ಪ್ರವೀಣ್ ಖಾಂಡ್ಯ ವಿರುದ್ಧ ಗೂಂಡಾ ಕಾಯ್ದೆ ಜಾರಿ, ಕಲಬುರಗಿ ಜೈಲಿಗೆ

Posted By:
Subscribe to Oneindia Kannada

ಚಿಕ್ಕಮಗಳೂರು, ಜನವರಿ 30: ಒಟ್ಟು 33 ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಹಿಂದೂಪರ ಸಂಘಟನೆ ಮುಖಂಡ ಖಾಂಡ್ಯದ ಪ್ರವೀಣ್‌ನನ್ನು ಚಿಕ್ಕಮಗಳೂರು ಜಿಲ್ಲಾಧಿಕಾರಿ ಆದೇಶದ ಹಿನ್ನೆಲೆಯಲ್ಲಿ ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿ ಗುಲ್ಬರ್ಗ ಜೈಲಿಗೆ ಸ್ಥಳಾಂತರಿಸಲಾಗಿದೆ. ಡಿವೈಎಸ್ಪಿ ಕಲ್ಲಪ್ಪ ಅವರ ಸಾವಿಗೆ ಕಾರಣವಾದ ತೇಜಸ್ ಅಪಹರಣ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ದೇವದಾನ ಗ್ರಾಮ ಪಂಚಾಯತ್ ವ್ಯಾಪ್ತಿಯ ಖಾಂಡ್ಯ ಎಂಬಲ್ಲಿನ ಎಚ್.ಕೆ.ಪ್ರವೀಣ್ ಅಲಿಯಾಸ್ ಖಾಂಡ್ಯ ಪ್ರವೀಣ್ ಗೆ ಜಿಲ್ಲೆಯಲ್ಲಿಶಾಂತಿ ಮತ್ತು ಸುವ್ಯವಸ್ಥೆಯನ್ನು ಕದಡಂತೆ ಪೊಲೀಸ್ ಅಧಿಕಾರಿಗಳು ಈ ಮೊದಲು ಎಚ್ಚರಿಕೆ ನೀಡಿದ್ದರು.

Goonda Act invoked against Praveeen Khandya sent to jail

ಆದರೆ ಕ್ರಿಮಿನಲ್ ಚಟುವಟಿಕೆಯೊಂದಿಗಿನ ತನ್ನ ನಡವಳಿಕೆಯನ್ನು ಬದಲಾಯಿಸದ ಹಿನ್ನಲೆಯನ್ನು ಚಿಕ್ಕಮಗಳೂರು ಪೊಲೀಸರು ಆರೋಪಿ ಪ್ರವೀಣ್ ಖಾಂಡ್ಯ ವಿರುದ್ದ ವಿವರವಾದ ವರದಿಯನ್ನು ಸಿದ್ದಪಡಿಸಿ ಜಿಲ್ಲಾಧಿಕಾರಿಗೆ ನೀಡಲಾಗಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ಅಣ್ಣಾಮಲೈ ತಿಳಿಸಿದ್ದಾರೆ.

ತೇಜಸ್ ಅಪಹರಣ ಹಾಗೂ ಡಿವೈಎಸ್ ಪಿ ಕಲ್ಲಪ್ಪ ಹಂಡಿಭಾಗರವರ ಆತ್ಮಹತ್ಯೆ ಪ್ರಕರಣದ ಸಂಬಂಧ ಪ್ರವೀಣ್ ಖಾಂಡ್ಯ ಪ್ರಮುಖ ಆರೋಪಿಯಾಗಿದ್ದು, ಆತ್ಮಹತ್ಯೆ ಬಳಿಕ ತಲೆಮರಿಸಿಕೊಂಡಿದ್ದವನು ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆದು ಚಿಕ್ಕಮಗಳೂರಿಗೆ ಮರಳಿದ್ದ ಅದರೆ, ಗ್ರಾಮಾಂತರ ಠಾಣೆಯ ಪೋಲಿಸರು 2011ರಲ್ಲಿ ದತ್ತ ಜಯಂತಿ ನಡೆಯುವ ಸಂದರ್ಭದಲ್ಲಿ ಪೊಲೀಸರ ಕರ್ತವ್ಯಕ್ಕೆ ಕೆಲಸಕ್ಕೆ ಅಡಚಣೆ ಉಂಟು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆದಿದ್ದರು. ಜನವರಿ 16ರವರೆಗೆ ಚಿಕ್ಕಮಗಳೂರು ಜೈಲಿನಲ್ಲಿದ್ದ ಪ್ರವೀಣ್ ಖಾಂಡ್ಯ ಮೇಲೆ ಗೂಂಡಾ ಕಾಯ್ದೆ ಜಾರಿ ಮಾಡಿ, ಪೊಲೀಸ್ ಬೆಂಗಾವಲಿನಲ್ಲಿ ಗುಲ್ಬರ್ಗಾ ಜೈಲಿಗೆ ಕಳುಹಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Pro Hindu activist Praveen Khandya who is facing 33 cases against him has been booked under Goonda act was shifted to Gulbarga based on the directive of Chikkamagaluru Deputy Commissioner Sathyavati.
Please Wait while comments are loading...