ಸಿಎಂ ಇಬ್ರಾಹಿಂ ಮೇಲೆ ಕುಮಾರಸ್ವಾಮಿ ಗರಂ! ಆ ಅಧಿಕಾರ ಯಾರಿಗೂ ಕೊಟ್ಟಿಲ್ಲ ಎಂದು ಎಚ್‌ಡಿಕೆ ಹೇಳಿದ್ಯಾಕೆ?
ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ವಿರುದ್ದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಹಾಸನ,ಮಾರ್ಚ್14: ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಪ್ರಚಾರದ ಅಬ್ಬರ ಜೋರಾಗಿದೆ. ಇತ್ತ ತಮ್ಮ ತಮ್ಮ ರಾಜಕೀಯ ಭವಿಷ್ಯಕ್ಕಾಗಿ ರಾಜಕೀಯ ನಾಯಕರು ಪಕ್ಷಾಂತರ ಪರ್ವ ಶುರು ಮಾಡಿದ್ದು, ಈಗಾಗಲೇ ಕಾಂಗ್ರೆಸ್ ನತ್ತ ಮುಖ ಮಾಡಿರುವ ಗುಬ್ಬಿ ಶ್ರಿನಿವಾಸರನ್ನ ಮತ್ತೆ ಜೆಡಿಎಸ್ ಗೆ ಕರೆತರುವ ಪ್ರಯತ್ನ ನಡೆದಿದೆ ಎಂದು ಹೇಳಲಾಗಿದೆ.
ಗುಬ್ಬಿ ಕ್ಷೇತ್ರದ ಶ್ರೀನಿವಾಸ ಗೌಡ ಅವರು ಜೆಡಿಎಸ್‌ಗೆ ಬಂದ್ರೆ ಸ್ವಾಗತ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿಕೆ ನೀಡಿದ್ದು, ಈ ಹೇಳಿಕೆ ವಿರುದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗರಂ ಆಗಿದ್ದಾರೆ.

ಗುಬ್ಬಿ ಕ್ಷೇತ್ರದ ಶ್ರೀನಿವಾಸ ಅವರನ್ನು ಜೆಡಿಎಸ್‌ಗೆ ವಾಪಸ್ ಕರೆತರುವ ವಿಚಾರದಲ್ಲಿ ತಪ್ಪು ಹೇಳಿಕೆ ಕೊಟ್ಟಿದ್ದಾರೆ. ಅಭ್ಯರ್ಥಿ ವಿಚಾರದಲ್ಲಿ ನಾನೇ ಅಂತಿಮ ತೀರ್ಮಾನ ತೆಗೆದುಕೊಳ್ಳುವುದು. ಆಕಸ್ಮಾತ್ ಸಿಎಂ ಇಬ್ರಾಹಿಂ ಹೇಳಿಕೆ ಕೊಟ್ಟಿದ್ದರೆ ಅದು ತಪ್ಪು ಇದರಿಂದ ಕಾರ್ಯಕರ್ತರು ಗೊಂದಲಕ್ಕಿಡಾಗುತ್ತಾರೆ. ನನ್ನ ಗಮನಕ್ಕೆ ಬಾರದೆ ಯಾರು ಯಾವುದೇ ಹೇಳಿಕೆಯನ್ನು ಕೊಡಬಾರದು ಅದೇನಾದ್ರು ಕೊಟ್ಟಿದ್ರೆ ಅದು ತಪ್ಪು ಹೇಳಿಕೆ ನಾನು ಅಭ್ಯರ್ಥಿ ಘೋಷಣೆ ಮಾಡುವ ಅಧಿಕಾರವನ್ನು ಯಾರಿಗೂ ಕೊಟ್ಟಿಲ್ಲ ಎಂದು ಸಿಎಂ ಇಬ್ರಾಹಿಂ ವಿರುದ್ದ ಕಿಡಿಕಾರಿದ್ದಾರೆ.
ಕಳೆದ ಒಂದು ವರ್ಷದಿಂದ ನಾಗರಾಜ್ ಎಂಬ ಅಭ್ಯರ್ಥಿ ಕೆಲಸ ಮಾಡ್ತಿದ್ದಾರೆ. ಹೇಳಿಕೆ ನೀಡುವಾಗ ಯೋಚಿಸಿ ಹೇಳಿಕೆ ಕೊಡಬೇಕು ಇಂತಹ ವಿಚಾರದಲ್ಲಿ ಹುಡುಗಾಟ ಆಡಬಾರದು ಎಂದು ಬಹಳ ಖಾರವಾಗಿ ಹೇಳಿದ್ದಾರೆ. ಕಾರ್ಯಕರ್ತರ ಪರವಾಗಿ ಈಗಾಗಲೇ ಕೆಲಸ ಮಾಡುತ್ತಿದ್ದಾರೆ. ಗುಬ್ಬಿ ಕ್ಷೇತ್ರದಲ್ಲಿ ಈಗಾಗಲೇ ಅಭ್ಯರ್ಥಿಯು ಘೋಷಣೆ ಆಗಿದೆ. ಪಕ್ಷಕ್ಕೆ ಬಾರಪ್ಪ ಅಂತ ಯಾರು ಅರ್ಜಿ ಯಾಕೆ ಆತನನ್ನು ಕರೆದಿಲ್ಲ. ಹಾಗಾಗಿ ಇಂಥ ಹೇಳಿಕೆ ಕೊಡುವಾಗ ಯೋಚನೆ ಮಾಡಿ ಕೊಡಬೇಕು ಎಂದು ರಾಜ್ಯಾಧ್ಯಕ್ಷರ ವಿರುದ್ಧವೇ ಕೆಂಡಾಮಂಡಲವಾದರು.
ಇನ್ನು, ಹಾಸನ ಅಭ್ಯರ್ಥಿ ವಿಚಾರವಾಗಿ ಮಾತನಾಡಿದ ಎಚ್‌ಡಿ ಕುಮಾರಸ್ವಾಮಿ ಕಾರ್ಯಕರ್ತರ ಆಶಯದಂತೆಯೇ ಅಭ್ಯರ್ಥಿ ಪ್ರಕಟವಾಗುತ್ತದೆ. ಕೆಲವೊಂದು ಅನುಕಂಪದ ಆಧಾರದ ಮೇಲೆ ಗೆಲುವು ಪಡೆಯಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಹಾಸನ ಟಿಕೆಟ್ ಬಗ್ಗೆ ಎಲ್ಲವನ್ನೂ ದೇವೇಗೌಡರು ತೀರ್ಮಾನ ಮಾಡುತ್ತಾರೆ. ಹಾಸನದ ರಾಜಕೀಯ ನನಗಿಂತ ದೇವೇಗೌಡರಿಗೆ ಗೊತ್ತಿದೆ. ಅಂತಿಮವಾಗಿ ದೇವೇಗೌಡರು ಹಾಸನ ಕ್ಷೇತ್ರದ ಟಿಕೆಟ್ ಘೋಷಣೆ ಮಾಡುತ್ತಾರೆ ಎಂದರು.

