ಕಾರವಾರದಲ್ಲಿ ಜಲಪಾತಕ್ಕೆ ಇಳಿದ ಐವರು ನೀರುಪಾಲು
ಕಾರವಾರ, ಸೆಪ್ಟೆಂಬರ್ 17: ಇಲ್ಲಿನ ಚೆಂಡಿಯಾ ನಾಗರಮಡಿ ಫಾಲ್ಸ್ ನಲ್ಲಿ ಪ್ರವಾಸಕ್ಕೆ ಬಂದಿದ್ದ ಐವರು ಸ್ನಾನಕ್ಕಿಳಿದು ನೀರು ಪಾಲಾಗಿದ್ದಾರೆ. ಸಾವಿಗೀಡಾದವರು ಗೋವಾ ರಾಜ್ಯದ ಮಡಗಾಂವ್ ರಾಯ್ ಗ್ರಾಮದವರಾಗಿದ್ದಾರೆ.
ಐವರ ತಂಡದಲ್ಲಿ ನಾಲ್ವರು ಮಹಿಳೆಯರು ಹಾಗೂ ಓರ್ವ ಪುರುಷ ಇದ್ದರು ಎನ್ನಲಾಗಿದೆ. ನೀರು ಪಾಲಾದವರಲ್ಲಿ ಓರ್ವ ಮಹಿಳೆಯ ಮೃತ ದೇಹ ಮಾತ್ರ ಪತ್ತೆಯಾಗಿದ್ದು, ನಾಲ್ವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications