• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಂತರ ಜಿಲ್ಲಾ ಪಾಸು ಪಡೆಯಲು ಮಾರ್ಗಸೂಚಿಗಳೇನು?

|

ಬೆಂಗಳೂರು, ಮೇ 05 : ಕರ್ನಾಟಕ ಸರ್ಕಾರ ಲಾಕ್ ಡೌನ್ ನಿಯಮಗಳನ್ನು ಸಡಿಲಗೊಳಿಸಿದೆ. ಆದರೆ, ಬೇರೆ ಜಿಲ್ಲೆಗಳಿಗೆ ಸಂಚಾರ ನಡೆಸಲು ಪಾಸ್ ಅಗತ್ಯವಾಗಿದೆ. ವೆಬ್ ಸೈಟ್‌ ಅಥವ ಮೊಬೈಲ್ ಮೂಲಕ ಪೊಲೀಸ್ ಇಲಾಖೆಯ 'ಇ-ಪಾಸ್' ಪಡೆಯಬಹುದು.

   ಒಂದು ದಿನಕ್ಕೆ 4 ಕೋಟಿಯಷ್ಟು ಎಣ್ಣೆ ಮಾರಾಟವಾದ್ರೆ ನಮ್ಮ‌ ದೇಶ ಅಭಿವೃದ್ಧಿಯಾಗದ ದೇಶನಾ?? | Tonique | Bangalore

   ಅಂತರ ಜಿಲ್ಲೆಗಳ ಪಾಸು ಕೇವಲ ಬೇರೆ ಊರುಗಳಲ್ಲಿ 'ಸಿಲುಕಿರುವವರಿಗೆ ಮಾತ್ರ' ಎಂದು ಐಜಿಪಿ ಮತ್ತು ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ (ಆಡಳಿತ) ಹೇಮಂತ್ ನಿಂಬಾಳ್ಕರ್ ಟ್ವೀಟ್ ಮಾಡಿದ್ದಾರೆ. ತುರ್ತು ಸಂದರ್ಭದಲ್ಲಿ ಬೇರೆ ಜಿಲ್ಲೆಗಳಿಗೆ ಹೋಗುವವರು ಸಹ ಪಾಸು ಬಳಕೆ ಮಾಡಬಹುದು.

   ಅಂತರ ಜಿಲ್ಲೆ ಓಡಾಡೋಕೆ ಬೆರಳ ತುದಿಯಲ್ಲೇ ಪಾಸು ಪಡೆಯಿರಿ!

   ಕೇಂದ್ರ ಸರ್ಕಾರ ಬೇರೆ ಬೇರೆ ಊರುಗಳಲ್ಲಿ ಸಿಲುಕಿರುವ ಪ್ರವಾಸಿಗರು, ವಲಸೆ ಕಾರ್ಮಿಕರು, ಯಾತ್ರಾರ್ಥಿಗಳು, ವಿದ್ಯಾರ್ಥಿಗಳು ಸಂಚಾರ ನಡೆಸಲು ಅವಕಾಶ ಮಾಡಿಕೊಟ್ಟಿದೆ. ತಮ್ಮ ಊರುಗಳಲ್ಲಿಯೇ ಇದ್ದವರು ಮತ್ತೊಂದು ಸ್ಥಳಕ್ಕೆ ಪ್ರವಾಸ ಮಾಡಲು ಅವಕಾಶ ಕೊಟ್ಟಿಲ್ಲ.

   ಅಂತರ ಜಿಲ್ಲಾ ಸಂಚಾರಕ್ಕೆ ಪಾಸು ಪಡೆಯುವುದು ಹೇಗೆ?

   ಪಾಸುಗಳಿಗೆ ಅರ್ಜಿಯನ್ನು ಸಲ್ಲಿಸುವ ಮುನ್ನ 'ಸಿಲುಕಿರುವುದು' ಎಂಬುದನ್ನು ಅರ್ಥೈಸಿಕೊಳ್ಳಿ ಎಂದು ಪೊಲೀಸರು ಜನರಲ್ಲಿ ಮನವಿ ಮಾಡಿದ್ದಾರೆ. ಸಾಮಾನ್ಯ ಕಾರಣಗಳನ್ನು ಮುಂದಿಟ್ಟುಕೊಂಡು ಪಾಸುಗಳಿಗಾಗಿ ಮನವಿ ಸಲ್ಲಿಸಬೇಡಿ ಎಂದು ಸಹ ಕೋರಲಾಗಿದೆ.

   ವೇತನ ಕಡಿತ, ಕೆಲಸದಿಂದ ಕಿತ್ತು ಹಾಕಿದರೆ ಕಾರ್ಮಿಕರು ದೂರು ಕೊಡಿ

   ಸ್ವಂತ ವಾಹನಗಳಲ್ಲಿ ಪ್ರಯಾಣಿಸುವವರು ಮಾತ್ರ ಪೊಲೀಸ್ ಇಲಾಖೆ ನೀಡುವ ಪಾಸುಗಳನ್ನು ಪಡೆದು ಸಂಚಾರ ನಡೆಸಬಹುದಾಗಿದೆ. ಚೆಕ್ ಪೋಸ್ಟ್‌ಗಳಲ್ಲಿ ಪಾಸುಗಳನ್ನು ತೋರಿಸಿ, ಆರೋಗ್ಯ ತಪಾಸಣೆಗೆ ಒಳಪಟ್ಟು ಸಂಚಾರ ನಡೆಸಬಹುದಾಗಿದೆ.

   ಮೊಬೈಲ್ ನಂಬರ್, ಒಟಿಪಿ ಬಳಸಿಕೊಂಡು ಜನರು 'ಇ-ಪಾಸ್‌'ಗಳನ್ನು ಪಡೆಯಬಹುದಾಗಿದೆ. ಇದು ಒಂದು ದಿನದ, ಒಂದು ಕಡೆಯ ಹಾಗೂ ಒಂದು ಅವಧಿಯ ಪಾಸ್ ಆಗಿರುತ್ತದೆ.

   English summary
   Karnataka government relaxed in lock down rules. Pass must for the inter-district movement. Here are the guidelines to get pass.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X