ಕೃತಕ ಪನ್ನೀರ್ ತಯಾರಿಸಿದ್ರೆ ಹುಷಾರ್‌: ಸಿಕ್ಕಿಬಿದ್ರೆ ಕಠಿಣ ಕ್ರಮ, ಸರ್ಕಾರದ ಖಡಕ್‌ ಎಚ್ಚರಿಕೆ!

ಬೆಂಗಳೂರು: ರಾಜ್ಯದಲ್ಲಿ ಕೃತಕ ಪನ್ನೀರ್ (Analogue Paneer) ಮಾರಾಟ ಹಾಗೂ ಬಳಕೆಗೆ ಕಡಿವಾಣ ಹಾಕಲು ಕರ್ನಾಟಕ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಕೃತಕ ಪನೀರ್ ಸೇರಿದಂತೆ ಗುಣಮಟ್ಟವಿಲ್ಲದ ಆಹಾರ ಉತ್ಪನ್ನಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಸಚಿವರಾದ ಯು.ಟಿ. ಖಾದರ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಪನ್ನೀರ್ ಸೇರಿದಂತೆ ಯಾವುದೇ ಆಹಾರ ಪದಾರ್ಥಗಳ ಕೃತಕ ಉತ್ಪಾದನೆ ಮತ್ತು ಮಾರಾಟಕ್ಕೆ ಈಗಾಗಲೇ ನಮ್ಮ ಕಾನೂನಿನಲ್ಲಿ ನಿಷೇಧವಿದೆ. ಯಾವುದೇ ಕಂಪನಿಗಳು ಕಾನೂನು ಉಲ್ಲಂಘಿಸಿದರೆ ನಿರ್ದಾಕ್ಷಿಣ್ಯವಾಗಿ‌ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದ‌ರ್ ಎಚ್ಚರಿಸಿದರು.

Fake Paneer Sellers Beware Karnataka Government Orders Strict Action Against Analogue Paneer

ಚೀಸ್, ಪನ್ನೀರ್, ಬೆಣ್ಣೆ ಮಾತ್ರವಲ್ಲ ಯಾವುದೇ ಆಹಾರ ಪದಾರ್ಥಗಳನ್ನು ಕೃತಕವಾಗಿ ಉತ್ಪಾದಿಸಲು, ಮಾರಾಟ ಮಾಡಲು ರಾಜ್ಯದ ಕಾಯ್ದೆ, ಕಾನೂನಿನಲ್ಲಿ ಅವಕಾಶವಿಲ್ಲ. ಆರೋಗ್ಯಕ್ಕೆ ಹಾನಿಕಾರಕ ಪದಾರ್ಥಗಳನ್ನು ಆಹಾರ ತಯಾರಿಕೆಯಲ್ಲಿ ಬಳಸಲು ನಿಷೇಧ ಹೇರಲಾಗಿದೆ. ಅಂತಹ ಯಾವುದೇ ಆಹಾರ ಪದಾರ್ಥಗಳನ್ನು ಕೃತಕವಾಗಿ ಉತ್ಪಾದಿಸಿ ಮಾರಾಟ ಮಾಡುತ್ತಿವುದು ಕಂಡುಬಂದರೆ ಅಂತಹ ಕಂಪನಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಈ ಸಂಬಂಧ ಮತ್ತೊಂದು ವಿಶೇಷ ಆದೇಶವನ್ನೂ ಶೀಘ್ರ ಹೊರಡಿಸಲಾಗುವುದು ಎಂದು ಹೇಳಿದರು.

