ಸಚಿವರೊಬ್ಬರು 50-60 ಕಾಂಗ್ರೆಸ್ ಶಾಸಕರ ಜೊತೆ ಬಿಜೆಪಿ ಸೇರಲಿದ್ದಾರೆ! ಯಾವ ಕ್ಷಣದಲ್ಲಾದರೂ ಸರ್ಕಾರ ಬೀಳುತ್ತೆ : ಹೆಚ್‌ಡಿಕೆ

ಕರ್ನಾಟಕ ಸರ್ಕಾರ ಬಗ್ಗೆ ಹೆಚ್‌ ಡಿ ಕುಮಾರಸ್ವಾಮಿಯವರು ಭವಿಷ್ಯ ನುಡಿದಿದ್ದಾರೆ. ಈ ಸರ್ಕಾರ ಹೆಚ್ಚು ದಿನ ಇರುವುದಿಲ್ಲ ಎಂದಿರುವ ಅವರು, ಕಾಂಗ್ರೆಸ್ ಸಚಿವರೊಬ್ಬರು ಬೆಂಬಲಿತ ಶಾಸಕರ ಜೊತೆ ಬಿಜೆಪಿ ಸೇರಲು ಸಿದ್ದವಾಗಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಹಾಸನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಆಡಳಿತಾರೂಢ ಕಾಂಗ್ರೆಸ್‌ನ ಪ್ರಭಾವಿ ಸಚಿವರೊಬ್ಬರು ಬಿಜೆಪಿ ಸೇರಬಹುದು. ಕೇಂದ್ರದಿಂದ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳಿಂದ ಹತಾಶರಾಗಿದ್ದು ಅದರಿಂದ ಹೊರಬರಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.

H. D Kumaraswamy

ಸಚಿವರು ಕಾಂಗ್ರೆಸ್ ಪಕ್ಷವನ್ನು ತೊರೆದು '50 ರಿಂದ 60 ಶಾಸಕರೊಂದಿಗೆ' ಬಿಜೆಪಿ ಸೇರಬಹುದು ಮತ್ತು ಅವರು ಪ್ರಸ್ತುತ ಬಿಜೆಪಿ ಕೇಂದ್ರ ನಾಯಕರ ಜೊತೆ 'ಮಾತುಕತೆ' ನಡೆಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

ಯಾರು ಆ ಪ್ರಭಾವಿ ಸಚಿವರು

ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿಯಾಗಿಲ್ಲ, ಈ ಸರ್ಕಾರ ಯಾವಾಗ ಹೋಗುತ್ತದೆ ಎಂದು ನನಗೆ ತಿಳಿದಿಲ್ಲ, ಪ್ರಭಾವಿ ಸಚಿವರೊಬ್ಬರು ತಮ್ಮ ಮೇಲಿನ ಪ್ರಕರಣಗಳಿಂದ ತಪ್ಪಿಸಿಕೊಳ್ಳಲು ಹತಾಶರಾಗಿದ್ದಾರೆ. ತಪ್ಪಿಸಿಕೊಳ್ಳಲು ಅವಕಾಶವಿಲ್ಲದಂತೆ ಕೇಂದ್ರವು ನನ್ನ ವಿರುದ್ಧ ಪ್ರಕರಣಗಳನ್ನು ದಾಖಲಿಸಿದೆ ಎಂದು ಹೇಳಿಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ನಾಯಕರ ಹೆಸರು ಬಹಿರಂಗಪಡಿಸುವಂತೆ ಕೇಳಿದಾಗ, ಸಣ್ಣ ನಾಯಕರಿಂದ ಇಂತಹ ಕೆಲಸವನ್ನು ಮಾಡಲು ಆಗಲ್ಲ ಎಂದ ಅವರು 'ಪ್ರಭಾವಿ ವ್ಯಕ್ತಿಗಳು' ಮಾತ್ರ ಇಂತಹ ಕೆಲಸಗಳನ್ನು ಮಾಡಲು ಸಾಧ್ಯ ಎಂದರು.

ಮಹಾರಾಷ್ಟ್ರದಲ್ಲಿ ಸರ್ಕಾರ ಪತನವಾದಂತೆ ಕರ್ನಾಟಕದಲ್ಲಿ ಕೂಡ ಯಾವ ಕ್ಷಣದಲ್ಲಾದರೂ ಸರ್ಕಾರ ಪತನವಾಗಬಹುದು, ಇಂದಿನ ರಾಜಕಾರಣ ನೋಡಿದಾಗ ಏನೂ ಬೇಕಾದರು ಸಂಭವಿಸಬಹುದು. ಯಾರಿಗೂ ಈಗ ಪ್ರಾಮಾಣಿಕತೆ, ನಿಷ್ಠೆ ಉಳಿದಿಲ್ಲ, ತಮಗೆ ಏನು ಬೇಕು ಅದನ್ನು ಮಾಡುತ್ತಿದ್ದಾರೆ ಅಷ್ಟೆ, ಅನುಕೂಲ ಆಗುತ್ತೆ ಅಂದರೆ ಮತ್ತೊಂದು ಕಡೆ ಹೋಗುತ್ತಾರೆ ಎಂದರು.

ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಬಗ್ಗೆ ಮಾತನಾಡಿದ ಹೆಚ್‌.ಡಿ. ಕುಮಾರಸ್ವಾಮಿ, ಹರಿಪ್ರಸಾದ್ ಮಾತ್ರವೇ ಅಲ್ಲ ಕಾಂಗ್ರೆಸ್‌ನಲ್ಲಿ ಅಂತಹ ಸಾಕಷ್ಟು ನಾಯಕರು ಇದ್ದಾರೆ, ಒಂದೊಂದೆ ಅಸಮಾಧಾನದ ಮಾತುಗಳು ಹೊರಬರಲಿವೆ, ಅಧಿಕಾರದಲ್ಲಿ ಉಳಿದುಕೊಳ್ಳಲು ವ್ಯಾಪಾರ ಮಾಡಲಾಗುತ್ತಿದೆ, ಅಕ್ರಮ ಸರಿ ಮಾಡಿಕೊಳ್ಳಲು ಹೋಗಿರುವ ಬಗ್ಗೆ ಕೂಡ ನನಗೆ ಮಾಹಿತಿ ಇದೆ ಎಂದು ಹೇಳಿದರು.

ಈ ಮೊದಲು ಕೂಡ ಹೆಚ್‌ಡಿ ಕುಮಾರಸ್ವಾಮಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗುವ ಬಗ್ಗೆ ಮಾತನಾಡಿದ್ದಾರೆ. ಮಹಾರಾಷ್ಟ್ರದಂತೆ ಇಲ್ಲೂ ಕೂಡ ಆಗಲಿದೆ, ಹೊಸ ಸರ್ಕಾರ ಬರಲಿದೆ ಎಂದು ಹೇಳಿದ್ದಾರೆ. ಆದರೆ ಈ ಬಾರಿ ಸಚಿವರೊಬ್ಬರು 50-60 ಶಾಸಕರ ಜೊತೆ ಬಿಜೆಪಿ ಸೇರ್ತಾರೆ ಎಂದಿರುವುದು ಕುತೂಹಲ ಹೆಚ್ಚಿಸಿದೆ. ಇದಕ್ಕೆ ಕಾಂಗ್ರೆಸ್ ನಾಯಕರು ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+