ಹನೂರು ಪ್ರಕರಣಕ್ಕೆ ಬಿಗ್ ಟ್ವಿಸ್ಟ್: 2 ಬಂದೂಕು, ಜಿಂಕೆ ಮಾಂಸ ಸಾಕ್ಷ್ಯ! 3 'ತಮಿಳರ ಹತ್ಯಾಕಾಂಡ' ಎಂದ ಸಿಎಂ ವಿಜಯ್

ಚಾಮರಾಜನಗರ: ಜಿಲ್ಲೆಯ ಹನೂರು ಅರಣ್ಯ ಪ್ರದೇಶದಲ್ಲಿ ನಡೆದ ಶೂಟೌಟ್‌ ಮತ್ತು ಮೂವರ ಸಾವು ಪ್ರಕರಣ ಕರ್ನಾಟಕದಲ್ಲಿ ಮಾತ್ರವಲ್ಲದೇ ತಮಿಳುನಾಡಿನಲ್ಲಿ ಕಿಡಿ ಹೊತ್ತಿಸಿದೆ. ಸಿಎಂ ಸಿ. ವಿಜಯ್ ಜೋಸೆಫ್ ಅವರು ಇದನ್ನು ತಮಿಳಿಗರ ಹತ್ಯಾಕಾಂಡ ಎಂದು ಕರೆದಿದ್ದಾರೆ. ನ್ಯಾಯನಿಷ್ಟ ತನಿಖೆ ನಡೆಯಬೇಕು ಎಂದಿದ್ದಾರೆ. ಈ ಮೂಲಕ ಎರಡು ರಾಜ್ಯಗಳ ಮಧ್ಯ ಕಾವೇರಿ ವಿವಾದದ ಮಾತ್ರವಲ್ಲದೇ ಭಾಷೆ ಮತ್ತು ದ್ವೇಷ ವಿಚಾರವು ಗಂಭೀರ ಸ್ವರೂಪ ಪಡೆದಂತಾಗಿದೆ.

ಹನೂರಲ್ಲಿ ಅರಣ್ಯ ಪೊಲೀಸರಿಗೆ ಗುಂಡಿಗೆ ಬಲಿಯಾದವರು ತಮಿಳು ಭಾಷಿಗರು. ತಮಿಳಿಗರೇ ವಾಸಿಸುವ ಆಂಟೋ ಸಾಮಿ, ಜಾನ್ ರೋಸ್ ಪೀಟರ್ ಮತ್ತು ಕುಮಾರ್ ಅವರನ್ನು ಅರಣ್ಯಾಧಿಕಾರಿಗಳು ಗುಂಡಿಟ್ಟು ಕೊಂದಿದ್ದಾರೆ. ಇದೊಂದು ಹೃದಯವಿದ್ರಾವಕ ಘಟನೆಯಾಗಿದ್ದು, ನಾನು ಖಂಡಿಸುತ್ತೇನೆ ಎಂದು ಸಿಎಂ ವಿಜಯ್ ಹೇಳಿದ್ದಾರೆ.

Hanur Forest Shootout

ಕಾಡು ಪ್ರಾಣಿಗಳನ್ನು ಭೇಟಿಯಾಡಲು ಬಂದವರು. ಕಾಡು ಪ್ರಾಣಿಗಳ ಮಾಂಸ ಮಾರಾಟ ಮಾಡುವವರ ಮೇಲೆ ದಾಳಿ ನಡೆದಿದೆ ಎಂದು ಹೇಳಿದ್ದ ಅರಣ್ಯಾಧಿಕಾರಿಗಳ ಹೇಳಿಕೆಗಳು ಸ್ವೀಕಾರಾರ್ಹವಲ್ಲ. ಈ ಕ್ರೂರ ಘಟನೆ ಬಗ್ಗೆ ನಿಷಪಕ್ಷಪಾತ ತನಿಖೆ ನಡೆಯಬೇಕು. ಅದಕ್ಕಾಗಿ ಉನ್ನತ ಮಟ್ಟದ ಸಭೆ ನಡೆಸಬೇಕು. ಮೃತರ ಕುಟುಂಬಳಿಗೆ ಕರ್ನಾಟಕ ಸರ್ಕಾರ ಎಲ್ಲಿ ವಿಧದ ಸಹಾಯ ಸಹಕಾರ ನೀಡಬೇಕು ಎಂದು ಸಿಎಂ ವಿಜಯ್ ಒತ್ತಾಯಿಸಿದ್ದಾರೆ.