ನಮಗೆ ಪ್ರತಿಯೊಬ್ಬ ಮನುಷ್ಯನ ಆರೋಗ್ಯ ಮುಖ್ಯ. ಸ್ಟಾರ್ ಹೋಟೆಲ್, ಸಾಮಾನ್ಯ ಹೋಟೆಲ್ ಅಥವಾ ಇಂದಿರಾ ಕ್ಯಾಂಟೀನ್‌ ಇರಲಿ ಎಲ್ಲಾ ಕಡೆ ಉತ್ತಮ ಆರೋಗ್ಯಕರ ಹಾಗೂ ಗುಣಮಟ್ಟದ ಆಹಾರವನ್ನೇ ಜನರಿಗೆ ನೀಡಬೇಕು. ಹಾಗಾಗಿಯೇ ಎಲ್ಲ ಕಡೆಯೂ ದಾಳಿ ಮಾಡಿ ಪರಿಶೀಲನೆ ಮಾಡಲಾಗುತ್ತಿದೆ ಎಂದರು.

ಸಾಂಪ್ರದಾಯಿಕ ಪನ್ನೀರ್ ಅನ್ನು ಶುದ್ಧ ಹಾಲಿನಿಂದಲೇ ತಯಾರಿಸಬೇಕು. ಆದರೆ ಕೆಲವರು ಪನೀರ್‌ಗೆ ಪರ್ಯಾಯವಾಗಿ ಪಾಮ್ ಆಯಿಲ್, ವೆಜಿಟೆಬಲ್ ಆಯಿಲ್, ತರಕಾರಿ ಕೊಬ್ಬು, ಹಾಲಿನ ಘನವಸ್ತುಗಳು ಹಾಗೂ ವಿವಿಧ ಎಮಲ್ಸಿಫೈಯರ್‌ಗಳು ಮತ್ತು ಸ್ಟೆಬಿಲೈಸರ್‌ಗಳನ್ನು ಬಳಸಿ ಉತ್ಪನ್ನ ತಯಾರಿಸುತ್ತಿದ್ದಾರೆ. ಇಂತಹ ಉತ್ಪನ್ನಗಳನ್ನು ಪನೀರ್‌ ಹೆಸರಿನಲ್ಲಿ ಮಾರಾಟ ಮಾಡುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

ರಾಜ್ಯದ ಯಾವುದೇ ಭಾಗದಲ್ಲಿ ಕೃತಕ ಪನೀರ್ ಪತ್ತೆಯಾದರೂತಕ್ಷಣ ಕ್ರಮ ಕೈಗೊಳ್ಳುವಂತೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವರಾದ ಯು.ಟಿ. ಖಾದರ್ ಹೇಳಿದ್ದಾರೆ. ರಾಜ್ಯದಲ್ಲಿ ಇಂತಹ ಉತ್ಪನ್ನಗಳ ಪರಿಸ್ಥಿತಿ ಕುರಿತು ಅಧಿಕಾರಿಗಳಿಂದ ವರದಿ ಹಾಗೂ ಮಾಹಿತಿ ಪಡೆಯಲಾಗಿದ್ದು, ಕೃತಕ ಪನೀರ್ ವಿರುದ್ಧದ ತಪಾಸಣೆ ಮತ್ತು ಕ್ರಮವನ್ನು ಚುರುಕುಗೊಳಿಸಲು ಸೂಚನೆ ನೀಡಲಾಗಿದೆ.

ಇಂತಹ ಉತ್ಪನ್ನಗಳ ವಿರುದ್ಧ Food Safety Act ಅಡಿಯಲ್ಲಿ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಕೃತಕ ಪನೀರ್ ಮೇಲಿನ ನಿಷೇಧ ಅಥವಾ ನಿರ್ಬಂಧವನ್ನು ಪ್ರಸ್ತುತ ಒಂದು ವರ್ಷದ ಅವಧಿಗೆ ಜಾರಿಗೊಳಿಸುವ ಕುರಿತು ಕ್ರಮ ಕೈಗೊಳ್ಳಲಾಗುತ್ತಿದ್ದು, ಅಗತ್ಯವಿದ್ದರೆ ಪ್ರತಿ ವರ್ಷವೂ ಪರಿಶೀಲಿಸಿ ಮುಂದುವರಿಸಲು ಆಹಾರ ಸುರಕ್ಷತಾ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಯು ಟಿ ಖಾದರ್ ತಿಳಿಸಿದ್ದಾರೆ.

