100 ಸಿಸಿ ಬೈಕ್‌ ನೋಂದಣಿ ತಡೆ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ

Posted By: Gururaj
Subscribe to Oneindia Kannada

ಬೆಂಗಳೂರು, ನವೆಂಬರ್ 3 : 100 ಸಿಸಿ ಬೈಕ್‌ಗಳ ನೋಂದಣಿಗೆ ಕರ್ನಾಟಕ ಸರ್ಕಾರ ವಿಧಿಸಿದ್ದ ತಡೆಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಇದರಿಂದ ಬೈಕ್ ಸವಾರರಿಗೆ ಮತ್ತು ಕಂಪನಿಗಳಿಗೆ ತಾತ್ಕಾಲಿಕ ನೆಮ್ಮದಿ ಸಿಕ್ಕಿದೆ.

100ಸಿಸಿ: ಹಳೆಯ ಬೈಕ್ ಗಳ ಮೇಲೂ ಡಬಲ್ ರೈಡ್ ನಿಷೇಧದ ತೂಗುಗತ್ತಿ

ಕರ್ನಾಟಕ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಟಿವಿಎಸ್ ಮತ್ತು ಹೋಂಡಾ ಕಂಪನಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು. ಶುಕ್ರವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತು.

HC stays registration of two-wheelers below 100 cc with pillion seat

ಹಿರೋ ಮೋಟೋಕಾರ್ಪ್ ಲಿ., ಟಿವಿಎಸ್ ಮೋಟಾರ್ ಕಾರ್ಪೊರೇಷನ್ ಲಿ. ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಬಿ.ವಿ.ನಾಗರತ್ನ ಅವರಿದ್ದ ಪೀಠ ಕರ್ನಾಟಕ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತು.

ಕರ್ನಾಟಕ ಸರ್ಕಾರ ಅಕ್ಟೋಬರ್ 23ರಂದು 100 ಸಿಸಿ ಬೈಕ್‌ಗಳ ನೋಂದಣಿಗೆ ತಡೆ ನೀಡಿತ್ತು. ಕರ್ನಾಟಕ ಹೈಕೋರ್ಟ್‌ನ 2015ರ ಆದೇಶದ ಅನ್ವಯ 100 ಸಿಸಿ ಬೈಕ್‌ನ ನೋಂದಣಿ ಸ್ಥಗಿತ ಮಾಡಬೇಕು ಎಂದು ಸೂಚಿಸಿತ್ತು ಮತ್ತು ಹಿಂಬದಿ ಸವಾರರು ಪ್ರಯಾಣಿಸುವಂತಿಲ್ಲ ಎಂದು ಸರ್ಕಾರ ಹೇಳಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka High Court on November 3, 2017 stayed Karnataka government’s order dated October 23 banning registration of two-wheelers with engine capacity below 100 cc having pillion seats.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