Ganeshotsava: ಮಸೀದಿ ಮುಂದೆ ಗಣೇಶ ಮೆರವಣಿಗೆ, ಪಟಾಕಿಗೆ ನಿರ್ಬಂಧ ಆರೋಪ; ಹಿಂದೂ ಸಂಘಟನೆ, ಬಿಜೆಪಿ ಆಕ್ರೋಶ
Ganeshotsava: ಮಸೀದಿ ಮುಂದೆ ಗಣೇಶ ಮೆರವಣಿಗೆ, ಪಟಾಕಿಗೆ ನಿರ್ಬಂಧ ಆರೋಪ ಕೇಳಿ ಬಂದಿದ್ದು, ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ಈ ವಿಷಯಕ್ಕೆ ಸಂಬಂಧಿಸಿದಂಗೆ ಆಕ್ರೋಶ ವ್ಯಕ್ತಪಡಿಸಿವೆ.
ಕರ್ನಾಟಕದಲ್ಲಿ ಇರುವುದು ಸಂವಿಧಾನದ ಆಡಳಿತವೋ ಅಥವಾ ಶರಿಯಾ ಕಾನೂನೋ, ಕರ್ನಾಟಕದಲ್ಲಿ ಇರುವುದು ಪ್ರಜಾಪ್ರಭುತ್ವವೋ ಅಥವಾ ತಾಲಿಬಾನಿ ಹುಕುಮ್ಮತ್ತೋ. ಗಣೇಶೋತ್ಸವ ಮೆರವಣಿಗೆ ಮಸೀದಿ ಮುಂದೆ ಹೋಗಬಾರದಂತೆ. ಗಣೇಶೋತ್ಸವ ಮೆರವಣಿಗೆಯಲ್ಲಿ ಮಸೀದಿ ಮುಂದೆ ಪಟಾಕಿ ಹೊಡೆಯಬಾರದಂತೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇನಾ 'ಎಲೆಕ್ಷನ್ ಹಿಂದೂ' ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸರ್ಕಾರದ ನಿಜವಾದ ಭಕ್ತಿ, ಹಿಂದೂಗಳ ಪವಿತ್ರ ಹಬ್ಬ ಗಣೇಶೋತ್ಸವದ ಆಚರಣೆಗೆ ಇಲ್ಲಸಲ್ಲದ ನಿರ್ಬಂಧ ಹೇರಿ, ಭಕ್ತಾದಿಗಳಿಗೆ ಬೆದರಿಕೆ ಹಾಕುವ ಮಟ್ಟಕ್ಕೆ ಪೊಲೀಸರು ಇಳಿದಿರುವುದು ಈ ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ, ಓಲೈಕೆ ರಾಜಕಾರಣ ಯಾವ ಪರಾಕಾಷ್ಠೆಗೆ ತಲುಪಿದೆ ಎನ್ನುವುದಕ್ಕೆ ಮತ್ತೊಂದು ನಿದರ್ಶವಾಗಿದೆ. ಕಳೆದ ವರ್ಷ ಸ್ವತಃ ಗಣಪತಿಯ ವಿಗ್ರಹವನ್ನೇ ಪೊಲೀಸ್ ವ್ಯಾನ್‌ಗೆ ಹತ್ತಿಸಿ ಅವಮಾನಿಸಿದ ಈ ಹಿಂದೂ ವಿರೋಧಿ ಕರ್ನಾಟಕ ಕಾಂಗ್ರೆಸ್ ಸರ್ಕಾರ, ಈ ಬಾರಿ ಗಣೇಶನನ್ನು ಕೂರಿಸುವ ಮುನ್ನವೇ ಹಿಂದೂ ಸಮಾಜದ ಧಾರ್ಮಿಕ ಹಕ್ಕುಗಳನ್ನು ಕಸಿದುಕೊಳ್ಳಲು ಹೊರಟಿದೆ.
ಬ್ರಿಟಿಷರ ಆಡಳಿತದ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಲೋಕಮಾನ್ಯ ತಿಲಕರಿಂದ ಆರಂಭಗೊಂಡ ಸಾರ್ವಜನಿಕ ಸಾಮೂಹಿಕ ಗಣೇಶೋತ್ಸವ ಇಂದಿಗೂ ದೇಶಾದ್ಯಂತ ಕೋಟ್ಯಂತರ ಭಾರತೀಯರ ಸಾಂಸ್ಕೃತಿಕ ಜೀವನದ ಅವಿಭಾಜ್ಯ ಅಂಗವಾಗಿದೆ. ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೇ, ಹಿಂದೂಗಳ ಧಾರ್ಮಿಕ ಭಾವನೆಗಳ ಮೇಲೆ ಸವಾರಿ ಮಾಡುವ ದುಸ್ಸಾಹಸಕ್ಕೆ ಕೈಹಾಕಬೇಡಿ. ಹಿಂದೂಗಳ ಆಚರಣೆ ಮತ್ತು ಭಕ್ತಿಗೆ ಅಡ್ಡಿಪಡಿಸಿದ ಯಾವ ಸರ್ಕಾರವೂ ಉಳಿದಿಲ್ಲ. ಹಿಂದೂಗಳ ಭಾವನೆಗಳ ಜೊತೆ ಚೆಲ್ಲಾಟವಾಡಿದರೆ, ಈ ಕಾಂಗ್ರೆಸ್ ಸರ್ಕಾರ ಧೂಳಿಪಟವಾಗುವುದು ನಿಶ್ಚಿತ!
ತಕ್ಷಣವೇ ಈ ಹಿಂದೂ ವಿರೋಧಿ ನಿರ್ಬಂಧಗಳನ್ನು ಹಿಂಪಡೆಯಿರಿ. ಹಿಂದೂಗಳು ನೆಮ್ಮದಿಯಿಂದ, ಗಣೇಶೋತ್ಸವ ಆಚರಿಸಲು ಬಿಡಿ. ಇಲ್ಲವಾದಲ್ಲಿ ನಿಮ್ಮ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಡುವುದು ಅನಿವಾರ್ಯವಾಗುತ್ತದೆ ಎಂದೂ ಆರ್. ಅಶೋಕ್ ಅವರು ಹೇಳಿದ್ದಾರೆ.
Ganeshotsava: ಏನಿದು ಪ್ರಕರಣ ?
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಬೇಕು ಎಂದು ಹಠ ಮಾಡಬೇಡಿ, ಮಸೀದಿ ಮುಂದೆಯೇ ಹೋಗಿ ಪಟಾಕಿ ಸಿಡಿಸುವುದು ಬೇಡ. ನಿಮ್ಮ ಸಂಭ್ರಮವನ್ನು ಅನ್ಯ ಧರ್ಮೀಯರು ನೋಡಿದರೆ ಹೌದು ಹೇಗೆ ಸಂತೋಷದಿಂದ ಆಚರಣೆ ಮಾಡುತ್ತಿದ್ದಾರೆ ಎಂದುಕೊಳ್ಳಬೇಕು. ಇದನ್ನು ಬಿಟ್ಟು ಮಸೀದಿ ಮುಂದೆ ಉದ್ದೇಶಪೂರ್ವಕವಾಗಿ ಪಟಾಕಿ ಸಿಡಿಸಿದರೆ, ಗ್ರಹಚಾರ ಬಿಡಿಸ್ತೇನೆ ಎಂಬ ಮೈಸೂರು ಜಿಲ್ಲೆ ಟಿ. ನರಸೀಪುರ ಇನ್ಸ್ಪೆಕ್ಟರ್ ಧನಂಜಯ್ ಅವರು ಹೇಳಿದ್ದಾರೆ ಎನ್ನಲಾದ ಮಾತು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ, ಅಲ್ಲದೆ ಈ ವಿಚಾರವು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ನಡೆದ ಶಾಂತಿ ಸಭೆಯಲ್ಲಿ ಮೈಸೂರು ಜಿಲ್ಲೆ ಟಿ. ನರಸೀಪುರ ಇನ್ಸ್ಪೆಕ್ಟರ್ ಧನಂಜಯ್ ಅವರು ಮಾತನಾಡಿದ್ದರು. ಮಸೀದಿ ಮುಂದೆ ಮೆರವಣಿಗೆ ಹೋಗುವಂತಿಲ್ಲ. ಅಕಸ್ಮಾತ್ ಹೋದರೆ ಹೇಳಲ್ಲ ಮಾಡಿ ತೋರಿಸ್ತೀನಿ ಎಂದು ಹೇಳಿದ್ದರು ಎನ್ನಲಾಗಿದ್ದು, ಇದಕ್ಕೆ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.


Click it and Unblock the Notifications
