ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ವಪಕ್ಷ ಸಭೆ: ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ವಿರೋಧ

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 08: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ಮುಂದಿನ ನಡೆ ಕುರಿತು ಚರ್ಚಿಸಲು ಸರ್ವ ಪಕ್ಷ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆ ವಿರೋಧಿಸಲು ಸರ್ವಾನುಮತದಿಂದ ನಿರ್ಧರಿಸಲಾಯಿತು.

ಕಾವೇರಿ ನಿರ್ವಹಣಾ ಮಂಡಳಿ ರಚನೆ, ಕೇಂದ್ರದ ಅಂಗಳದಲ್ಲಿ ಚೆಂಡು, ಮುಂದೇನು?ಕಾವೇರಿ ನಿರ್ವಹಣಾ ಮಂಡಳಿ ರಚನೆ, ಕೇಂದ್ರದ ಅಂಗಳದಲ್ಲಿ ಚೆಂಡು, ಮುಂದೇನು?

ಫೆಬ್ರವರಿ 16ರಂದು ಕಾವೇರಿ ವಿವಾದದ ಕುರಿತು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಕಾವೇರಿ ನದಿ ನೀರು ನಿರ್ವಹಣಾ ಮಂಡಳಿಯನ್ನು 6 ವಾರದಲ್ಲಿ ರಚನೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಲಾಗಿತ್ತು. ಈ ತೀರ್ಪಿನ ಬಳಿಕ ನಡೆಯುತ್ತಿರುವ ಮೊದಲ ಸಭೆ ಇದಾಗಿದೆ.

Karnataka Government decided to oppose formation of Cauvery Management Board

ವಿಧಾನಸೌಧದಲ್ಲಿ ನಡೆದ ಸರ್ವಪಕ್ಷ ಸಭೆಯ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸುಪ್ರೀಂಕೋರ್ಟ್‌ ತೀರ್ಪು ಕುರಿತು ಮೇಲ್ಮನವಿ ಸಲ್ಲಿಸುವ ವಿಚಾರವಾಗಿ ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ. ಸುಪ್ರೀಂ ತೀರ್ಪಿನಲ್ಲಿ ಮಂಡಳಿ ರಚಿಸಬೇಕೆಂಬ ಕುರಿತು ಸ್ಪಷ್ಟತೆ ಇಲ್ಲ. ಹಾಗಾಗಿ ಮತ್ತೊಮ್ಮೆ ವಕೀಲ ನಾರಿಮನ್ ತಂಡದವರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಗುವುದು ಎಂದರು.

ಕಾವೇರಿ ಅಂತಿಮ ತೀರ್ಪು : ತಮಿಳುನಾಡಿಗೆ ಕಹಿ, ಕರ್ನಾಟಕಕ್ಕೆ ಸಿಹಿಕಾವೇರಿ ಅಂತಿಮ ತೀರ್ಪು : ತಮಿಳುನಾಡಿಗೆ ಕಹಿ, ಕರ್ನಾಟಕಕ್ಕೆ ಸಿಹಿ

ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿಯನ್ನು ರಚನೆ ಮಾಡಬೇಕು ಎಂದು ಈಗಾಗಲೇ ಮನವಿ ಸಲ್ಲಿಸಿದ್ದಾರೆ.

ತುಂಗಭದ್ರ ಮಂಡಳಿಯಾಗಲಿ, ಕಾವೇರಿ ನದಿ ನೀರು ಹಂಚಿಕೆ ನಿರ್ವಹಣಾ ಮಂಡಳಿಯಾಗಲಿ ಶಾಶ್ವತ ಮಂಡಳಿ ರಚಿಸಿದರೆ, ಕರ್ನಾಟಕಕ್ಕೆ ಮಾರಕವಾಗಲಿದ್ದು, ಇದಕ್ಕೆ ಬಿಜೆಪಿ ವಿರೋಧವಿದೆ. ಸರ್ಕಾರದಿಂದ ರಿವ್ಯೂ ಪಿಟಿಷನ್‌ ಹಾಕುವ ವಿಚಾರವಾಗಿ ಕಾನೂನು ತಂಡದ ಜತೆ ಗಂಭೀರವಾಗಿ ಚರ್ಚಿಸಲಾಗುತ್ತದೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ಸಭೆ ನಂತರ ಹೇಳಿದರು.

ಕಾವೇರಿ ತೀರ್ಪಿಗೆ ಕೇಂದ್ರ ಮರು ಪರಿಶೀಲನಾ ಅರ್ಜಿ ಹಾಕಲಿ: ದೇವೇಗೌಡ ಸಲಹೆಕಾವೇರಿ ತೀರ್ಪಿಗೆ ಕೇಂದ್ರ ಮರು ಪರಿಶೀಲನಾ ಅರ್ಜಿ ಹಾಕಲಿ: ದೇವೇಗೌಡ ಸಲಹೆ

ಜೆಡಿಎಸ್‌ ಶಾಸಕ ವೈಎಸ್‌ವಿ ದತ್ತಾ ಮಾತನಾಡಿ, ಸುಪ್ರೀಂ ಕೋರ್ಟ್‌ ತೀರ್ಪು ನಮಗೆ ಸಮಾಧಾನ ತಂದಿಲ್ಲ. ದೇವೇಗೌಡರ ಒತ್ತಾಯದಿಂದಾಗಿ ನಾಳೆ ಕೇಂದ್ರ ಸರ್ಕಾರ ಮೀಟಿಂಗ್‌ ಕರೆದಿದ್ದು, ಸರ್ಕಾರ ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಸರ್ಕಾರ ತೀರ್ಪಿನ ಕುರಿತು ಮೇಲ್ಮನವಿ ಸಲ್ಲಿಸಬೇಕು ಎಂದು ತಿಳಿಸಿದರು.

English summary
Karnataka Government decided to oppose formation of Cauvery Management Board. Chief Minister Siddaramaiah chaired all party meeting discussed about the next course of action in cauvery dispute.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X