡಿ ಎಂದು ಕುಮಾರಸ್ವಾಮಿ ಅವರು ಮನವಿ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+