ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗದಗ ಭೀಷ್ಮಕೆರೆ: ಬೋಟಿಂಗ್ ಸೌಲಭ್ಯ ಇನ್ಮುಂದೆ ಲಭ್ಯ

By Mahesh
|
Google Oneindia Kannada News

ಗದಗ, ಸೆ. 28: ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಗದಗಿನ ಭೀಷ್ಮ ಕರೆಯನ್ನು ಪ್ರವಾಸಿ ತಾಣವನ್ನಾಗಿ ನಿರ್ಮಿಸುವ ಯೋಜನೆಗೆ ಚಾಲನೆ ದೊರಕಿದೆ. ಮೊದಲ ಹಂತವಾಗಿ ಬೋಟಿಂಗ್ ಸೌಲಭ್ಯಕ್ಕೆ ಗದಗ ಜಿಲ್ಲಾ ಉಸ್ತುವಾರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ಅವರು ಚಾಲನೆ ನೀಡಿದರು.

ಸುಮಾರು 8.5ಲಕ್ಷ ಅನುದಾನದಲ್ಲಿ ಖರೀದಿಸಲಾದ ದೋಣಿಗಳನ್ನು ಗದಗ ಜಿಲ್ಲಾ ಉಸ್ತುವಾರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ಅವರು ಪ್ರಾಯೋಗಿಕ ಸಂಚಾರ ಮಾಡಿ ಪರಿಶೀಲಿಸಿದರು.

ಗದಗ ನಗರದ ಹೃದಯ ಭಾಗದಲ್ಲಿರುವ ಭೀಷ್ಮ ಕೆರೆಗೆ ತುಂಗಭದ್ರಾ ನೀರು ಹರಿಸಿ, ತುಂಬಿಸಲಾಗಿದೆ. ಕೆರೆಯಲ್ಲಿ ಪ್ರಾಯೋಗಿಕ ಬೋಟಿಂಗ್‌ ಸೌಲಭ್ಯ ಒದಗಿಸಲಾಗಿದೆ. ಸ್ಥಳೀಯರು, ಪ್ರವಾಸಿಗರ ಅಭಿಪ್ರಾಯ ಸಂಗ್ರಹಿಸಿ ಇನ್ನಷ್ಟು ಅಭಿವೃದ್ಧಿ ಕಾರ್ಯ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.

ಭೀಷ್ಮ ಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ 8.5 ಲಕ್ಷ ರು ಅನುದಾನದಲ್ಲಿ ಎಂಟು ವಿವಿಧ ಪ್ರಕಾರದ ಬೋಟುಗಳನ್ನು ಖರೀದಿಸಲಾಗಿದೆ.

ಜಿಲ್ಲಾಧಿಕಾರಿ ಎನ್‌.ಎಸ್‌. ಪ್ರಸನ್ನಕುಮಾರ್ ಉಪಸ್ಥಿತಿ

ಜಿಲ್ಲಾಧಿಕಾರಿ ಎನ್‌.ಎಸ್‌. ಪ್ರಸನ್ನಕುಮಾರ್ ಉಪಸ್ಥಿತಿ

ಬೋಟಿಂಗ್ ಸೌಲಭ್ಯಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎನ್‌.ಎಸ್‌. ಪ್ರಸನ್ನಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಸಂತೋಷಬಾಬು ಅವರು ಉಪಸ್ಥಿತರಿದ್ದರು. ಸಚಿವರ ಜತೆಗೆ ಬೋಟಿಂಗ್‌ ಸವಾರಿ ನಡೆಸಿದರು.

ಪುತ್ಥಳಿ ಹಿಂಭಾಗದ ಕೆರೆ ಪ್ರದೇಶದಲ್ಲೂ ಹೂಳು ತೆಗೆದು ಕೆರೆಯ ಸೌಂದರ್ಯವರ್ಧನೆಗೆ ಯೋಜನೆ ರೂಪಿಸಲಾಗಿದೆ ಎಂದರು. ಶಾಸಕ ರಾಮಕೃಷ್ಣ ದೊಡಮನಿ, ನಗರ ಸಭೆ ಅಧ್ಯಕ್ಷ ಪೀರಸಾಬ ಕೌತಾಳ, ಶ್ರೀನಿವಾಸ ಹುಯಿಲಗೋಳ ಇದ್ದರು.
ಪ್ರಾಯೋಗಿಕವಾಗಿ ಚಾಲನೆ ಪಡೆದ ಬೋಟ್ ಗಳು

ಪ್ರಾಯೋಗಿಕವಾಗಿ ಚಾಲನೆ ಪಡೆದ ಬೋಟ್ ಗಳು

ಒಂದು ಫ್ರೀಡಂ ಮೋಟರ್‌ ಬೋಟ್‌, ರಾ ಬೋಟ್‌, ಎರಡು ಫ್ಯಾಮಿಲಿ ಕ್ಯಾನೊವ್, ಸಿ ಕ್ಯಾನೊವ ಬೋಟುಗಳನ್ನು ಭೀಷ್ಮ ಕೆರೆಯಲ್ಲಿ ಪ್ರಾಯೋಗಿಕವಾಗಿ ಚಾಲನೆ ಮಾಡಿ ನೋಡಲಾಯಿತು.

ಶೀಘ್ರದಲ್ಲೇ ಇವು ಸಾರ್ವಜನಿಕ ಬಳಕೆಗೂ ಲಭ್ಯ

ಶೀಘ್ರದಲ್ಲೇ ಇವು ಸಾರ್ವಜನಿಕ ಬಳಕೆಗೂ ಲಭ್ಯ

ಶೀಘ್ರದಲ್ಲೇ ಇವು ಸಾರ್ವಜನಿಕ ಬಳಕೆಗೂ ಲಭ್ಯವಾಗಲಿವೆ. ಕೆರೆಯಂಗಳದಲ್ಲಿರುವ ಬಸವೇಶ್ವರ ಪುತ್ಥಳಿಯ ಆಕರ್ಷಣೆಯ ಜೊತೆಗೆ ಈ ಸ್ಥಳವನ್ನು ಆಕರ್ಷಣೀಯ ಪ್ರವಾಸಿ ತಾಣವಾಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.

ಐತಿಹಾಸಿಕ ಭೀಷ್ಮ ಕೆರೆಯಲ್ಲಿ ಬೋಟಿಂಗ್

ಐತಿಹಾಸಿಕ ಭೀಷ್ಮ ಕೆರೆಯಲ್ಲಿ ಬಸವಣ್ಣ ಅವರ ಪುತ್ಠಳಿ ಇದೆ. ನಗರದ ಪ್ರಮುಖ ಆಕರ್ಷಕ ಕೇಂದ್ರವಾದ ಈ ಕೆರೆಯಲ್ಲಿ ಈಗ ಬೋಟಿಂಗ್ ಸೌಲಭ್ಯ ಸಿಗಲಿದೆ. ಮಾಹಿತಿ ಹಾಗೂ ಚಿತ್ರ/ ವಿಡಿಯೋ ಕೃಪೆ: ವಾರ್ತಾಸೌಧ, ಬೆಂಗಳೂರು

English summary
Gadag : Bhishma Lake gets Boating Facility. Minister HK Patil inaugurated the new facility by riding a boat. The 41.7 ha Lake Bhishma is the only water body in the Gadag-Betageri town
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X