ಆಡಳಿತ ಪಕ್ಷ ಮಾತ್ರವಲ್ಲದೇ ವಿಪಕ್ಷಗಳಾದ ಡಿಎಂಕೆ, ಪಿಎಂಕೆ ನಾಯಕರು ಸಹ ಈ ಗುಂಡಿನ ದಾಳಿ, ಸಾವನ್ನು ಖಂಡಿಸಿವೆ. ಮೃತರನ್ನು ತಮಿಳರು ಎಂದು ಗುರುತಿಸುವ ಮೂಲಕ ಭಾಷೆಯ ಬಣ್ಣ ಕಟ್ಟಲಾಗಿದೆ. ಈ ಮೂಲಕ ಎರಡು ರಾಜ್ಯಗಳ ನಡುವೆ ಮತ್ತೊಂದು ವೈಷಮ್ಯಕ್ಕೆ ದಾರಿಯಾದಂತಾಗಿದೆ. ಕರ್ನಾಟಕ ವಿಪಕ್ಷಗಳು ಸಹ ಘಟನೆಯನ್ನು ಖಂಡಿಸಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರದ, ಅರಣ್ಯಾಧಿಕಾರಿಗಳ ವಿರುದ್ಧ ಮುಗಿ ಬಿದ್ದಿವೆ.

ಬೇಟೆಗಾರರಿಂದ 2 ಬ್ಯಾಗ್‌ ಜಿಂಕೆ ಮಾಂಸ ಜಪ್ತಿ, ಘಟನೆಗೆ ಸಾಕ್ಷಿ

ರಾಜ್ಯ ಅರಣ್ಯ ಇಲಾಖೆ ಸಿಬ್ಬಂದಿ ಗುಂಡೇಟಿಗೆ ಮೂವರು ಜಿಂಕೆ ಬೇಟೆಗಾರರು ಬಲಿಯಾಗಿರುವ ಪ್ರಕರಣದಲ್ಲಿ ಬೇಟೆಗಾರರಿಂದ 2 ಬ್ಯಾಗ್‌ 34.25 ಜಿಂಕೆ ಮಾಂಸ ವನ್ನು ಜಪ್ತಿ ಮಾಡಲಾಗಿದೆ ಎಂದು ಸರ್ಕಾರ ತಿಲಿಸಿದೆ.

ನಾಲ್ವರು ಬೇಟೆಗಾರರು ನಾಡಬಂದೂಕು ಹಿಡಿದು ಇಡೀ ರಾತ್ರಿ ಪ್ರಾಣಿಗಳನ್ನು ಬೇಟೆಯಾಡಿ, ಜಿಂಕೆ ಮಾಂಸವನ್ನು ಸಾಗಿಸುತ್ತಿದ್ದರು ಎಂಬ ಸುಳಿವು ಸಿಕ್ಕಿತ್ತು. ಈ ವೇಳೆ ಅರಣ್ಯ ಇಲಾಖೆಯ ಸಿಬ್ಬಂದಿಯು ಮೂವರನ್ನು ತಡೆದಿದ್ದರು. ಈ ವೇಳೆ ಬೇಟೆಗಾರರ ಬಳಿ 2 ಪರವಾನಗಿ ಇಲ್ಲದ ನಾಡಬಂದೂಕು ಇತ್ತು. ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಬೇಟೆಗಾರರು ದಾಳಿಗೆ ಯತ್ನಿಸಿದ್ದಾರೆ.

ಭೇಟೆಗಾರರಿಂದಲೂ ಅರಣ್ಯಾಧಿಕಾರಿಗಳತ್ತ ಫೈರಿಂಗ್!

ಜಪ್ತಿ ಮಾಡಿರುವ ಮಾಂಸದಲ್ಲಿಯೂ ಕೂಡ ಗುಂಡೇಟಿನ ಗುರುತು ಕಾಣುತ್ತಿದ್ದರೂ ಬೇಟೆಯೇ ನಡೆದಿಲ್ಲ, ನಕಲಿ ಎನ್ಕೌಂಟರ್ ಎನ್ನುತ್ತಿರುವುದು ಪ್ರಕರಣದ ದಿಕ್ಕನ್ನು ದಾರಿತಪ್ಪಿಸಿ ತಪ್ಪಿತಸ್ಥರನ್ನು ಕಾಪಾಡುವ ಹುನ್ನಾರ ಎನ್ನಲಾಗಿದೆ. ಸರ್ಕಾರವು ಪ್ರಕರಣದ ಬಗ್ಗೆ ಮ್ಯಾಜಿಸ್ಟ್ರೇಟ್‌ ತನಿಖೆ ಮಾಡುತ್ತೇವೆ. ತನಿಖೆ ನಡೆದ ಬಳಿಕ ಸತ್ಯಾಂಶ ಹೊರಗೆ ಬರಲಿದೆ. ಅರಣ್ಯ ಅಧಿಕಾರಿಗಳ ತಪ್ಪಿದ್ದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ತನಿಖೆಗೆ ಮುಂಚೆ ಯಾರ ಹೇಳಿಕೆಯನ್ನೂ ಗಣನೆಗೆ ತೆಗೆದುಕೊಳ್ಳುವಂತಿಲ್ಲ. ಉದ್ದೇಶಪೂರ್ವಕ ವಾಗಿ ಎನ್‌ಕೌಂಟರ್‌ ಮಾಡಿಸಲಾಗಿದೆಯೇ ಎಂಬುದರ ಬಗ್ಗೆಯೂ ತನಿಖೆ ಮಾಡಲಾಗುವುದು. ಇನ್ನು ಮರಣೋತ್ತರ ಪರೀಕ್ಷೆ ವೇಳೆ ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+