ಕೃತಕ ಪನೀರ್‌ ತಯಾರಿಕಾ ಜಾಲದ ಮೇಲೂ ಕಣ್ಣು

ಇನ್ನೂ ರಾಜ್ಯ ಸರ್ಕಾರ ಈಗಾಗಲೇ ಕೃತಕ ಪನೀರ್‌ ತಯಾರಿಕಾ ಜಾಲದ ಮೇಲೂ ಕಣ್ಣಿಟ್ಟಿದ್ದು, ಕೃತಕ ಪನೀರ್ ತಯಾರಿಕೆ, ಪೂರೈಕೆ ಅಥವಾ ಮಾರಾಟದಲ್ಲಿ ದೊಡ್ಡಮಟ್ಟದ ಜಾಲ ಇರುವುದು ಪತ್ತೆಯಾದರೆ, ಅಂತಹ ಜಾಲವನ್ನು ಪತ್ತೆಹಚ್ಚಿ ಮಟ್ಟಹಾಕಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.

Analogue Paneer ಎಂದರೇನು?

ಸಾಮಾನ್ಯ ಪನೀರ್‌ ಶುದ್ಧ ಹಾಲಿನಿಂದ ತಯಾರಿಸುವ ಡೈರಿ ಉತ್ಪನ್ನವಾಗಿದೆ. ಆದರೆ Analogue Paneer ಅನ್ನು ಕಡಿಮೆ ವೆಚ್ಚದಲ್ಲಿ ತಯಾರಿಸಲು ವೆಜಿಟೆಬಲ್ ಫ್ಯಾಟ್ಸ್, ವೆಜಿಟೆಬಲ್ ಆಯಿಲ್ಸ್, ಮಿಲ್ಕ್ ಸಾಲಿಡ್ಸ್, ಎಮಲ್ಸಿಫೈಯರ್‌ಗಳು ಮತ್ತು ಸ್ಟೆಬಿಲೈಸರ್‌ಗಳಂತಹ ವಿವಿಧ ಪದಾರ್ಥಗಳನ್ನು ಬಳಸಬಹುದು.

ಇವುಗಳನ್ನು ಬಳಸಿ ಸಾಂಪ್ರದಾಯಿಕ ಪನೀರ್‌ನಂತೆಯೇ ಕಾಣುವ, ರುಚಿ ಮತ್ತು ವಿನ್ಯಾಸ ಹೊಂದಿರುವ ಉತ್ಪನ್ನವನ್ನು ತಯಾರಿಸಲಾಗುತ್ತದೆ. ಆದರೆ ಗ್ರಾಹಕರಿಗೆ ಇದು ಹಾಲಿನಿಂದ ತಯಾರಿಸಿದ ನೈಜ ಪನೀರ್ ಅಲ್ಲ ಎಂಬ ಮಾಹಿತಿಯನ್ನು ಸ್ಪಷ್ಟವಾಗಿ ನೀಡದೆ ಪನೀರ್ ಹೆಸರಿನಲ್ಲಿ ಮಾರಾಟ ಅಥವಾ ಬಡಿಸುವುದು ಪ್ರಮುಖ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕೃತಕ ಪನೀರ್‌ ಪತ್ತೆಹಚ್ಚಲು ತಪಾಸಣೆ ಹೆಚ್ಚಿಸುವುದು, ಗುಣಮಟ್ಟದ ಆಹಾರ ಉತ್ಪನ್ನಗಳ ಮಾರಾಟವನ್ನು ಖಚಿತಪಡಿಸುವುದು ಹಾಗೂ ಗ್ರಾಹಕರ ಆರೋಗ್ಯ ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+