ಹಾಸನ ಅಭ್ಯರ್ಥಿ ರಾಸಲೀಲೆ ಪೆನ್‌ಡ್ರೈವ್ ಸದ್ದು; ಸಾವಿರಾರು ಹೆಣ್ಣು ಮಕ್ಕಳ ಭವಿಷ್ಯವೇನು?

ಬೆಂಗಳೂರು,ಏಪ್ರಿಲ್‌ 26: ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರದಲ್ಲಿದ್ರೂ ಸಹ ಅವ್ಯವಹಾರ, ವರ್ಗಾವಣೆ ದಂಧೆ ಸೇರಿದಂತೆ ಯಾವುದಾದ್ರೂ ಒಂದು ವಿಚಾರದಲ್ಲಿ ಪೆನ್‌ ಡ್ರೈವ್‌ ವಿಚಾರ ಚರ್ಚೆಯಲ್ಲಿರುತ್ತದೆ ‌ . ಕಳೆದ ವಿಧಾನಸಭಾ ಚುನಾವಣೆಯ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಸರ್ಕಾರ ಅವ್ಯವಹಾರ ಹಾಗೂ ಅಕ್ರಮದ ಕುರಿತು ಪೆನ್‌ ಡ್ರೈವ್‌ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಲೋಕಸಭಾ ಚುನಾವಣೆಯ ಹೊತ್ತಲಿ ಬೀದಿಗಳಲ್ಲಿ ಪೆನ್‌ಡ್ರೈವ್ ಚೆಲ್ಲಾಡುತ್ತಿವೆ ಎಂದು ಮಾಹಿತಿ ತಿಳಿದು ಬಂದಿದೆ.

ಹಾಸನ ಲೋಕಸಭಾ ಕ್ಷೇತ್ರದ ರಾಜಕೀಯ ಪಕ್ಷವೊಂದರ ಅಭ್ಯರ್ಥಿಯೊಬ್ಬರಿಗೆ ಸೇರಿದೆ ಎನ್ನಲಾದ ರಾಸಲೀಲೆಯ ಫೋಟೋ ಮತ್ತು ವಿಡಿಯೋಗಳನ್ನು ಒಳಗೊಂಡ ಪೆನ್ ಡ್ರೈವ್ ಸುದ್ದಿ ಸಾಕಷ್ಟು ದಿನಗಳಿಂದ ಚರ್ಚೆಯಲ್ಲಿತ್ತು. ಆದರೆ, ಲೋಕಸಭಾ ಚುನಾವಣೆಯ ಹೊತ್ತಲಿ ಈ ವಿಚಾರ ಮುನ್ನಲೆಗೆ ಬಂದಿದೆ.

Hassan Lok Sabha Candidate s Alleged Sexual Harassment Video Surfaces Pendrive Leak

ಈ ಪೆನ್‌ ಡ್ರೈವ್‌ ಕುರಿತು ಕರ್ನಾಟಕ ಕಾಂಗ್ರೆಸ್‌ ಟ್ವೀಟ್‌ ಮೂಲಕ ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಅವರಿಗೆ ಹಲವು ಪ್ರಶ್ನೆಗಳನ್ನ ಮುಂದಿಟ್ಟಿದೆ. ಕುಮಾರಸ್ವಾಮಿಯವರೇ, ನೀವು ತೋರಿಸಿ, ತೋರಿಸಿ ಜೇಬೋಳಗೆ ಇಳಿಸಿಕೊಳ್ಳುತ್ತಿದ್ದ ಪೆನ್ ಡ್ರೈವ್‌ನಲ್ಲಿನ ರಹಸ್ಯ ಈಗ ಹೊರಬಂದಿದೆಯೇ?ಹಾಸನದ ಬೀದಿ ಬೀದಿಗಳಲ್ಲಿ ಚೆಲ್ಲಾಡುತ್ತಿರುವ ಪೆನ್ ಡ್ರೈವ್ ನಿಮ್ಮದೇನಾ? ಕುಮಾರಸ್ವಾಮಿಯವರೇ, ರಾಜ್ಯದ ಮಹಿಳೆಯರ ಬಗ್ಗೆ ನಾಲಿಗೆ ಹರಿಬಿಟ್ಟು ದಾರಿ ತಪ್ಪಿದ್ದಾರೆ ಎಂದಿದ್ದ ನೀವು ಯಾಕೆ ಈಗ ಗಾಢ ಮೌನ ವಹಿಸಿದ್ದೀರಿ? ದಾರಿ ತಪ್ಪಿ ನಡೆದವರು ಯಾರು ಎನ್ನುವ ಸಂಗತಿ ಬಟಾಬಯಲಾಗಿರುವಾಗ ರಾಜ್ಯದ ಜನರಿಗೆ ಮುಖ ತೋರಿಸಲಾಗುತ್ತಿಲ್ಲವೇ?? ಎಂದು ಪ್ರಶ್ನಿಸಿದೆ.

