ಆರ್‌ಎಸ್‌ಎಸ್‌, ಬಿಜೆಪಿ ನಾಯಕರಿಗೆ ಹೊಸ ಸವಾಲು ಹಾಕಿದ ಗೂಳಿಹಟ್ಟಿ ಶೇಖರ್‌!

ಬೆಂಗಳೂರು, ಡಿಸೆಂಬರ್‌ 9: ಹೊಸದುರ್ಗ ಕ್ಷೇತ್ರದ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ನಾಗಪುರದ ಹೆಡ್ಗೆವಾರ್ ಸ್ಮಾರಕದೊಳಗೆ ನಾನು ಹೋಗಿದ್ದ ವೀಡಿಯೋ ರಿಲೀಸ್ ಮಾಡುವಂತೆ ಆರ್‌ಎಸ್‌ಎಸ್‌, ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ.

ಈ ಹಿಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಕೇಂದ್ರ ಕಚೇರಿ ಇರುವ ನಾಗ್ಪುರದ ಹೆಡಗೇವಾರ್‌ ಮ್ಯೂಸಿಯಂಗೆ ದಲಿತನಾದ ತನ್ನನ್ನು ಪ್ರವೇಶ ನೀಡದಿರುವ ಬಗ್ಗೆ ರಾಷ್ಟ್ರೀಯ ಬಿಜೆಪಿ ‌ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ಗೆ ಕಳುಹಿಸಿದ್ದ ಆಡಿಯೋ‌ದಲ್ಲಿ ಆಕ್ರೋಶ ಹೊರಹಾಕಿದ್ದರು. ಬಳಿಕ ಗೂಳಿಹಟ್ಟಿ ಶೇಖರ್ ಅವರ ಆಡಿಯೋ ವೈರಲ್‌ ಆದ್ದರಿಂದ ಬಿಜೆಪಿ ನಾಯಕರು ಹಾಗೂ ಸಂಘಪರಿವಾರದ ಮುಖಂಡರು ಪ್ರತಿಕ್ರಿಯೆ ನೀಡಿದ್ದರು.

Goolihatti Shekhar has given a new challenge to the leaders of RSS and BJP

ಈಗ ಮತ್ತೆ ಗೂಳಿಹಟ್ಟಿ ಶೇಖರ್‌ ಮತ್ತೊಂದು ಆಡಿಯೋದಲ್ಲಿ ಹೆಡಗೇವಾರ್‌ ಮ್ಯೂಸಿಯಂಗೆ ಪ್ರವೇಶ ನಿರಾಕರಿಸಿದ ವಿಚಾರವನ್ನು ತಳ್ಳಿಹಾಕುತ್ತಿರುವ ಬಿಜೆಪಿ ಮುಖಂಡರು ಸಿಸಿಟಿವಿ ದೃಶ್ಯಗಳನ್ನು ಬಿಡುಗಡೆ ಮಾಡಿಸಲಿ ಎಂದು ಮಾಜಿ ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಸವಾಲು ಹಾಕಿದ್ದಾರೆ.

ಈಗ ಬಿಡುಗಡೆ ಮಾಡಿರುವ ಆಡಿಯೋದಲ್ಲಿ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌, ಶಾಸಕ ಸುರೇಶ್‌ಕುಮಾರ್‌ ಹಾಗೂ ಕುಡುಚಿ ಮಾಜಿ ಶಾಸಕ ಪಿ.ರಾಜೀವ್‌ ಅವರ ಹೆಸರು ಉಲ್ಲೇಖಿಸಿ ಆಡಿಯೊ ಬಿಡುಗಡೆ ಮಾಡಿದ್ದಾರೆ. ಒಂದು ವೇಳೆ ‌ನನ್ನ ಮಾತು ಸುಳ್ಳಾಗಿದ್ರೆ, ನಿಮ್ಮ ಮನೆಗಳಲ್ಲಿ ಕಸ ಗುಡಿಸುವ ಕೆಲಸ ಮಾಡಿಕೊಂಡಿರುತ್ತೇನೆ ಎಂದು ಹೇಳಿದ್ದಾರೆ.

