‘ಪ್ರಜ್ವಲ್ ರೇವಣ್ಣ ನನ್ನ ಮಗನಂತೆ’ ಎಂದಿದ್ದ ಕುಮಾರಣ್ಣ ಈಗ ಉಲ್ಟಾ ಹೊಡೆದರು!
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಜೆಡಿಎಸ್ ಪಕ್ಷಕ್ಕೆ ದೊಡ್ಡ ಗಂಡಾಂತರ ಎದುರಾಗುತ್ತಿದ್ದು, ಬಿಜೆಪಿ ಜೊತೆಗಿನ ಮೈತ್ರಿ ಕೂಡ ಡೋಲಾಯಮಾನ ಸ್ಥಿತಿಗೆ ತಲುಪಿದೆ. ಪರಿಸ್ಥಿತಿ ಕೈಮಿರಿದ ಸಮಯದಲ್ಲೇ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಪ್ರಜ್ವಲ್ ರೇವಣ್ಣ ಕುರಿತು ರಕ್ಷಣಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ಅಲ್ಲದೆ ಪ್ರಜ್ವಲ್ ರೇವಣ್ಣ ನಮ್ಮ ಕುಟುಂಬವೇ ಅಲ್ಲ, ಅವರು ಬೇರೆ ವಾಸವಾಗಿದ್ದಾರೆ ಅಂತಿದ್ದಾರೆ ಕುಮಾರಣ್ಣ. ಹೀಗಿದ್ದಾಗಲೇ ಇದಕ್ಕೂ ಮೊದಲು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು, ಪ್ರಜ್ವಲ್ ರೇವಣ್ಣ ತನ್ನ ಮಗ ಎಂದು ಹೇಳಿದ್ದ ವಿಡಿಯೋ ವೈರಲ್ ಆಗುತ್ತಿದೆ!
ಹಾಸನ ಸಂಸದ ಹಾಗೂ ಅಶ್ಲಿಲ ವಿಡಿಯೋ ಕೇಸ್ ಆರೋಪಿ ಆಗಿರುವ ಪ್ರಜ್ವಲ್ ರೇವಣ್ಣಗೆ ಈಗ ಸಾಲು ಸಾಲು ಸಂಕಷ್ಟ ಎದುರಾಗಿದೆ. ಇದೇ ಸಮಯದಲ್ಲಿ, ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಎಸ್ಕೇಪ್ ಆಗಿ. ವಿದೇಶಕ್ಕೆ ಓಡಿ ಹೋಗಿದ್ದಾರೆ ಅನ್ನೋ ಆರೋಪ ಮಾಡಲಾಗುತ್ತಿದೆ. ಇದೇ ಸಮಯದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು, ಪ್ರಜ್ವಲ್ ರೇವಣ್ಣ ವಿಚಾರದಲ್ಲಿ ಹೇಗೆ ಡಬಲ್ ಗೇಮ್ ಆಡ್ತಾರೆ ನೋಡಿ ಅಂತಾನು ಜನ ಆರೋಪಿಸುತ್ತಿದ್ದಾರೆ. ಇದಕ್ಕೆ ಒಂದು ವಿಡಿಯೋ ಸಾಕ್ಷಿ ಕೂಡ ನೀಡಿದ್ದಾರೆ. ಹಾಗಾದ್ರೆ ವಿಡಿಯೋದಲ್ಲಿ ಪ್ರಜ್ವಲ್ ರೇವಣ್ಣ & ಕುಮಾರಸ್ವಾಮಿ ಅವರ ಬಗ್ಗೆ ಏನು ಸತ್ಯ ಇದೆ? ವಿಡಿಯೋ ನೋಡೋಕೆ ಮುಂದೆ ಓದಿ.

ಅಂದು ಮಗ.. ಇಂದು ಮಗನೇ ಅಲ್ಲ!
ಹಾಸನ ಲೋಕಸಭಾ ಕ್ಷೇತ್ರದಿಂದ, ಈ ಬಾರಿ ಬಿಜೆಪಿ & ಜೆಡಿಎಸ್ ಪಕ್ಷಗಳ ಮೈತ್ರಿ ಅಭ್ಯರ್ಥಿ ಎಂದು ಘೋಷಣೆ ಆಗಿ ಟಿಕೆಟ್ ಪಡೆದಿದ್ದ ಪ್ರಜ್ವಲ್ ರೇವಣ್ಣ ಭರ್ಜರಿ ಪ್ರಚಾರ ನಡೆಸಿದ್ದರು. ಇದೇ ಕಾರಣಕ್ಕೆ ಮಾಜಿ ಸಿಎಂ ಹಾಗೂ ಪ್ರಜ್ವಲ್ ರೇವಣ್ಣ ಚಿಕ್ಕಪ್ಪ ಆಗಿರುವ ಕುಮಾರಸ್ವಾಮಿ ಅವರು ಭರ್ಜರಿ ಪ್ರಚಾರ ನಡೆಸಿದ್ದರು. ಪ್ರಜ್ವಲ್ ಪರ ಎಚ್.ಡಿ. ಕುಮಾರಸ್ವಾಮಿ ಪ್ರಚಾರ ನಡೆಸುವ ಸಮಯದಲ್ಲಿ, ಇವನು ರೇವಣ್ಣನ ಮಗ ಅಲ್ಲ ನನ್ನ ಮಗ ಇದ್ದಂತೆ. ದಯವಿಟ್ಟು ಈ ಬಾರಿ ಒಂದು ಅವಕಾಶ ಕೊಡಿ. ಎಲ್ಲಾ ಬದಲಾಗುತ್ತೆ, ಪ್ರಜ್ವಲ್ ಕೂಡ ಬದಲಾಗುತ್ತಾನೆ ಎಂದಿದ್ದರು. ಆದರೆ, ಇದೀಗ ಪ್ರಜ್ವಲ್ ರೇವಣ್ಣಗೂ ನಮಗೂ ಸಂಬಂಧ ಇಲ್ಲ ಅಂತಿದ್ದಾರೆ ಕುಮಾರಣ್ಣ. ಈ ಎರಡೂ ವಿಡಿಯೋಗಳನ್ನ ಮರ್ಜ್ ಮಾಡಿ ಇದೀಗ ಟ್ರೋಲ್ ಮಾಡ್ತಿದ್ದಾರೆ ಜನ.
ಜೆಡಿಎಸ್‌ಗೆ ನುಂಗಲಾರದ ತುತ್ತು!
ಒಟ್ನಲ್ಲಿ ಪ್ರಜ್ವಲ್ ರೇವಣ್ಣ ಕೇಸ್ ಇದೀಗ ಜೆಡಿಎಸ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿ, ಲೋಕಸಭೆ ಚುನಾವಣೆ ಸಮಯದಲ್ಲೇ ದೊಡ್ಡ ಗಂಡಾಂತರ ತಂದಿದೆ. ಹೀಗಾಗಿ ಈಗಿರುವ, ಗಂಡಾಂತರ ಎದುರಿಸಲು ಜೆಡಿಎಸ್ ನಾಯಕರು ಪ್ರಜ್ವಲ್ ರೇವಣ್ಣ ಮತ್ತು ರೇವಣ್ಣ ಕುರಿತು ವ್ಯತಿರಿಕ್ತ ಹೇಳಿಕೆ ನೀಡುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ. ಹೀಗಾಗಿ ಇದೆಲ್ಲಾ ಎಲ್ಲಿಗೆ ಬಂದು ನಿಲ್ಲುತ್ತೆ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications