Belagavi Rain: ಬೆಳಗಾವಿಯಲ್ಲಿ ಭಾರಿ ಮಳೆ; ವರುಣ ದೇವನ ಆರ್ಭಟಕ್ಕೆ ಹನುಮಾನ ದೇವಸ್ಥಾನ ಮುಳಗಡೆ
ಬೆಳಗಾವಿ, ಜುಲೈ 01: ವರುಣ ದೇವನ ಆರ್ಭಟಕ್ಕೆ ರಾಜ್ಯದ ಒಂದಿಷ್ಟು ಜಿಲ್ಲೆಗಳ ಜನ ಈಗಾಗಲೇ ಬೇಸತ್ತು ಹೋಗಿದ್ದಾರೆ. ಕಳೆದ ನಾಲೈದು ದಿನಗಳಲ್ಲಿ ಸುರಿದ ಭಾರೀ ಮಳೆಗೆ ಮಲೆನಾಡು, ಕರಾವಳಿ, ಉತ್ತರ ಕರ್ನಾಟಕದ ಜಿಲ್ಲೆಗಳ ಜನ ತತ್ತರಿಸಿದ್ದು, ಕುಂದನಗರಿ ಬೆಳಗಾವಿಯಲ್ಲಿ ಮಳೆರಾಯನ ಅರ್ಭಟಕ್ಕೆ ಜನ ಜೀವನ ಅಸ್ತವ್ಯಸ್ಥವಾಗಿದೆ.
ಬೆಳಗಾವಿ ಜಿಲ್ಲೆಯಾದ್ಯಂತ ಧಾರಕಾರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಗೋವಾ ಮತ್ತು ಮಹಾರಾಷ್ಟ್ರ ಭಾಗದಲ್ಲಿ ಧಾರಾಕಾರ ಮಳೆಯಾಗಿದ್ದು, ಬೆಳಗಾವಿ ಜಿಲ್ಲೆಯ ಖಾನಾಪೂರದಲ್ಲಿರುವ ನದಿಗಳು ತುಂಬಿ ಹರಿಯುತ್ತಿವೆ, ಅಲ್ಲದೇ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆರಾಯ ಆರ್ಭಟಕ್ಕೆ ನದಿಯಲ್ಲಿರುವ ಹಣುಮಾನ ದೇವಸ್ಥಾನ ಮುಳಗಡೆಯಾಗಿದ್ದು, ನದಿ ದಂಡದ ಬಳಿ ಯಾರೂ ಹೋಗದಂತೆ ಎಚ್ಚರಿಕೆ ವಹಿಸಲಾಗಿದೆ.

ಕರ್ನಾಟಕದಲ್ಲಿ ಕೂಡ ಮಳೆ ಆರ್ಭಟಿಸಲಿದ್ದು, ಕರಾವಳಿ ಪ್ರದೇಶಗಳಾದ ಮಂಗಳೂರು, ಉಡುಪಿ, ಕಾಸರಗೋಡಿನಲ್ಲಿ ಇಂದು ಬೆಳಗ್ಗಿನಿಂದಲೇ ಮಳೆ ಆರ್ಭಟಿಸುತ್ತಿದೆ. ಬೆಂಗಳೂರಿನಲ್ಲಿ ಕೂಡ ಸಂಜೆ ವೇಳೆಗೆ ತುಂತುರು ಮಳೆಯಾಗುವ ಸಾಧ್ಯತೆ ಇದೆ. ಇನ್ನುಳಿದಂತೆ ಉತ್ತರ ಕನ್ನಡ, ಮೈಸೂರು, ಕೋಲಾರ ಭಾಗದಲ್ಲೂ ಮಳೆಯಾಗುವ ಸಾಧ್ಯತೆ ಇದೆ.












Click it and Unblock the Notifications