ನಿಮ್ಮಲ್ಲಿ ಸಿಸಿಟಿವಿ ಫೂಟೇಜ್ ಇರುತ್ತದಲ್ಲ ರಿಲೀಸ್ ಮಾಡಿ. ನಾನು ಹೇಳಿರುವ ಸಂಪ್ರದಾಯ ಸುಳ್ಳಾದರೆ, ನಿಮ್ಮ ಮನೆ ಗೇಟ್‌ಕೀಪರ್ ಆಗಿ ಕೆಲಸ ಮಾಡಿಕೊಂಡಿರುತ್ತೇನೆ. ಅಲ್ಲದೆ ಕೆಲ ತಿಂಗಳ ಮುನ್ನ ನಾನು ಈ ವಿಷಯ ಹೇಳಿದ್ದರೆ, ಇನ್ನಷ್ಟು ಸೀಟ್ ಕಳೆದುಕೊಳ್ಳುತ್ತಿದ್ರಿ ಎಂದು ಸಂಘಪರಿವಾರದ ವಿರುದ್ಧ ಕಿಡಿಕಾರಿದ್ದಾರೆ.

ಬಿಜೆಪಿ ಮಾಜಿ ಶಾಸಕ ಪಿ. ರಾಜೀವ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ನಾನು ರಾತ್ರಿಯೆಲ್ಲಾ ಕುಡಿಯುತ್ತೇನೆ ರಾಜೀವ್ ಅಣ್ಣ. ನಮ್ಮಂಥ ಕುಡುಕರಿಂದ ನೀನು ಮಾಜಿ ಶಾಸಕರ ಪೆನ್ಷನ್ ತೆಗೆದುಕೊಳ್ತೀಯಣ್ಣ. ಸರ್ಕಾರ ಪ್ರಿಂಟ್ ಹಾಕಲ್ಲ, ಎಣ್ಣೆಯ ದುಡ್ಡೇ ಸರ್ಕಾರಕ್ಕೆ ಆದಾಯ ಎಂದು ತಿರುಗೇಟು ನೀಡಿದ್ದಾರೆ.

ವಿರೋಧ ಪಕ್ಷದ‌ ನಾಯಕ ನಮ್ಮ ಆರ್.ಅಶೋಕಣ್ಣ, ಸುರೇಶ್ ಕುಮಾರ್ ಸರ್ ಬಹಳ ಹಿರಿಯರು. ನಿನ್ನೆ ಮೊನ್ನೆ ನನ್ನ ಹೇಳಿಕೆ ಬಗ್ಗೆ ಅನೇಕರು ಕಾಮೆಂಟ್ ಮಾಡಿದ್ದಾರೆ. ನಾನು ಜನರಲ್ ಕ್ಷೇತ್ರದಲ್ಲಿ ಗೆದ್ದು 38 ವರ್ಷಕ್ಕೆ ಮಂತ್ರಿ ಆಗಿದ್ದೆ. ಪಿ.ರಾಜೀವಣ್ಣ ನಿನ್ನಂತೆ ರಿಸರ್ವ್ ಕ್ಷೇತ್ರದಲ್ಲಿ ಗೆದ್ದಿಲ್ಲ ನಾನು. 35 ವರ್ಷಕ್ಕೆ ನಾನು ಸಾಯಬೇಕಿತ್ತು. ಕೊಲೆ ಆಗಬೇಕಿತ್ತು ಇಲ್ಲ ಅಂದ್ರೆ ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು. ಆದರೂ ನಾನು ಈಗ 55 ವರ್ಷ ಬದುಕಿದ್ದೇ ಗ್ರೇಟ್ ಎಂದು ಟೀಕಿಸಿರುವ ಮಾಜಿ ಶಾಸಕರ ಆಡಿಯೋ ಎಲ್ಲೆಡೆ ವೈರಲ್‌ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+