ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಹೀನಾಯ ಸೋಲು; ಕಾಪ್ಸ್ ಸಮೀಕ್ಷೆ ಹೇಳಿದ್ದೇನು?
ಬೆಂಗಳೂರು, ಜೂನ್ 02: ದೇಶಾದ್ಯಂತ 2024 ರ ಲೋಕಸಭಾ ಚುನಾವಣೆ ಏಳು ಹಂತದಲ್ಲಿ ನಡೆಯಲಿದೆ ನಡೆದಿದ್ದು, ಲೋಕಸಭೆಯ ಸುದೀರ್ಘ ಮತದಾನದ ಪ್ರಕ್ರಿಯೆ ಜೂನ್ 01 ರಂದು ಮುಕ್ತಾಯಗೊಂಡಿದೆ. ಚುನಾವಣಾ ಬಳಕ ಹಲವು ವಾಹಿನಿಗಳು ಚುನಾವಣೋತ್ತರ ಸಮೀಕ್ಷೆ ನಡೆಸಿದ್ದು, ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹಲವು ಸಮೀಕ್ಷೆಗಳು ತಿಳಿಸಿವೆ. ಇತ್ತ ಕರ್ನಾಟಕದ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ ಎಂಬ ಬಗ್ಗೆ ಕಾಪ್ಸ್ ಸಮೀಕ್ಷೆ ತಿಳಿಸಿದ್ದು, ಅಚ್ಚರಿ ಮೂಡಿಸಿದೆ.
ಹೌದು, ಹಾಸನ ಲೋಕಸಭಾ ಕ್ಷೇತ್ರದ ಎನ್ ಡಿ ಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣ ದೇಶಾದ್ಯಂತ ರಾಷ್ಟ್ರಮಟ್ಟದಲ್ಲೂ ಬಾರೀ ಸದ್ದು ಮಾಡಿದ್ದು, ಗುರುವಾರ ತಡರಾತ್ರಿ ಪ್ರಜ್ವಲ್ ಅವರನ್ನ ಎಸ್ ಐ ಟಿ ಅಧಿಕಾರಿಗಳು ಬಂಧಿಸಿದ್ದಾರೆ. ಏಪ್ರಿಲ್ 26 ರಂದು ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಮತ ಚಲಾಯಿಸಿದ ಬಳಿಕ ರ್ಮನಿಯಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ಬರೋಬ್ಬರಿ 34 ದಿನಗಳ ಬಳಿಕ ರಾಜ್ಯಕ್ಕೆ ಆಗಮಿಸಿದ್ದು, ಎಸ್ ಐಟಿ ಅಧಿಕಾರಿಗಳು ಸದ್ಯ ವಿಚಾರಣೆ ನಡೆಸುತ್ತಿದ್ದಾರೆ.

ರಾಜ್ಯದಲ್ಲಿ ಮೊದಲ ಹಂತ ಚುನಾವಣೆಯ ಸಂದರ್ಭದಲ್ಲಿ ಹಾಸನ ಹಾಲಿ ಸಂಸದ ಹಾಗೂ ಹಾಸನ ಎನ್ ಡಿ ಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ಕುಟುಂಬಸ್ಥರು, ಜೆಡಿಎಸ್ ಕಾರ್ಯಕರ್ತರು ಹಾಗೂ ಮೈತ್ರಿಯಾಗಿರುವ ಬಿಜೆಪಿ ನಾಯಕರು ತೀವ್ರ ಮುಜುಗರವನ್ನ ಅನುಭವಿಸಿದ್ದು, ರಾಜ್ಯದಲ್ಲಿ ಮೇ 7 ರಂದು ನಡೆದ ಎರಡನೇ ಹಂತದ ಚುನಾವಣೆ ಪ್ರಚಾರದ ವೇಳೆಯೂ ಮೈತ್ರಿ ನಾಯಕರು ತೀವ್ರ ಮುಜುಗರವನ್ನ ಅನುಭವಿಸಿದ್ರು.
ಇನ್ನೂ ಕಾಪ್ಸ್ (ಸಿಒಪಿಎಸ್) ಸಮೀಕ್ಷೆ ಪ್ರಕಾರ ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿರುವ ಪ್ರಜ್ವಲ್ ರೇವಣ್ಣ ಅವರ ಸೋಲು ಅನುಭವಿಸುತ್ತಾರೆ ಎಂದು ತಿಳಿಸಿದೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಫೈಕಿ ಬಿಜೆಪಿ 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ರೆ, ಕಾಂಗ್ರೆಸ್ 11 ಹಾಗೂ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ತಿಳಿಸಿದೆ.












Click it and Unblock the Notifications