Bar: ಕರ್ನಾಟಕದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಬಾರ್: ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ಹೇಳಿದ್ದೇನು ?, ಕನ್ನಡಿಗರ ವಿರೋಧವೇಕೆ
Bar: ಕರ್ನಾಟಕದಲ್ಲಿ ಕಳೆದ ಒಂದು ವರ್ಷದಿಂದಲೂ ಮದ್ಯ ಮಾರಾಟದಲ್ಲಿ ಭಾರೀ ಕುಸಿತ ಕಂಡು ಬಂದಿದೆ. ಅಲ್ಲದೇ ಬಿಯರ್ ಹಾಗೂ ವಿವಿಧ ಪ್ರಮುಖ ಮದ್ಯಗಳ ಮಾರಾಟದಲ್ಲಿ ಭಾರೀ ಇಳಿಕೆ ಕಂಡುಬಂದಿದ್ದು. ಮದ್ಯ ಮಾರಾಟದಿಂದ ಭಾರೀ ಆದಾಯದ ನಿರೀಕ್ಷೆಯಲ್ಲಿದ್ದ ರಾಜ್ಯ ಅಬಕಾರಿ ಇಲಾಖೆಗೆ ಶಾಕ್ ಎದುರಾಗಿದೆ. ಈ ನಡುವೆ ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ಅವರು ಮಹತ್ವದ ಚರ್ಚೆಗೆ ಕಾರಣರಾಗಿದ್ದಾರೆ. ಅದೇ ಜನಸಂಖ್ಯೆಗೆ ಅನುಗುಣವಾಗಿ ಬಾರ್ ಇಲ್ಲ ಎನ್ನುವುದು ಅದು ಏನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಮದ್ಯ ಮಾರಾಟ ಕುಸಿತ ಕಂಡಿರುವ ಬೆನ್ನಲ್ಲೇ ಮದ್ಯ ಪ್ರಿಯರಿಗೆ ಸುಲಭವಾಗಿ ಮದ್ಯ ಸಿಗುವಂತೆ ಮಾಡುವ ಮಾಸ್ಟರ್ ಪ್ಲ್ಯಾನ್‌ವೊಂದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರವು ಕೈ ಹಾಕಿದೆ. ಆದರೆ ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ಪ್ರಾರಂಭದಲ್ಲೇ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ರಾಜ್ಯದಲ್ಲಿ ಮದ್ಯ ಮಾರಾಟ ಕುಸಿತ ಕಂಡಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು ಮದ್ಯ ಪ್ರಿಯರಿಗೆ ಗುಡ್‌ನ್ಯೂಸ್ ಕೊಡುವುದಕ್ಕೆ ಮುಂದಾಗಿದೆ. ಆದರೆ ಇದು ಮದ್ಯದ ಬೆಲೆ ಇಳಿಕೆಯ ಗುಡ್‌ನ್ಯೂಸ್ ಅಲ್ಲ ಮತ್ತೀನ್ನೇನು ಎನ್ನುವುದನ್ನು ನೋಡೋಣ.

ವಿವಿಧ ಮದ್ಯಗಳ ಬೆಲೆ ಹಾಗೂ ಬಿಯರ್ ಬೆಲೆ ನಿರಂತರವಾಗಿ ಏರಿಕೆ ಕಂಡ ಮೇಲೆ ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದಲೂ ಅಬಕಾರಿ ಇಲಾಖೆಗೆ ಭಾರೀ ಪೆಟ್ಟು ಬಿದ್ದಂತಾಗಿದೆ. ಇದೀಗ ಕರ್ನಾಟಕ ಅಬಕಾರಿ ಇಲಾಖೆಯು ಮತ್ತೊಂದು ಹೊಸ ಪ್ರಸ್ತಾವನೆಯನ್ನು ಮಂಡಿಸಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮದ್ಯ (ಬಾರ್)ದಂಗಡಿಗಳಿಗೆ ಪರವಾನಗಿ ವಿಷಯದ ಚರ್ಚೆ ನಡೆದಿದೆ ಎಂದು ಅಬಕಾರಿ ಖಾತೆ ಸಚಿವ ಆರ್. ಬಿ ತಿಮ್ಮಾಪುರ ಅವರು ಹೇಳಿದ್ದಾರೆ. ಇದಕ್ಕೆ ಪರ - ವಿರೋಧ ವ್ಯಕ್ತವಾಗಿದೆ. ಹಲವರು ಈ ಪ್ರಸ್ತಾವನೆಯ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಜನಸಂಖ್ಯೆ ಹೆಚ್ಚಾಗಿದ್ದು, ಮದ್ಯದಂಗಡಿಗಳ ಸಂಖ್ಯೆ ಕಡಿಮೆಯಾಗಿದೆ. ಗ್ರಾಮೀಣ ಜನರು ನಗರಕ್ಕೆ ಬಂದು 10 ರೂಪಾಯಿಗೆ ಸಿಗುವ ಮದ್ಯವನ್ನು 15 ರೂಪಾಯಿಗೆ ತೆಗೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಗ್ರಾಮಗಳಲ್ಲಿ ಸಣ್ಣಪುಟ್ಟ ಅಂಗಡಿಗಳಲ್ಲಿ ಮದ್ಯ ಮಾರಾಟ ನಡೆಯುತ್ತಿದೆ. ಇದನ್ನು ತಪ್ಪಿಸಬೇಕಾಗಿದೆ. ಹಣ ಸಂಗ್ರಹಕ್ಕೆ ಅಥವಾ ಆದಾಯ ಹೆಚ್ಚಳ ಮಾಡಿಕೊಳ್ಳುವುದಕ್ಕೆ ನಾವು ಈ ಯೋಜನೆಯನ್ನು ರೂಪಿಸಿಲ್ಲ ಎಂದು ಅವರು ಹೇಳಿದ್ದಾರೆ.
ಇನ್ನು ಅಬಕಾರಿ ಇಲಾಖೆಯ ಈ ಪ್ರಸ್ತಾವನೆಗೆ ಕನ್ನಡಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (KRS Party) ಸಹ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು. ಹೌದು, ಜನಸಂಖ್ಯೆಗೆ ತಕ್ಕಂತೆ ಉದ್ಯೋಗಗಳು, ಸರ್ಕಾರಿ ಶಾಲೆಗಳು, ಸರ್ಕಾರಿ ಆಸ್ಪತ್ರೆಗಳೂ ಇಲ್ಲ. ಅಕ್ರಮ, ಅಪರಾಧಗಳನ್ನು ತಡೆಯಲು ಜನಸಂಖ್ಯೆಗೆ ತಕ್ಕಷ್ಟು ಪೊಲೀಸರೂ ಇಲ್ಲ, ನ್ಯಾಯಾಲಯಗಳೂ ಇಲ್ಲ.
ಆದರೆ, ಎಲ್ಲಕ್ಕಿಂತ ತುರ್ತು ಮನೆಬಾಗಿಲಿಗೆ ಹೆಂಡ ಒದಗಿಸುವುದು. ಇದು ಕಾಂಗ್ರೆಸ್ ಸರ್ಕಾರ ಒದಗಿಸಿರುವ ತುರ್ತು ಗ್ಯಾರಂಟಿ ಭಾಗ್ಯ. ಎಲ್ಲಾ ಗ್ಯಾರಂಟಿಗಳನ್ನು ನಿವಾಳಿಸಿ ತಿಪ್ಪೆಗೆ ಎಸೆಯುವ ಭಾಗ್ಯ. #ಮದ್ಯಭಾಗ್ಯ #ಮಹಾಭಾಗ್ಯ ಈ ಜೆಸಿಬಿ ಪಕ್ಷಗಳು ಜಾತಿ ಧರ್ಮದ ಕೋಮುವಾದ ರಾಜಕೀಯ ಮಾಡಿ, ಜನಕ್ಕೆ ಹಣ ಹೆಂಡ ಹಂಚಿ ಜನಕ್ಕೆ ಮತ್ತಿನಲ್ಲಿ ಇಟ್ಟು, ತಾವು ಅಧಿಕಾರಕ್ಕೆ ಬರುವುದು.. ಇಂತಹ ಬಹುತೇಕ ಸ್ವಾರ್ಥ ದರಿದ್ರ ಮನಸ್ಥಿತಿ ಉಳ್ಳವರು, ಇವರ ಬೆಂಬಲಿಗರಿಂದ ಮುಂದೆ ಕನ್ನಡ ಕನ್ನಡಿಗ ಕರ್ನಾಟಕದ ಅಭಿವೃದ್ಧಿಯ ಸಾಧ್ಯವೇ ಎಂದು ಪ್ರಶ್ನೆ ಮಾಡಿದೆ.












Click it and Unblock the Notifications