ರಾಮನಗರದಿಂದ ಡಿ ಕೆ ಸುರೇಶರನ್ನ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರವಾಗಿ ಮಾತನಾಡಿ, ಯಾರು ಎಲ್ಲಿ ಬೇಕಾದರೂ ನಿಲ್ಲುವ ಅವಕಾಶ ಸಂವಿಧಾನದಲ್ಲಿ ಇದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು ಗೆಲುವು ಎಂಬು ವ್ಯವಸ್ಥೆಯಲ್ಲಿದೆ, ಅವರು ಇಲ್ಲಿ ಯಾಕೆ ಬರ್ತಾರೆ ಇಲ್ಲಿ ಯಾಕೆ ನಿಲ್ತಾರೆ ಎಂಬುದು ಬಾಲಿಷ ಹೇಳಿಕೆ ಆಗುತ್ತದೆ ಎಂದು ಹೇಳಿದರು.
ಮದ್ದೂರಿನಲ್ಲಿ ರೌಡಿಶೀಟರ್ ಅನ್ನು ಪ್ರಧಾನಿಗೆ ಪರಿಚಯಿಸಿದ ವಿಚಾರವಾಗಿ ಮಾತನಾಡಿ, ಯಾರಿಂದ ಆಯ್ತು ಯಾರು ಅವರನ್ನು ಒಳಗೆ ಬಿಡಿಸಿದರು. ಪ್ರಧಾನ ಮಂತ್ರಿಗಳು ಅವರಿಗೆ ತಲೆಬಾಗಿ ನಮಸ್ಕಾರ ಮಾಡಿದ್ದಾರಲ್ಲ ಒಳ್ಳೆ ಸಾಧನೆ ಮಾಡಿದ್ದಾರೆ ಅಂತ ಹೇಳಿ, ಯುವಕರ ಕುಟುಂಬಗಳನ್ನು ಉದ್ಧಾರ ಮಾಡಿದ್ದಾರೆ ಎಂದು ಶಿರಬಾಗಿ ನಮಸ್ಕರಿಸಿದ್ದಾರೆ ಎಂದು ವ್ಯಂಗ್ಯವಾಡಿದ ಅವರು,

ಇದಕ್ಕೆ ಕೇವಲ ಭದ್ರತಾ ಲೋಪ ಎಂದು ಕಾರಣ ಕೊಡುವುದಲ್ಲ. ಪ್ರಧಾನಮಂತ್ರಿಯನ್ನು ಭೇಟಿ ಮಾಡೋದಕ್ಕೆ ಅವರದೇ ಆದಂತಹ ಭದ್ರತಾ ವ್ಯವಸ್ಥೆ ಇದೆ. ಆ ವ್ಯವಸ್ಥೆಯನ್ನು ಉಲ್ಲಂಘನೆ ಮಾಡಿದವರು ಯಾರು? ಎಂದು ಪ್ರಶ್ನಿಸಿದರು.












Click it and Unblock the Notifications