ಪಾಲಿಥಿನ್ ಗುಣಮಟ್ಟ ಖಾತ್ರಿ; ಕೇಂದ್ರದ ಆದೇಶ ಊರ್ಜಿತಗೊಳಿಸಿದ ಕೋರ್ಟ್
ಬೆಂಗಳೂರು, ಜನವರಿ 10: ಪ್ಲಾಸ್ಟಿಕ್ ಉತ್ಪನ್ನಗಳನ್ನು ಸಿದ್ದಪಡಿಸಲು ಬಳಸುವ ಕಚ್ಚಾವಸ್ತುವಾಗಿರುವ ಪಾಲಿಥಿಲೀನ್‌ಗೂ ಗುಣಮಟ್ಟ ನಿಯಂತ್ರಣ ಮಾಡುವ ಕುರಿತು 2021ರ ಏಪ್ರಿಲ್ 15ರಂದು ಕೇಂದ್ರ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಕರ್ನಾಟಕ ಹೈಕೋರ್ಟ್ ಊರ್ಜಿತಗೊಳಿಸಿದೆ.
ಇದರಿಂದಾಗಿ ಪ್ಲಾಸ್ಟಿಕ್ ಉತ್ಪಾದನಾ ಕಂಪನಿಗಳಿಗೆ ದೊಡ್ಡ ಹಿನ್ನಡೆಯಾಗಿದೆ. ಜತೆಗೆ ನ್ಯಾಯಾಲಯ ವಿಶ್ವದ ಇತರ ದೇಶಗಳೊಂದಿಗೆ ಪೈಪೋಟಿ ನಡೆಸಲು ಮೇಕ್ ಇನ್ ಇಂಡಿಯಾ ಯೋಜನೆಯಡಿ ಸಿದ್ದಗೊಳ್ಳುವ ಉತ್ಪನ್ನಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಲೇಬೇಕು ಎಂದು ಹೇಳಿದೆ.

ಕೇಂದ್ರ ಸರ್ಕಾರದ ಅಧಿಸೂಚನೆ ರದ್ದುಗೊಳಿಸುವಂತೆ ಕೋರಿ ಅಖಿಲ ಭಾರತ ಎಚ್‌ಡಿಪಿಇ/ ಪಿಪಿ ಫ್ಯಾಬಿಕ್ ಮ್ಯಾನಿಫ್ಯಾಕ್ಚರ‍್ಸ್ ಸಂಘ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಪ್ಲಾಸ್ಟಿಕ್ ಮನುಷ್ಯನ ಜೀವನದ ಪ್ರತಿಯೊಂದು ಹಂತದಲ್ಲಿ ಬಳಕೆಯಾಗುತ್ತಿದ್ದು, ಆರೋಗ್ಯ ಮತ್ತು ಸುರಕ್ಷತೆ ಮಾನದಂಡಗಳನ್ನು ಪೂರೈಸಬೇಕು. ಪರಿಸರ ಮತ್ತು ಸಾರ್ವಜನಿಕರಿಗೆ ಅಪಾಯಕಾರಿಯಲ್ಲದಂತೆ ನೋಡಿಕೊಳ್ಳಬೇಕಾಗಿದೆ. ಆದ್ದರಿಂದ ಪ್ಲಾಸ್ಟಿಕ್ ಉತ್ಪಾದನೆಯ ಪ್ರತಿಯೊಂದು ಕಚ್ಚಾವಸ್ತುವಲ್ಲಿಯೂ ಬಿಐಎಸ್ ಮುದ್ರೆ ತಂದಲ್ಲಿ ಅಂತಿಮ ಉತ್ಪನ್ನದಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ನೆರವಾಗಲಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಅಲ್ಲದೆ, ಸರಕುಗಳ ಗುಣಮಟ್ಟದ ಪ್ರಾಮಾಣೀಕರಣಕ್ಕೆ ತರುವುದಕ್ಕಾಗಿ ಕಚ್ಚಾವಸ್ತುಗಳಲ್ಲಿಯೂ ಭಾರತೀಯ ಗುಣಮಟ್ಟ ಸಂಸ್ಥೆ(ಬಿಐಎಸ್ ಮುದ್ರೆ) ಇರುವಂತೆ ನೋಡಿಕೊಳ್ಳುವುದೇ ಅಧಿಸೂಚನೆಯ ಮುಖ್ಯ ಉದ್ದೇಶವಾಗಿದೆ. ಆದ್ದರಿಂದ ಸರ್ಕಾರ ರೂಪಿಸುವ ನೀತಿಗಳನ್ನು ಪರಿಶೀಲಿಸಲು ನ್ಯಾಯಾಲಯಕ್ಕೆ ಕಾಲಾವಕಾಶವಿಲ್ಲ ಎಂದು ಹೇಳಿದೆ.