ಈ ಕುರಿತು ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮೀ ಚೌದರಿ ಅವರು ಒನ್‌ ಇಂಡಿಯಾ ಕನ್ನಡದೊಂದಿಗೆ ಮಾತನಾಡಿ, ಮಹಿಳೆಯರ ಜೊತೆಗಿನ ಅಶ್ಲೀಲ ವಿಡಿಯೋ ಬಗ್ಗೆ ನಮಗೆ ದೂರುಗಳು ಬಂದಿವೆ. ಹಲವು ಸಂಘಟನೆಗಳು ಬಂದು ದೂರು ನೀಡಿದ್ದಾರೆ. ಅಲ್ಲದೇ ಹಾಸನ ಕ್ಷೇತ್ರದಲ್ಲಿ ಲೈಂಗಿಕ ಚಿತ್ರಣದ ವಿಡಿಯೋ ಒಳಗೊಂಡ ಪೆನ್‌ ಡ್ರೈವ್‌ ಅನ್ನ ಹಂಚಿದ್ದಾರೆ. ಆ ವಿಡಿಯೋದಲ್ಲಿ ಸಾವಿರಾರು ಹೆಣ್ಣು ಮಕ್ಕಳಿದ್ದಾರೆ. ಮಹಿಳಾ ಆಯೋಗಕ್ಕೂ ಪೆನ್‌ ಡ್ರೈವ್‌ ತಂದು ಕೊಟ್ಟಿದ್ದಾರೆ. ನಮಗೆ ಬಂದ ದೂರಿನ ಹಿನ್ನೆಲೆ ಪೊಲೀಸ್‌ ಮಹಾನಿರ್ದೇಶಕರಿಗೆ ಹಾಗೂ ಹಾಸನ ಎಸ್‌ ಪಿ ಗೆ ನಾನು ಆಗ್ರಹಿಸಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು, ಇದಕ್ಕೆ ವಿಶೇಷ ತಂಡ ರಚನೆಯಿಂದ ತನಿಖೆಯಾಗಬೇಕು ಎಂದು ಸಿದ್ದರಾಮಯ್ಯ ಹಾಗೂ ಗೃಹ ಸಚಿವರಿಗೆ ಪತ್ರ ಬರೆದಿದ್ದೇನೆ ಎಂದರು.

ಆ ಪೈನ್‌ ಡ್ರೈವ್‌ ನಲ್ಲಿ 2876 ವಿಡಿಯೋಗಳಿವೆ, ಸಾವಿರಾರು ಹೆಣ್ಣು ಮಕ್ಕಳ ಚಿತ್ರೀಕರಣವಾಗಿದೆ. ಆ ಹೆಣ್ಣು ಮಕ್ಕಳ ಭವಿಷ್ಯ ತೂಗುಗತ್ತಿ ಮೇಲಿದೆ. ಅವರ ಕುಟುಂಬದವರೂ ಹಾಗೂ ಅವರ ಮಕ್ಕಳ ಜೀವನ ಏನ್‌ ಆಗ್ಬೇಕು.. ಇದೊಂದು ವಿಕೃತ ಘಟನೆ. ಈ ವಿಡಿಯೋವನ್ನ ಹಂಚಿರುವುದು ಸಹ ದೊಡ್ಡ ಕೃತ್ಯ. ಎಷ್ಟೋ ಜನ ಹೆಣ್ಣು ಮಕ್ಕಳ ಭವಿಷ್ಯ, ಘನತೆ ಹಾಗೂ ಗೌರವವಿದೆ. ಈ ಬಗ್ಗೆ ತನಿಖೆಯಾಗಬೇಕು ಹಾಗೂ ಈ ಬಗ್ಗೆ ಶಿಕ್ಷೆಯಾಗಬೇಕು ಎಂದು ಮನವಿ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+