Republic Double Exit Poll Karnataka: ಎರಡಂಕಿ ತಲುಪದ ಕಾಂಗ್ರೆಸ್, ಬಿಜೆಪಿಯತ್ತ ಜನರ ಒಲವು
ಬೆಂಗಳೂರು, ಜೂನ್ 01: ಕರ್ನಾಟಕ ರಾಜ್ಯದಲ್ಲಿ ಕಳೆದ ಏಪ್ರಿಲ್ ಅಂತ್ಯಕ್ಕೆ ಮತ್ತು ಮೇ ಮೊದಲ ವಾರ ಎರಡು ಹಂತಗಳಲ್ಲಿ ಲೋಕಸಭಾ ಚುನಾವಣೆಗೆ 2024 ಮತದಾನ ನಡೆಯಿತು. ಜೂನ್ 01ರಂದು ಸಾರ್ವತ್ರಿಕ ಚುನಾವಣೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಶನಿವಾರ ಚುನಾವಣೋತ್ತರ ಫಲಿತಾಂಶ ಪ್ರಕಟವಾಗಿದೆ. ಎಲ್ಲ ರಾಜ್ಯಗಳಂತೆ ಕರ್ನಾಟಕದಲ್ಲಿ ಯಾವ ಪಕ್ಷ ಗೆಲ್ಲಲಿದೆ ಎಂಬುದನ್ನು Republic TV with PMARQ Exit Poll Karnataka ಸಮೀಕ್ಷಾ ಫಲಿತಾಂಶ ತಿಳಿಸಿದೆ.
ರಿಪಬ್ಲಿಕ್ ಟಿವಿ ಕರ್ನಾಟಕ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ, ರಾಜ್ಯದಲ್ಲಿ ಒಟ್ಟು 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಯು ಈ ಬಾರಿಯು ಹ್ಯಾಟ್ರಿಕ್ ಭಾರಿಸಲಿದೆ. ಸದರಿ ಚುನಾವಣೆಯಲ್ಲಿ ಬಿಜೆಪಿ 22 ಕ್ಷೇತ್ರಗಳಲ್ಲಿ ಗೆದ್ದು, ಕಾಂಗ್ರೆಸ್ 06 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆಗಳು ಇವೆ ಎಂದು ತಿಳಿಸಿದೆ.

ಗ್ಯಾರೆಂಟಿ ಯೋಜನೆಗಳ ಮೂಲಕ ಕರ್ನಾಟಕದಲ್ಲಿ ಅಧಿಕಾರ ಹಿಡಿದ ಕಾಂಗ್ರೆಸ್ ಗೆ ಹೆಚ್ಚಿನ ಸ್ಥಾನ ಸಿಗದಂತೆ ನೋಡಿಕೊಳ್ಳಲು ಬಿಜೆಪಿ ಪಕ್ಷವು ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿತು. ಈ ಬಾರಿಯು ಗ್ಯಾರೆಂಟಿಗಳು ತಮ್ಮ ಕೈ ಹಿಡಿಯಲಿದೆ. ಡಬಲ್ ಡಿಜಿಟ್ (20) ಸೀಟುಗಳನ್ನು ಗೆಲ್ಲಲಿದ್ದೇವೆ ಎಂದು ಕಾಂಗ್ರೆಸ್ ನಾಯಕರು ಅತೀವ ಹುಮ್ಮಸ್ಸು ಇಟ್ಟುಕೊಂಡಿದ್ದರು.
ಸದ್ಯ ಪ್ರಕಟವಾದ ಚುನಾವಣೋತ್ತರ ಸಮೀಕ್ಷೆ ಕಾಂಗ್ರೆಸ್‌ಗೆ ಆಘಾತ ನೀಡಿದೆ. ಲೋಕಸಭಾ ಚುನಾವಣೆಯಲ್ಲಿ ಮೊದಲಿನಂತೆ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ರಿಪಬ್ಲಿಕ್ ಟಿವಿ ತಿಳಿಸಿದೆ.
#RepublicDoubleExitPoll | "On June 4, BJP might win 24-25 seats in Karnataka": MP and National President of BJP Yuva Morcha Tejasvi Surya (@Tejasvi_Surya) on Exit Poll Predictions
— Republic (@republic) June 1, 2024
India's biggest Exit Poll coverage with Arnab is now #LIVE. Tune in here to WATCH -… pic.twitter.com/u2GfaZ8p5t
ಈ ಬಾರಿ ಬಿಜೆಪಿಗೆ 03 ಸ್ಥಾನ ಕಡಿಮೆ
ವಿಶೇಷವೆಂದರೆ, ಈ ಭಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ತೀವ್ರ ಪೈಪೋಟಿ ಒಡ್ಡಿದ್ದನ್ನು ಅಲ್ಲಗಳೆಯುವಂತಿಲ್ಲ. ಬಿಜೆಪಿ ವಿರುದ್ಧ ಕಾಂಗ್ರೆಸ್ 2019ರ ಚುನಾವಣೆಗಿಂತಲೂ ಹೆಚ್ಚು ಸ್ಥಾನ (06) ಪಡೆಯುತ್ತದೆ ಎನ್ನಲಾಗಿದೆ. ಕಳೆದ ಬಾರಿ ಕಾಂಗ್ರೆಸ್ ಕೇವಲ ಒಂದು ಸ್ಥಾನ ಪಡೆದಿತ್ತು. ಪಕ್ಷೇತರ (ಮಂಡ್ಯ) ಒಂದು ಸೀಟು, ಜೆಡಿಎಸ್‌ಗೆ ಸೀಟು ಸ್ಥಾನ ಲಭಿಸಿತ್ತು. ಉಳಿದಂತೆ ಬಿಜೆಪಿ 25 ಸ್ಥಾನಗಳಲ್ಲಿ ಗೆದ್ದು ಬೀಗಿತ್ತು. ಈ ಬಾರಿ (2024) ಬಿಜೆಪಿಗೆ ಮೂರು ಸ್ಥಾನಗಳು (22) ಕಡಿಮೆ ಬರುವ ನಿರೀಕ್ಷೆ ಇದೆ.
ಕರ್ನಾಟಕ ಕುರಿತು ವಿವಿಧ ಸುದ್ದಿ ಮಾಧ್ಯಮ ಸಂಸ್ಥೆಗಳು, ಏಜೆನ್ಸಿಗಳು ಚುನಾವಣೋತ್ತರವಾಗಿ ಸಮೀಕ್ಷೆ ನಡೆಸಿ ಮಾಹಿತಿ ನೀಡಿವೆ. ಕೇಂದ್ರ ಚುನಾವಣೆ ಆಯೋಗದಿಂತೆ ಇದೇ ಜೂನ್ 04ರಂದು ಅಧಿಕೃತ ಫಲಿತಾಂಶ ಪ್ರಕಟಗೊಳ್ಳಲಿದೆ. ಅಧಿಕೃತ ಮಾಹಿತಿಗೆ ಇನ್ನೂ ಮೂರು ದಿನ ಕಾಯಬೇಕಿದೆ.












Click it and Unblock the Notifications