ಹಾವೇರಿ, ಅಕ್ಟೋಬರ್ 20 : ದೀಪಾವಳಿ ಹಬ್ಬಕ್ಕೆ ಗಂಡ ಸೀರೆ ಕೊಡಿಸಿಲ್ಲ ಎಂಬ ಕಾರಣಕ್ಕೆ ಗಂಡನನ್ನು ನಿಂದಿಸಿದ ಪತ್ನಿ ಈಗ ಕಣ್ಣೀರಿಡುತ್ತಿದ್ದಾಳೆ.
ಪತಿ-ಪತ್ನಿಯ ಜಗಳ ದುರಂತ ಅಂತ್ಯ ಕಂಡಿದೆ. ಪತ್ನಿಯ ನಿಂದನೆಯ ಮಾತುಗಳನ್ನು ಅರಗಿಸಿಕೊಳ್ಳಲಾಗದ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಅರಿಶಿಣಗುಪ್ಪಿ ಗ್ರಾಮದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನ 50 ವರ್ಷದ ಚಂದ್ರಪ್ಪ ಮಲ್ಲಾಪುರ ಎಂದು ಗುರುತಿಸಲಾಗಿದೆ. ಚಂದ್ರಪ್ಪ ಮಲ್ಲಾಪುರ ಮಲ್ಲಾಪೂರ ಕಳೆದ ಕೆಲವು ವರ್ಷಗಳಿಂದ ಗೋವಾದಲ್ಲಿ ಕೆಲಸ ಮಾಡುತ್ತಿದ್ದ . ದೀಪಾವಳಿ ಹಬ್ಬ ಇರುವ ಕಾರಣ ನಿನ್ನೆ ಗೋವಾದಿಂದ ಹಬ್ಬಕ್ಕೆ ಊರಿಗೆ ಬಂದಿದ್ದಾನೆ.
ಆದರೆ, ದೀಪಾವಳಿ ಹಬ್ಬಕ್ಕೆ ಹೆಂಡತಿಗೆ ಸೀರೆ ತಂದಿಲ್ಲ ಎಂದು ಗಂಡನ ಜೊತೆ ಹೆಂಡತಿ ಜಗಳ ಮಾಡಿದ್ದಾಳೆ. ಚಂದ್ರಪ್ಪ ಮಲ್ಲಾಪುರ ಮನನೊಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಗಂಡ ಹೆಂಡತಿಯರಿಬ್ಬರು ಮನೆಯಲ್ಲಿ ಹಬ್ಬದ ಬಟ್ಟೆಯ ವಿಚಾರವಾಗಿ ಮಧ್ಯ ರಾತ್ರಿಯವರಗೂ ಜಗಳ ಮಾಡಿಕೊಂಡಿದ್ದಾರೆ ಎಂದು ಸ್ಥಳಿಯರು ಹೇಳಿಕೆ ನೀಡಿದ್ದಾರೆ
ಇನ್ನು ವಿಷಯ ತಿಳಿದ ಸ್ಥಳಕ್ಕೆ ಆಗಮಿಸಿದ ಆಡೂರು ಪೊಲೀಸರು, ಚಂದ್ರಪ್ಪ ಮಲ್ಲಾಪುರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಡೂರು ಪೊಲೀಸ್ ಠಾಣೆಯಲ್ಲಿ ಕೌಟುಂಬಿಕ ಕಲಹ ಹಿನ್ನೆಲೆ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪ್ರಕರಣ ದಾಖಲು ಮಾಡಿಕೊಂಡು ವಿಚಾರಣೆ ಮುಂದುವರೆಸಿದ್ದಾರೆ.
Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರ.subscribe to Kannada Oneindia.
ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!