ರಮ್ಯಾ ನಂಬರ್‌ಗೆ ಮಿಸ್ ಕಾಲ್ ಕೊಡಿ, ಸಮಸ್ಯೆ ಹೇಳಿ

Posted By:
Subscribe to Oneindia Kannada

ಮಂಡ್ಯ, ಫೆಬ್ರವರಿ 12 : 'ನಾನು ದಿಢೀರ್ ಎಂದು ರಾಜಕಾರಣಕ್ಕೆ ಬಂದೆ. ಮೊದಲು ನನಗೆ ಅಷ್ಟು ತಿಳಿಯುತ್ತಿರಲಿಲ್ಲ. ಈಗ ಎಲ್ಲವನ್ನೂ ಅರ್ಥ ಮಾಡಿಕೊಂಡಿದ್ದೇನೆ. ಮಂಡ್ಯದಲ್ಲಿ ಈಗಾಗಲೇ ಕಚೇರಿ ನೋಡಿದ್ದೇನೆ, ಈಗ ಪೈಟಿಂಗ್ ಕೆಲಸ ನಡೆಯುತ್ತಿದೆ. ಚುನಾವಣೆಗಳ ನಂತರ ಕಚೇರಿ ಉದ್ಘಾಟನೆಯಾಗಲಿದೆ' ಎಂದು ಮಾಜಿ ಸಂಸದೆ ರಮ್ಯಾ ಹೇಳಿದರು.

ಶುಕ್ರವಾರ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ ಬಳಿಕ ಮಾತನಾಡಿದ ರಮ್ಯಾ ಅವರು, 'ಎಲ್ಲರು ನನ್ನ ನಂಬರ್ 9029001144 ಸೇವ್‌ ಮಾಡಿಕೊಳ್ಳಿ. ಜೊತೆಗೆ ಮಿಸ್ ಕಾಲ್ ಕೊಡಿ ಆ ನಂಬರ್‌ನಿಂದ ನಿಮಗೆ ಸಂದೇಶ ಬರುತ್ತದೆ' ಎಂದು ಹೇಳಿದರು. [ಮಂಡ್ಯದಲ್ಲಿ ಅಂಬರೀಶ್ ಮಾತಿಗೆ ಸೊಪ್ಪು ಹಾಕದ ಆಪ್ತ!]

ramya

ಸಂದೇಶ ಬರಲಿದೆ : ಈ ನಂಬರ್‌ಗೆ ಜನರು ಕರೆ ಮಾಡಿದರೆ, 'ಕರೆ ಮಾಡಿದ್ದಕ್ಕೆ ಧನ್ಯವಾದಗಳು. ನಾನು ನಿಮ್ಮ ಜೊತೆ ನಿರಂತರ ಸಂಪರ್ಕದಲ್ಲಿರುತ್ತೇನೆ. ನಿಮ್ಮ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಕರೆ ಮಾಡುತ್ತೇವೆ' ಎಂಬ ಸಂದೇಶ ನಿಮ್ಮ ಮೊಬೈಲ್‌ಗೆ ಬರುತ್ತದೆ. [8 ಎಕರೆ ಕಬ್ಬಿನ ಗದ್ದೆಗೆ ಬೆಂಕಿ, ರೈತನಿಗೆ ಸಂಕಷ್ಟ]

ಮಂಡ್ಯದಲ್ಲೇ ಇರುವೆ : ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಮುಗಿಯುವ ತನಕ ಮಂಡ್ಯದಲ್ಲಿಯೇ ಇದ್ದು, ಎಲ್ಲಾ ತಾಲೂಕುಗಳಲ್ಲಿ ಸಂಚಾರ ನಡೆಸಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತೇನೆ' ಎಂದರು. [ರಮ್ಯಾ ಸೋಲಿಗೆ ಯಾರು ಕಾರಣ ಗೊತ್ತೆ?]

phone

'ಮಂಡ್ಯ ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಮತವಿಲ್ಲ. ಪ್ರತಿಷ್ಠೆ ಮತ್ತು ಸಂಪರ್ಕದ ತೊಂದರೆ ಇದೆ. ಈಗ ಎಲ್ಲವೂ ಬಗೆಹರಿದಿದೆ' ಎಂದು ರಮ್ಯಾ ಹೇಳಿದರು. 'ಬೇರೆ ಪಕ್ಷಗಳು ಜಾತಿ ರಾಜಕೀಯ ಮಾಡುತ್ತವೆ. ಆದರೆ ಕಾಂಗ್ರೆಸ್‍ನಲ್ಲಿ ಆ ರೀತಿ ಮಾಡುವುದಿಲ್ಲ' ಎಂದು ಅವರು ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mandya former MP Ramya launched a helpline for residents of the constituency to register complaints.
Please Wait while comments are loading...