ಕಚ್ಚಾವಸ್ತುವಿನಲ್ಲಿಯೂ ಗುಣಮಟ್ಟ ಇಲ್ಲದಿದ್ದರೆ ಅದರಿಂದ ಸಿದ್ದಪಡಿಸಿದ ವಸ್ತುಗಳಲ್ಲಿ ಹೇಗೆ ಗುಣಮಟ್ಟ ಕಾಣಬಹುದು? ಎಂಬುದರ ಕುರಿತು ಅರ್ಥವೇ ಆಗುತ್ತಿಲ್ಲ. ಅರ್ಜಿದಾರರ ಈ ವಾದ ಅಸಂಬಂಧವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಅರ್ಜಿದಾರರ ಪರ ವಕೀಲರು, ಪಾಲೀಥಿಲಿನ್ ಉತ್ಪಾದನೆ ಮಾಡಲು ಬೇಕಾಗುವ ಗ್ರ್ಯಾನ್ಯುಯಲ್ ತಯಾರಿಕೆಯಲ್ಲಿ ರಿಲಯಾನ್ಸ್ ಸಂಸ್ಥೆ ಏಕಸ್ವಾಮ್ಯವನ್ನು ಹೊಂದಿದೆ, ಈ ಸಂಸ್ಥೆಗೆ ನೆರವಾಗುವಂತೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದರಿಂದ ಎಲ್ಲ ಪ್ಲಾಸ್ಟಿಕ್ ಉತ್ಪಾದನೆ ಮಾಡುವ ಕಂಪೆನಿಗಳು ರಿಲಯಾನ್ಸ್ ಸಂಸ್ಥೆ ಅವಲಂಭಿಸಬೇಕಾಗುತ್ತದೆ ಎಂದು ವಾದಿಸಿದ್ದರು.
ಪ್ರಕರಣದ ಹಿನ್ನೆಲೆ: ಅರ್ಜಿದಾರರ ಒಕ್ಕೂಟ ಕಡಿಮೆ ಮತ್ತು ಹೆಚ್ಚು ಸಾಂದ್ರತೆಯ ಪಾಲಿಥಿಲೀನ್ ಉತ್ಪಾದನೆ ಮಾಡುವ ಕಂಪೆನಿಗಳಾಗಿವೆ. ಹೆಚ್ಚಿನ ಸಾಂದ್ರತೆಯುಳ್ಳ ಪಾಲಿಥಿಲೀನ್‌ನ್ನು ಪ್ಲಾಸ್ಟಿಕ್ ಪಾಲಿಮರ್ ಎಂದು ಕರೆಯಲಾಗುತ್ತದೆ. ಇದರಲ್ಲಿ ತೂಕ ಹಾಕಿದಾಗಲೂ ಬಿರುಕುಗಳು ಬರದಂತೆ ತಡೆಯಲಿದ್ದು, ಕೈಗಾರಿಕೆಗಳಲ್ಲಿ ಹೆಚ್ಚು ಬಳಕೆ ಮಾಡುತ್ತಾರೆ. ಕಡಿಮೆ ಸಾಂದ್ರತೆಯ ಪಾಲಿಥಿಲಿನ್‌ನ್ನು ಆಹಾರ ಪದಾರ್ಥಗಳ ಪ್ಯಾಕಿಂಗ್‌ಗಾಗಿ, ಪ್ಲಾಸ್ಟಿಕ್ ಚೀಲಗಳನ್ನಾಗಿ ಮಾಡಲು ಬಳಕೆ ಮಾಡಿಕೊಳ್ಳಲಾಗುತ್ತದೆ.
ಅಲ್ಲದೆ, ಈ ವಸ್ತುಗಳಿಗೆ ಕಚ್ಚಾ ವಸ್ತುವನ್ನು ಆಮದು ಮಾಡಿಕೊಂಡರೂ ಬಿಐಎಸ್ ಮಾನದಂಡಗಳು ಜಾರಿಯಲ್ಲಿರಬೇಕು ಎಂದು ಕೇಂದ್ರ ಸರ್ಕಾರ 2021ರ ಏಪ್ರಿಲ್ 15 ರಂದು ಅಧಿಸೂಚನೆ ಹೊರಡಿಸಿತ್ತು. ಅಲ್ಲದೆ, ಈ ಅಧಿಸೂಚನೆ 20224 ರ ಜನವರಿ 5ರಿಂದ ಜಾರಿಗೆ ಬರಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರ ಸಂಘ ಹೈಕೋರ್ಟ್ ಮೆಟ್ಟಿಲೇರಿತ್ತು.
-
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು












Click it and Unblock the Notifications